AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಹ್ಯಾಕಾಶ ಪ್ರವೇಶಿಸಲು ಖಾಸಗಿ ವಲಯಕ್ಕೆ ಅನುಮತಿ! ಪ್ರತ್ಯೇಕ ಏಜೆನ್ಸಿ ಅಸ್ತಿತ್ವಕ್ಕೆ

ದೆಹಲಿ: ಮಹಾಮಾರಿ ಕೊರೊನಾಗೆ ಇಡೀ ವಿಶ್ವವೇ ಪತರಗುಟ್ಟಿ ಹೋಗಿದೆ. ಹಾಗಾಗಿ ಇತ್ತೀಚೆಗಷ್ಟೇ ಇಸ್ರೋ ಸಂಸ್ಥೆಯಲ್ಲಿ ಖಾಸಗಿ ವಲಯಕ್ಕೂ ಅವಕಾಶ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು. ಅದರಂತೆ ರಾಕೆಟ್, ಉಪಗ್ರಹಗಳ ನಿರ್ಮಾಣ ಮತ್ತು ಉಡಾವಣೆ ಸೇವೆಗಳಿಗೆ ಖಾಸಗಿ ವಲಯಗಳಿಗೂ ಈಗ ಅವಕಾಶ ನೀಡಲಾಗುವುದು ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಹೇಳಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳ ಚಟುವಟಿಕೆಗಳಿಗೆ ಅನುಮತಿ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರತ್ಯೇಕ ಏಜೆನ್ಸಿ ಅಸ್ತಿತ್ವಕ್ಕೆ ಬರಲಿದೆ. ಇದಕ್ಕಾಗಿ ಅಧಿಕೃತ ಕೇಂದ್ರವನ್ನು ಸ್ಥಾಪಿಸಲು […]

ಬಾಹ್ಯಾಕಾಶ ಪ್ರವೇಶಿಸಲು ಖಾಸಗಿ ವಲಯಕ್ಕೆ ಅನುಮತಿ! ಪ್ರತ್ಯೇಕ ಏಜೆನ್ಸಿ ಅಸ್ತಿತ್ವಕ್ಕೆ
ಸಾಧು ಶ್ರೀನಾಥ್​
| Updated By: |

Updated on:Jun 25, 2020 | 1:16 PM

Share

ದೆಹಲಿ: ಮಹಾಮಾರಿ ಕೊರೊನಾಗೆ ಇಡೀ ವಿಶ್ವವೇ ಪತರಗುಟ್ಟಿ ಹೋಗಿದೆ. ಹಾಗಾಗಿ ಇತ್ತೀಚೆಗಷ್ಟೇ ಇಸ್ರೋ ಸಂಸ್ಥೆಯಲ್ಲಿ ಖಾಸಗಿ ವಲಯಕ್ಕೂ ಅವಕಾಶ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು. ಅದರಂತೆ ರಾಕೆಟ್, ಉಪಗ್ರಹಗಳ ನಿರ್ಮಾಣ ಮತ್ತು ಉಡಾವಣೆ ಸೇವೆಗಳಿಗೆ ಖಾಸಗಿ ವಲಯಗಳಿಗೂ ಈಗ ಅವಕಾಶ ನೀಡಲಾಗುವುದು ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಹೇಳಿದ್ದಾರೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳ ಚಟುವಟಿಕೆಗಳಿಗೆ ಅನುಮತಿ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರತ್ಯೇಕ ಏಜೆನ್ಸಿ ಅಸ್ತಿತ್ವಕ್ಕೆ ಬರಲಿದೆ. ಇದಕ್ಕಾಗಿ ಅಧಿಕೃತ ಕೇಂದ್ರವನ್ನು ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿದೆ.

ಬಾಹ್ಯಾಕಾಶ ಪ್ರಯತ್ನಗಳಲ್ಲಿ ಖಾಸಗಿ ವಲಯವನ್ನು ಕೈಯಲ್ಲಿ ಹಿಡಿದಿಡಲು ಮತ್ತು ಉತ್ತೇಜಿಸಲು ಇದು ರಾಷ್ಟ್ರೀಯ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ಇಸ್ರೋ ತನ್ನ ತಾಂತ್ರಿಕ ಪರಿಣತಿಯನ್ನು ಮತ್ತು ಸೌಲಭ್ಯಗಳನ್ನು ಹಂಚಿಕೊಳ್ಳುತ್ತದೆ ಎಂದು ಕೆ.ಶಿವನ್ ತಿಳಿಸಿದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ದಲ್ಲಿ ಖಾಸಗಿ ವಲಯವೂ ಒಂದು ಭಾಗವಾಗಿದೆ ಎಂದು ಇದೇ ವೇಳೆ ಇಸ್ರೋ ಮುಖ್ಯಸ್ಥ ಕೆ.ಶಿವನ್ ತಿಳಿಸಿದರು.

ಬಾಹ್ಯಾಕಾಶ ಚಟುವಟಿಕೆಯಲ್ಲಿ ಖಾಸಗಿ ವಲಯಗಳ ಸಹಭಾಗಿತ್ವಕ್ಕೆ ಬುಧವಾರ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಆದಾಗ್ಯೂ ಯಾವುದೇ ಕಾರಣಕ್ಕೂ ಇಸ್ರೋ ಸಂಸ್ಥೆ ತನ್ನ ಚಟುವಟಿಕೆಗಳನ್ನು ಕಡಿಮೆ ಮಾಡುವುದಿಲ್ಲ. ಬಾಹ್ಯಾಕಾಶ ಆಧಾರಿತ ಚಟುವಟಿಕೆಗಳನ್ನು ಮುಂದುವರಿಸುತ್ತೇವೆ ಎಂದರು.

Published On - 12:45 pm, Thu, 25 June 20