AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರಿಕ್ ಚೀನಾ.. ಸುಲಭವಾಗಿ ಸಂಧಾನಕ್ಕೆ ಸೈ ಅಂದಿರುವುದು ಯಾಕೆ ಗೊತ್ತಾ!?

ದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿನ ಉದ್ವಿಗ್ನ ವಾತಾವರಣ ತಿಳಿಯಾಗುವ ಆಶಾ ಭಾವನೆ ಮೂಡಿದೆ. ಬೂದಿಮುಚ್ಚಿದ ಕೆಂಡದಂತಿದ್ದ ಪರಿಸ್ಥಿತಿ ಭಾರತ-ಚೀನಾ ಲೆಫ್ಟಿನೆಂಟ್ ಜನರಲ್‌ಗಳ ನಡುವಿನ ಮಾತುಕತೆ ಸಕ್ಸಸ್ ಆಗಿದ್ದು, ಎರಡೂ ದೇಶಗಳು ಗಡಿಯಿಂದ ತಮ್ಮ ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿವೆ. ಅಷ್ಟಕ್ಕೂ ಕಿರಿಕ್ ಚೀನಾ ಸುಲಭವಾಗಿ ಸಂಧಾನಕ್ಕೆ ಸೈ ಅಂದಿದ್ದಾದರೂ ಯಾಕೆ..? ಚೀನಾ ಮತ್ತೆನಾದ್ರೂ ಖತರ್ನಾಕ್ ಪ್ಲ್ಯಾನ್ ಮಾಡಿದೆಯಾ..? ಅನ್ನೋ ಅನುಮಾನಗಳು ಮೂಡಿವೆ. ಹೌದು ಗಡಿಯಲ್ಲಿ ಕಿರಿಕ್, ವ್ಯಾಪಾರದಲ್ಲೂ ಕಿರಿಕ್, ಇನ್ನು ವಿಶ್ವಸಂಸ್ಥೆ ವಿಚಾರಕ್ಕೆ ಬಂದ್ರೆ ಭಾರತದ […]

ಕಿರಿಕ್ ಚೀನಾ.. ಸುಲಭವಾಗಿ ಸಂಧಾನಕ್ಕೆ ಸೈ ಅಂದಿರುವುದು ಯಾಕೆ ಗೊತ್ತಾ!?
Guru
| Updated By: ಸಾಧು ಶ್ರೀನಾಥ್​|

Updated on:Jun 24, 2020 | 7:04 PM

Share

ದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿನ ಉದ್ವಿಗ್ನ ವಾತಾವರಣ ತಿಳಿಯಾಗುವ ಆಶಾ ಭಾವನೆ ಮೂಡಿದೆ. ಬೂದಿಮುಚ್ಚಿದ ಕೆಂಡದಂತಿದ್ದ ಪರಿಸ್ಥಿತಿ ಭಾರತ-ಚೀನಾ ಲೆಫ್ಟಿನೆಂಟ್ ಜನರಲ್‌ಗಳ ನಡುವಿನ ಮಾತುಕತೆ ಸಕ್ಸಸ್ ಆಗಿದ್ದು, ಎರಡೂ ದೇಶಗಳು ಗಡಿಯಿಂದ ತಮ್ಮ ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿವೆ. ಅಷ್ಟಕ್ಕೂ ಕಿರಿಕ್ ಚೀನಾ ಸುಲಭವಾಗಿ ಸಂಧಾನಕ್ಕೆ ಸೈ ಅಂದಿದ್ದಾದರೂ ಯಾಕೆ..? ಚೀನಾ ಮತ್ತೆನಾದ್ರೂ ಖತರ್ನಾಕ್ ಪ್ಲ್ಯಾನ್ ಮಾಡಿದೆಯಾ..? ಅನ್ನೋ ಅನುಮಾನಗಳು ಮೂಡಿವೆ.

ಹೌದು ಗಡಿಯಲ್ಲಿ ಕಿರಿಕ್, ವ್ಯಾಪಾರದಲ್ಲೂ ಕಿರಿಕ್, ಇನ್ನು ವಿಶ್ವಸಂಸ್ಥೆ ವಿಚಾರಕ್ಕೆ ಬಂದ್ರೆ ಭಾರತದ ವಿರುದ್ಧ ಬರೀ ಕತ್ತಿ ಮಸೆಯೋದು ಚೀನಾಗೆ ಹುಟ್ಟುತ್ತಲೇ ಬಂದ ರೋಗ. ಅದರಲ್ಲೂ ಭಾರತವನ್ನ ಸಿಕ್ಕಾಪಟ್ಟೆ ದ್ವೇಷಿಸೋ ಚೀನಾಗೆ ಈಗೀಗ ಸ್ವಲ್ಪ ಬುದ್ಧಿ ಬಂದಂತೆ ಕಾಣ್ತಿದೆ. ಗಡಿಯಲ್ಲಿ ಚೀನಾ ಯೋಧರ ಸಾವಿನ ನಂತರ ‘ಡ್ರ್ಯಾಗನ್ ನಾಡು’ ಚೀನಾ ಥಂಡಾ ಹೊಡೆದುಬಿಟ್ಟಿದೆ. ಭಾರತದ ಜೊತೆ ಯುದ್ಧಕ್ಕಿಂತ ಸಂಧಾನವೇ ಸೂಕ್ತ ಅಂತಿದೆ.

‘ಪರಿಸ್ಥಿತಿ ಸರಿಯಿಲ್ಲ, ತಕ್ಷಣ ಭಾರತದಿಂದ ಚೀನಾಕ್ಕೆ ವಾಪಸ್ ಬಂದುಬಿಡಿ’

ಗಡಿಯಿಂದ ಹಿಂದೆ ಸರಿಯಲು ‘ಡ್ರ್ಯಾಗನ್’ ಸೇನೆ ಒಪ್ಪಿಗೆ! ಭಾರತ-ಚೀನಾ ಗಡಿಯಲ್ಲಿ ಜೂನ್‌ 15 ರಂದು ಭಾರತ-ಚೀನಾ ಸೈನಿಕರ ಮಧ್ಯೆ ಸಂಭವಿಸಿದ ಘರ್ಷಣೆ ನಂತರ ಭಾರತ ಅಲರ್ಟ್ ಆಗಿದೆ. ಯುದ್ಧ ವಿಮಾನ ಹಾಗೂ ಕ್ಷಿಪಣಿಗಳನ್ನು ಗಡಿಗೆ ಕಳಿಸಿದೆ. ವೈರಿಪಡೆಯ ರುಂಡ ಚೆಂಡಾಡಲು ಸೇನೆ ಸಿದ್ಧವಾಗಿದೆ. ಇಂಥ ಹೊತ್ತಲ್ಲೇ ಭಾರತ ಮತ್ತು ಚೀನಾ ಸೇನೆಗಳ ಲೆಫ್ಟಿನೆಂಟ್ ಜನರಲ್ಸ್ ಮಧ್ಯೆ ಸುದೀರ್ಘ 11 ಗಂಟೆಗಳ ಮಾತುಕತೆ ನಡೆದಿದೆ. ಪೂರ್ವ ಲಡಾಖ್‌ನ ‘ಚೂಸೂಲ್‌ ಮೋಲ್ಡ್‌’ನಲ್ಲಿ ನಡೆದ ಮಾತುಕತೆಯಲ್ಲಿ ಭಾರತದ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್, ಚೀನಾ ಲೆಫ್ಟಿನೆಂಟ್ ಲೀಯೂ ಲಿನ್ ಭಾಗವಹಿಸಿದ್ದರು. ಸದ್ಯದ ಮಾತುಕತೆಯಲ್ಲಿ ಸಾಕಷ್ಟು ಪ್ರಗತಿಯಾಗಿದ್ದು, ಎರಡೂ ಸೇನೆಗಳು ಗಡಿ ಬಿಕ್ಕಟ್ಟಿನ ಶಮನಕ್ಕೆ ಸಹಮತ ಸೂಚಿಸಿವೆ. ಗಡಿಯಿಂದ ತಮ್ಮ ತಮ್ಮ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಉಭಯ ದೇಶಗಳು ಒಪ್ಪಿವೆ.

‘ಪಂಗಾಂಗೋ ತ್ಸೋ’ದಿಂದ ಹಿಂದೆ ಸರಿಯಲೇಬೇಕಾದ ಅನಿವಾರ್ಯತೆ ಹೌದು, ಇದೀಗ ನಡೆದಿರುವ ಸಂಧಾನ ಭಾರತದ ಪಾಲಿಗೆ ಮಹತ್ವದ್ದು. ಯಾಕಂದ್ರೆ ಒಪ್ಪಂದದ ಪ್ರಕಾರ, ಚೀನಾ ಈಗ ಅತಿಕ್ರಮಿಸಿಕೊಂಡಿರುವ ‘ಪಂಗಾಂಗೋ ತ್ಸೋ’ ಸರೋವರದ ಸಮೀಪ ಫಿಂಗರ್‌ 4ರವರೆಗಿನ ಭಾರತದ ಭೂಮಿಯಿಂದ ಹಿಂದೆ ಸರಿಯಬೇಕಾಗುತ್ತೆ. ಪೂರ್ವ ಲಡಾಖ್‌ನ ಎಲ್ಲಾ ಏರಿಯಾಗಳಿಂದ ಎರಡೂ ಸೇನೆಗಳು ಹಿಂದೆ ಸರಿಯುವ ವಿಧಾನಗಳ ಬಗ್ಗೆ ಕೂಡಾ ಚರ್ಚೆ ನಡೆಸ್ತಿವೆ. ಹೀಗಾಗಿ ಈ ಮಾತುಕತೆ ಮುಂದುವೆರಯಲಿದೆ. ಮುಖ್ಯವಾಗಿ ‘ಪಂಗಾಂಗೋ ತ್ಸೋ’ ಸರೋವರದಿಂದ ಹಿಂದೆ ಸರಿಯಲು ಚೀನಾ ಒಪ್ಪಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಈಗ ಗಡಿಯಲ್ಲಿ ನಡೆದಿರುವ ಹಿಂಸಾಚಾರದಿಂದ ಚೀನಾ ಕೂಡ ಕಂಗಾಲಾಗಿದೆ. ಭವಿಷ್ಯದಲ್ಲಿ ಇದು ದೊಡ್ಡ ಮಟ್ಟಕ್ಕೆ ತಿರುಗಬಹುದು ಎಂಬ ಆತಂಕವೂ ಚೀನಾವನ್ನ ಕಾಡುತ್ತಿದೆ. ಹೀಗಾಗಿ ಸಂಧಾನಕ್ಕೆ ಸೈ ಎಂದಿದೆ.

ಗಡಿ ತಂಟೆ ಮುಗಿಯುತ್ತಿದ್ದಂತೆ ಭಾರತದ ಮೇಲೆ ಸೈಬರ್ ದಾಳಿಗೆ ಚೀನಾ ಸ್ಕೆಚ್‌ ? ಹೌದು ಇಂಥದ್ದೊಂದು ಚರ್ಚೆ ಹುಟ್ಟಲು ಕಾರಣ ಸಿಂಗಾಪುರ ಕಂಪನಿಯಿಂದ ಸಿಕ್ಕಿರುವ ಮಾಹಿತಿ. ಭಾರತದ ಗಡಿಯಲ್ಲಿ ಮೊದಲಿಗೆ ಚೀನಾದಿಂದ ದಾಳಿ ನಡೆದಿದ್ದು, ಇದಾದ ನಂತರ ಸದ್ಯ ಸಂಧಾನವೂ ನಡೆಯುತ್ತಿದೆ. ಇಷ್ಟೆಲ್ಲದರ ಮಧ್ಯೆ ಸೈಬರ್ ದಾಳಿಗೆ ಚೀನಾ ಸಂಚು ರೂಪಿಸಿದೆ ಎನ್ನಲಾಗ್ತಿದೆ. ಈ ಕುರಿತು ಭಾರತಕ್ಕೆ ಸಿಂಗಾಪುರ ಕಂಪನಿ ಮಾಹಿತಿ ನೀಡಿದೆ. ಮಾಹಿತಿಯನ್ನ ಮಹಾರಾಷ್ಟ್ರ ಸೈಬರ್ ಇಲಾಖೆ ಖಚಿತಪಡಿಸಿದ್ದು, ಮೂರ್ನಾಲ್ಕು ದಿನಗಳಲ್ಲಿ ಬರೋಬ್ಬರಿ 40,300 ಬಾರಿ ಸೈಬರ್ ದಾಳಿಗೆ ಚೀನಾ ಹ್ಯಾಕರ್ಸ್ ಯತ್ನಿಸಿದ್ದಾರಂತೆ. ಇದೇ ರೀತಿ ಇತ್ತೀಚೆಗೆ ಆಸಿಸ್ ಮೇಲೂ ಸೈಬರ್ ದಾಳಿ ನಡೆದಿತ್ತು. ಚೀನಾ ನಡೆಯನ್ನು ಆಸ್ಟ್ರೇಲಿಯಾ ವಿರೋಧಿಸಿದ್ದಕ್ಕೆ ಆಸ್ಟ್ರೇಲಿಯಾ ಮೇಲೆ ಸೈಬರ್ ದಾಳಿ ನಡೆದಿತ್ತು. ಆಸ್ಟ್ರೇಲಿಯಾದ ಪ್ರಮುಖ ಇಲಾಖೆ ಹಾಗೂ ಕಂಪನಿಗಳ ವೆಬ್​ಸೈಟ್ಸ್ ಹ್ಯಾಕ್ ಆಗಿದ್ದವು. ಇದೀಗ ಭಾರತದ ಮೇಲೂ ಚೀನಾ ಹ್ಯಾಕರ್ಸ್ ಗ್ಯಾಂಗ್ ಇಂತಹದ್ದೇ ಪ್ರಯೋಗ ಮಾಡಿ, ಹ್ಯಾಕ್ ಮಾಡಲು ಯತ್ನಿಸುತ್ತಿದೆ.

ತ್ರಿಪಕ್ಷೀಯ ಮಾತುಕತೆ ಯಶಸ್ವಿ! ಇದೇನೇ ಇರಲಿ, ಸದ್ಯ ಗಡಿಯಲ್ಲಿ ವಾತಾವರಣ ತಿಳಿಯಾಗುತ್ತಿದೆ. ಮಂಗಳವಾರ ಭಾರತ-ರಷ್ಯಾ ಹಾಗೂ ಚೀನಾ ನಡುವೆ ತ್ರಿಪಕ್ಷೀಯ ಮಾತುಕತೆ ಕೂಡ ನಡೆದಿದೆ. ಇದೇ ಸಂದರ್ಭದಲ್ಲಿ ರಷ್ಯಾ ಎರಡೂ ದೇಶಗಳ ಬಗ್ಗೆಯೂ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾ ಮಧ್ಯಸ್ಥಿಕೆ ಅವಶ್ಯಕತೆಯಿಲ್ಲ ಎಂದಿದೆ. ಭಾರತ ಹಾಗೂ ಚೀನಾಗಳೆರಡೂ ತಾವೇ ಕೂತು ಗಡಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುತ್ತವೆ ಎಂದಿದೆ. ಈ ಮೂಲಕ ತನ್ನ ಪರಮವೈರಿ ಅಮೆರಿಕಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದೆ. ಅದೇನೇ ಇರಲಿ, ಭಾರತ, ರಷ್ಯಾ ಮತ್ತು ಚೀನಾ ಮಧ್ಯೆ ವರ್ಚ್ಯುವಲ್ ಸಭೆ ಮುಗಿಯುತ್ತಿದ್ದಂತೆ, ಗಡಿಯಲ್ಲೂ ಶಾಂತಿ ನೆಲೆಸುವ ಮುನ್ಸೂಚನೆ ಸಿಕ್ಕಿದೆ. ಇದು ನಿಜಕ್ಕೂ ನೆಮ್ಮದಿಯ ಸಂಗತಿಯೇ ಸರಿ.

Published On - 7:00 pm, Wed, 24 June 20