ಬೆಂಗಳೂರು: ಕೊರೊನಾ ಸೋಂಕಿತ ವ್ಯಕ್ತಿಯ ಮನೆ ಮುಂದೆಯೇ ಎಸ್ಎಸ್‌ಎಲ್‌ಸಿ ಪರೀಕ್ಷೆ ನಡೆಸುತ್ತಿರುವ SSLC Board ಕ್ರಮದಿಂದಾಗಿ 170 ವಿದ್ಯಾರ್ಥಿಗಳು ಭಯ ಮತ್ತು ಆತಂಕದಲ್ಲಿಯೇ ಪರೀಕ್ಷೆ ಬರಿಯುವಂತಾಗಿದೆ.
ಬೆಂಗಳೂರಿನ ಮೂಡಲಪಾಳ್ಯದ ಸಂಜೀವಿನಿ ನಗರದ 28 ವರ್ಷದ ಮಹಿಳೆಗೆ ಕಳೆದ ರಾತ್ರಿ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಹೀಗಾಗಿ ಆ ವ್ಯಕ್ತಿಯ ಮನೆಯನ್ನ ಸೀಲ್‌ಡೌನ್ ಮಾಡಲಾಗಿದೆ. ಆದ್ರೆ ಈ ವ್ಯಕ್ತಿಯ ಮನೆ ಸೇಂಟ್ ಜೇವಿಯರ್ ಶಾಲೆಯ ಮುಂಭಾಗದಲ್ಲಿದೆ. ಹೀಗಾಗಿ ಶಾಲಾ ಮಂಡಳಿ ಶಾಲೆಯ ಎದುರಿಗೆ ಬ್ಯಾರಿಕೇಡ್ ಹಾಕಿ, ಆವರಣವನ್ನ ಸ್ಯಾನಿಟೈಸ್ ಮಾಡಿದೆ.
ಆದ್ರೆ ಪರೀಕ್ಷಾ ಕೇಂದ್ರವನ್ನ ಬೇರೆಡೆ ಸ್ಥಳಾಂತರಿಸದೇ.. ಅದೇ ಶಾಲೆಯಲ್ಲಿ ಪರೀಕ್ಷೆಗಳನ್ನ ನಡೆಸುತ್ತಿದೆ. 170 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದು, ಕೊರೊನಾ ಭೀತಿಯಲ್ಲಿಯೇ ಪರೀಕ್ಷೆ ಬರೆಯುತ್ತಿದ್ದಾರೆ. ಆದ್ರೂ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಮನೆ ಮಾಡಿದೆ.