ಕಂಟೈನ್ಮೆಂಟ್ ಜೋನ್ ಪಕ್ಕದಲ್ಲೇ ಇದೆ ಈ SSLC ಪರೀಕ್ಷಾ ಕೇಂದ್ರ

|

Updated on: Jun 25, 2020 | 11:15 AM

ಬಳ್ಳಾರಿ: ಕಂಟೈನ್ಮೆಂಟ್ ಜೋನ್ ಪಕ್ಕದಲ್ಲಿಯೇ SSLC ಪರೀಕ್ಷಾ ಕೇಂದ್ರವನ್ನು ನಿಗದಿ ಪಡಿಸಿ ಜಿಲ್ಲಾಡಳಿತ ಎಡವಟ್ಟು ಮಾಡಿರುವ ಘಟನೆ ನಗರದ ಸತ್ಯನಾರಾಯಣ ಪೇಟೆಯಲ್ಲಿ ನಡೆದಿದೆ. ಪರೀಕ್ಷಾ ಕೇಂದ್ರವಾಗಿ ನಿಗದಿ ಪಡಿಸಲಾಗಿರುವ ನಗರದ ಶಾರದಾ ವಿದ್ಯಾಪೀಠ ಶಾಲೆಯ ಕೆಲವೇ ಕೆಲವು ಮೀಟರ್​ಗಳ ಅಂತರದಲ್ಲಿ ಕಂಟೈನ್ಮೆಂಟ್ ಜೋನ್ ಒಂದು ಇದೆ. ಹೀಗಾಗಿ, ಪರೀಕ್ಷಾ ಕೇಂದ್ರವನ್ನು ಬೇರೆಡೆ ಸ್ಥಳಾಂತರಿಸಲು ಪೋಷಕರು ಒತ್ತಾಯಿಸಿದ್ದಾರೆ. ಆದರೆ ಜಿಲ್ಲಾಡಳಿತವು ಅದೇ ಕೇಂದ್ರದಲ್ಲಿ ಪರೀಕ್ಷೆ ನಡೆಸಲು ಮುಂದಾಗಿದ್ದು ಇದರಿಂದ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಈ ಪರೀಕ್ಷಾ […]

ಕಂಟೈನ್ಮೆಂಟ್ ಜೋನ್ ಪಕ್ಕದಲ್ಲೇ ಇದೆ ಈ SSLC ಪರೀಕ್ಷಾ ಕೇಂದ್ರ
Follow us on

ಬಳ್ಳಾರಿ: ಕಂಟೈನ್ಮೆಂಟ್ ಜೋನ್ ಪಕ್ಕದಲ್ಲಿಯೇ SSLC ಪರೀಕ್ಷಾ ಕೇಂದ್ರವನ್ನು ನಿಗದಿ ಪಡಿಸಿ ಜಿಲ್ಲಾಡಳಿತ ಎಡವಟ್ಟು ಮಾಡಿರುವ ಘಟನೆ ನಗರದ ಸತ್ಯನಾರಾಯಣ ಪೇಟೆಯಲ್ಲಿ ನಡೆದಿದೆ. ಪರೀಕ್ಷಾ ಕೇಂದ್ರವಾಗಿ ನಿಗದಿ ಪಡಿಸಲಾಗಿರುವ ನಗರದ ಶಾರದಾ ವಿದ್ಯಾಪೀಠ ಶಾಲೆಯ ಕೆಲವೇ ಕೆಲವು ಮೀಟರ್​ಗಳ ಅಂತರದಲ್ಲಿ ಕಂಟೈನ್ಮೆಂಟ್ ಜೋನ್ ಒಂದು ಇದೆ.

ಹೀಗಾಗಿ, ಪರೀಕ್ಷಾ ಕೇಂದ್ರವನ್ನು ಬೇರೆಡೆ ಸ್ಥಳಾಂತರಿಸಲು ಪೋಷಕರು ಒತ್ತಾಯಿಸಿದ್ದಾರೆ. ಆದರೆ ಜಿಲ್ಲಾಡಳಿತವು ಅದೇ ಕೇಂದ್ರದಲ್ಲಿ ಪರೀಕ್ಷೆ ನಡೆಸಲು ಮುಂದಾಗಿದ್ದು ಇದರಿಂದ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಈ ಪರೀಕ್ಷಾ ಕೇಂದ್ರದಲ್ಲಿ ಸುಮಾರು 482 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

Published On - 8:38 am, Thu, 25 June 20