
ಬೆಂಗಳೂರು: ಕೊರೊನಾ ಹೆಮ್ಮಾರಿ ಬೆಂಗಳೂರಿನಲ್ಲಿ ತನ್ನ ರಣಕೇಕೆಯನ್ನು ಮುಂದುವರಿಸಿದೆ. ಇದುವರೆಗೆ ಗಲ್ಲಿಯಲ್ಲಿ ತನ್ನ ಸುಳಿದಾಟ ನಡೆಸಿದ್ದ ಕೊರೊನಾ ಈಗ ರಾಜ್ಯ ಪೊಲೀಸ್ ಕಚೇರಿಗೆ ನುಗ್ಗಿದೆ.
ಹೌದು, ಬೆಂಗಳೂರಿನ ನೃಪತುಂಗ ರೋಡ್‌ನಲ್ಲಿರುವ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯ ಸಿಬ್ಬಂದಿ ಮೇಲೆ ಕೊರೊನಾ ಅಟ್ಯಾಕ್ ಮಾಡಿದೆ. ಆವರಣದಲ್ಲಿರುವ ಸ್ಟೇಟ್ ಇಂಟಲಿಜೆನ್ಸ್ ಕಚೇರಿಯ ಸಬ್ ಇನ್ಸ್‌ಪೆಕ್ಟರ್‌ಗೆ ಕೊರೊನಾ ಸೋಂಕು ತಗುಲಿದೆ.
ಸಬ್ ಇನ್ಸ್‌ಪೆಕ್ಟರ್‌ಗೆ ಕೊರೊನಾ ಸೋಂಕು ತಗುಲಿರೋದು ಕನ್‌ಫರ್ಮ್ ಆಗುತ್ತಿದ್ದಂತೆಯೇ, ಅಧಿಕಾರಿಗಳು, ಸ್ಟೇಟ್ ಇಂಟಲಿಜೆನ್ಸ್ ಕಚೇರಿಯನ್ನ ಸ್ಯಾನಿಟೈಸ್ ಮಾಡಿ ಸೀಲ್‌ಡೌನ್ ಮಾಡಲು ತಯಾರಿ ನಡೆಸಿದ್ದಾರೆ.