Top News: ಕೊರೊನಾ ಲಾಕ್ಡೌನ್ನಿಂದ ಮನೋರೋಗಿಗಳ ಸಂಖ್ಯೆ ಹೆಚ್ಚಾಯ್ತಾ?
ಕೊರೊನಾ ಬಂದಾಗಿನಿಂದ ಸೋಂಕು ನಿಗ್ರಹಿಸುವ ಸಲುವಾಗಿ ಲಾಕ್ಡೌನ್ ಹೇರಲಾಗಿತ್ತು. ಆದ್ರೆ, ಇದ್ರಿಂದ ಸಾಮಾಜಿಕ ಮತ್ತು ಮಾನಸಿಕ ಸ್ಥಿತಿಯ ಮೇಲೂ ಪರಿಣಾಮ ಬೀರಿದೆ ಅಂತಾ ವೈದ್ಯರು ಹೇಳಿದ್ದಾರೆ. ಸೋಂಕಿನ ಭೀತಿ ಒಂದ್ಕಡೆಯಾದ್ರೆ, ಲಾಕ್ಡೌನ್ನಿಂದ ಕೆಲಸ ಕಾರ್ಯವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದವರು ಮಾನಸಿಕವಾಗಿ ಜರ್ಜರಿತವಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರೆ ಅಂತಾ ಮನೋವೈದ್ಯರು ಹೇಳ್ತಿದ್ದಾರೆ. ಸಲೂನ್ಗಳು ಓಪನ್ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು 1 ಲಕ್ಷದ 53 ಸಾವಿರಕ್ಕೆ ಏರಿಕೆಯಾಗಿದೆ. ಸೋಂಕಿನಿಂದಾಗಿ 7 ಸಾವಿರ ಜನರು ಬಲಿಯಾಗಿದ್ದಾರೆ. ಇದ್ರಿಂದಾಗಿ ಲಾಕ್ಡೌನ್ ವಿಧಿಸಿದ್ದರಿಂದಾಗಿ ಕಟಿಂಗ್ ಸಲೂನ್ಗಳೂ ಓಪನ್ […]
ಕೊರೊನಾ ಬಂದಾಗಿನಿಂದ ಸೋಂಕು ನಿಗ್ರಹಿಸುವ ಸಲುವಾಗಿ ಲಾಕ್ಡೌನ್ ಹೇರಲಾಗಿತ್ತು. ಆದ್ರೆ, ಇದ್ರಿಂದ ಸಾಮಾಜಿಕ ಮತ್ತು ಮಾನಸಿಕ ಸ್ಥಿತಿಯ ಮೇಲೂ ಪರಿಣಾಮ ಬೀರಿದೆ ಅಂತಾ ವೈದ್ಯರು ಹೇಳಿದ್ದಾರೆ. ಸೋಂಕಿನ ಭೀತಿ ಒಂದ್ಕಡೆಯಾದ್ರೆ, ಲಾಕ್ಡೌನ್ನಿಂದ ಕೆಲಸ ಕಾರ್ಯವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದವರು ಮಾನಸಿಕವಾಗಿ ಜರ್ಜರಿತವಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರೆ ಅಂತಾ ಮನೋವೈದ್ಯರು ಹೇಳ್ತಿದ್ದಾರೆ.
ಸಲೂನ್ಗಳು ಓಪನ್ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು 1 ಲಕ್ಷದ 53 ಸಾವಿರಕ್ಕೆ ಏರಿಕೆಯಾಗಿದೆ. ಸೋಂಕಿನಿಂದಾಗಿ 7 ಸಾವಿರ ಜನರು ಬಲಿಯಾಗಿದ್ದಾರೆ. ಇದ್ರಿಂದಾಗಿ ಲಾಕ್ಡೌನ್ ವಿಧಿಸಿದ್ದರಿಂದಾಗಿ ಕಟಿಂಗ್ ಸಲೂನ್ಗಳೂ ಓಪನ್ ಇರಲಿಲ್ಲ. ಆದ್ರೆ, ಇಂದಿನಿಂದ ಮುಂಬೈ ನಗರದಲ್ಲಿ ಕಟಿಂಗ್ ಸಲೂನ್ಗಳನ್ನ ತೆರೆಯಲಾಗಿದೆ. ಗ್ರಾಹಕರು ಮತ್ತು ಸಲೂನ್ನವರು ಮಾಸ್ಕ್ ಧರಿಸಿ, ಪಿಪಿಇ ಕಿಟ್ ಧರಿಸಿದ್ದು ಕಂಡು ಬಂತು.
ಕೊರೊನಾ ಸ್ಫೋಟ..! ಭಾರತ ದಿನೇ ದಿನೆ ಕೊರೊನಾ ಹಾಟ್ಸ್ಪಾಟ್ ಆಗ್ತಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷದ 29 ಸಾವಿರದ 577ಕ್ಕೆ ಏರಿಕೆಯಾಗಿದ್ರೆ, ಸೋಂಕಿನಿಂದಾಗಿ 16,103 ಜನರು ಬಲಿಯಾಗಿದ್ದಾರೆ. ಕ್ರೂರಿ ವೈರಸ್ನಿಂದ 3,10,146 ಜನರು ಗುಣಮುಖರಾಗಿದ್ರೆ, ಪ್ರಸ್ತುತ 1 ಲಕ್ಷದ 6 ಸಾವಿರದ 103 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನೇ ದಿನೆ ಸೋಂಕಿನ ಸಂಖ್ಯೆ ಪ್ರತಿ ರಾಜ್ಯಗಳಲ್ಲೂ 500 ರಿಂದ 1 ಸಾವಿರಕ್ಕೆ ಏರಿಕೆಯಾಗ್ತಿರೋದು ಆತಂಕಕ್ಕೆ ಕಾರಣವಾಗಿದೆ.
410 ಜನ ಬಲಿ ಭಾರತದಲ್ಲಿ ವೈರಸ್ನ ರಣಕೇಕೆ ಎಷ್ಟರ ಮಟ್ಟಿಗೆ ಇದೆ ಅನ್ನೋದಕ್ಕೆ ಕೇವಲ 24 ಗಂಟೆಗಳ ಅವಧಿಯಲ್ಲಿ 410 ಜನರು ಸೋಂಕಿಗೆ ಬಲಿಯಾಗಿರೋದೇ ಸಾಕ್ಷಿ. ಹೌದು, ನಿನ್ನೆ ಒಂದೇ ದಿನ 19,906 ಜನರು ಸೋಂಕಿನ ಸುಳಿಗೆ ಸಿಲುಕಿದ್ರೆ, ನಾನೂರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ ಅಂತಾ ಕೇಂದ್ರ ಆರೋಗ್ಯ ಇಲಾಖೆ ಹೇಳಿದ್ದು, ಸಾವಿನ ಸಂಖ್ಯೆಯೂ ಏರಿಕೆಯಾಗ್ತಿರೋದು ಕಳವಳಕ್ಕೆ ಕಾರಣವಾಗಿದೆ.
ಚೆನ್ನೈನಲ್ಲಿ ಸಂಡೇ ಲಾಕ್ಡೌನ್ ತಮಿಳುನಾಡಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗ್ತಿದ್ದು, ರಾಜಧಾನಿ ಚೆನ್ನೈನಲ್ಲಿ ಆತಂಕ ತಂದಿದೆ. ರಾಜ್ಯದಲ್ಲಿ ಈವರೆಗೂ 78,335 ಜನರಿಗೆ ಸೋಂಕು ತಗುಲಿದ್ದು, 1,025 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ, ಸೋಂಕು ನಿಗ್ರಹಿಸಲು ಚೆನ್ನೂ ಸೇರಿ ಕೆಲ ಜಿಲ್ಲೆಗಳಲ್ಲಿ ಪ್ರತಿ ಭಾನುವಾರ ಲಾಕ್ಡೌನ್ ಹೇರಲಾಗಿದ್ದು, ಅಗತ್ಯ ವಸ್ತುಗಳ ಸರಬರಾಜು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಅನಗತ್ಯವಾಗಿ ಓಡಾಡುವವರಿಗೆ ಪೊಲೀಸರು ವಾಪಸ್ ಕಳಿಸಿದ್ರು.
ಹಸಿವಿಗಿಂತ ಕೊರೊನಾ ವಾಸಿ..! ಕೊರೊನಾ ವೈರಸ್ನಿಂದಾಗಿ ಭಾರತದಲ್ಲಿದ್ದ ವಲಸೆ ಕಾರ್ಮಿಕರು ಕೆಲಸ ಕಳೆದುಕೊಂಡು ಹುಟ್ಟೂರಿಗೆ ಪ್ರಯಾಣ ಬೆಳೆಸಿದ್ರು. ಆದ್ರೀಗ, ವೈರಸ್ ಇನ್ನೂ ತನ್ನ ಅಟ್ಟಹಾಸ ನಿಲ್ಲಿಸಿಲ್ಲ. ಇದ್ರ ಮಧ್ಯೆಯೂ ಉತ್ತರ ಪ್ರದೇಶದಲ್ಲಿ ಸುಮಾರು 30 ಲಕ್ಷ ವಲಸೆ ಕಾರ್ಮಿಕರು ಮತ್ತೆ ಕೆಲಸಗಳತ್ತ ತೆರಳುತ್ತಿದ್ದಾರೆ. ಕೊರೊನಾ ವೈರಸ್ಗಿಂತಲೂ ಹಸಿವು ಹೆಚ್ಚು ಕಾಡುತ್ತಿದೆ. ಹೀಗಾಗಿ, ಹಸಿವಿಗಿಂತಲೂ ಕೊರೊನಾ ವಾಸಿ ಎನ್ನುತ್ತಾ ಜನ ಧೈರ್ಯದಿಂದ ಕೆಲಸಕ್ಕೆ ತೆರಳುತ್ತಿದ್ದಾರೆ.
Published On - 2:11 pm, Sun, 28 June 20