ಚೀನಾ ಸೇನೆ ಹುಟ್ಟಡಗಿಸಲು ಸಿದ್ಧವಾಗಿದೆ ವಾಯುದಳ! ಕ್ಷಿಪಣಿ, ಯುದ್ಧ ವಿಮಾನ ನಿಯೋಜನೆ

ಚೀನಾ ಸೇನೆ ಹುಟ್ಟಡಗಿಸಲು ಸಿದ್ಧವಾಗಿದೆ ವಾಯುದಳ! ಕ್ಷಿಪಣಿ, ಯುದ್ಧ ವಿಮಾನ ನಿಯೋಜನೆ

ಇಡೀ ಜಗತ್ತಿನ ಕಣ್ಣು ಕಿರಿಕ್ ಪಾರ್ಟಿ ಚೀನಾದ ಮೇಲೆ ನೆಟ್ಟಿದೆ. ಸುಖಾಸುಮ್ಮನೆ ಕಾಲು ಕೆರೆದು ಎಲ್ಲರೊಂದಿಗೆ ಕಿರಿಕಿರಿ ಮಾಡುವ ಚೀನಾಗೆ ಬುದ್ಧಿ ಕಲಿಸಲು ಚೀನಾ ವಿರೋಧಿಗಳು ಕಾಯುತ್ತಿದ್ದಾರೆ. ಈ ನಡುವೆ ಗಡಿಯಲ್ಲಿ ಚೀನಾಗೆ ಭಾರತ ಬಿಗ್ ಶಾಕ್ ನೀಡಿದೆ. ಇನ್ನು ಭಾರತ ನೀಡಿದ ಈ ಶಾಕ್​ಗೆ ಡಬಲ್ ಗೇಮ್ ಚೀನಾ ಫುಲ್ ಸೈಲೆಂಟ್ ಆಗೋಗಿದೆ. ಇಡೀ ಜಗತ್ತೇ ಒಂದು ರೀತಿಯಾದ್ರೆ, ಚೀನಿಯರು ಮತ್ತೊಂದು ಥರ. ಅದ್ರಲ್ಲೂ ಅಲ್ಲಿನ ರಾಜಕಾರಣಿಗಳಂತೂ ನೆರೆ ರಾಜ್ಯಗಳ ಬೆನ್ನಿಗೆ ಚೂರಿ ಇರಿಯುವುದಕ್ಕೆ ಫೇಮಸ್. […]

Ayesha Banu

|

Jun 28, 2020 | 6:52 AM

ಇಡೀ ಜಗತ್ತಿನ ಕಣ್ಣು ಕಿರಿಕ್ ಪಾರ್ಟಿ ಚೀನಾದ ಮೇಲೆ ನೆಟ್ಟಿದೆ. ಸುಖಾಸುಮ್ಮನೆ ಕಾಲು ಕೆರೆದು ಎಲ್ಲರೊಂದಿಗೆ ಕಿರಿಕಿರಿ ಮಾಡುವ ಚೀನಾಗೆ ಬುದ್ಧಿ ಕಲಿಸಲು ಚೀನಾ ವಿರೋಧಿಗಳು ಕಾಯುತ್ತಿದ್ದಾರೆ. ಈ ನಡುವೆ ಗಡಿಯಲ್ಲಿ ಚೀನಾಗೆ ಭಾರತ ಬಿಗ್ ಶಾಕ್ ನೀಡಿದೆ. ಇನ್ನು ಭಾರತ ನೀಡಿದ ಈ ಶಾಕ್​ಗೆ ಡಬಲ್ ಗೇಮ್ ಚೀನಾ ಫುಲ್ ಸೈಲೆಂಟ್ ಆಗೋಗಿದೆ.

ಇಡೀ ಜಗತ್ತೇ ಒಂದು ರೀತಿಯಾದ್ರೆ, ಚೀನಿಯರು ಮತ್ತೊಂದು ಥರ. ಅದ್ರಲ್ಲೂ ಅಲ್ಲಿನ ರಾಜಕಾರಣಿಗಳಂತೂ ನೆರೆ ರಾಜ್ಯಗಳ ಬೆನ್ನಿಗೆ ಚೂರಿ ಇರಿಯುವುದಕ್ಕೆ ಫೇಮಸ್. ಹೀಗೆ ಭಾರತದ ಜೊತೆಗೂ ಸುಖಾಸುಮ್ಮನೆ ಕಾಲು ಕೆರೆದು ಜಗಳಕ್ಕೆ ಬಂದಿರುವ ನರಿ ಬುದ್ಧಿ ಚೀನಿಯರಿಗೆ ತಕ್ಕ ಪಾಠ ಕಲಿಸಲು ಭಾರತೀಯ ಸೇನೆ ಸಜ್ಜಾಗಿ ನಿಂತಿದೆ.

ಚೀನಾ ಸೇನೆ ಹುಟ್ಟಡಗಿಸಲು ಸಿದ್ಧವಾಗಿದೆ ವಾಯುದಳ! ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸಂಘರ್ಷ ಮತ್ತಷ್ಟು ತಾರಕಕ್ಕೇರಿದ್ದು, ಉಭಯ ದೇಶಗಳು ಗಡಿಯಲ್ಲಿ ಸೇನೆ ಜಮಾವಣೆ ಮಾಡ್ತಿವೆ. ಗಡಿಯಲ್ಲಿ ಭಾರತೀಯ ವೀರ ಯೋಧರ ಮೇಲೆ ದಾಳಿ ಮಾಡಿದ್ದೂ ಅಲ್ಲದೆ, ನರಿ ಬುದ್ಧಿ ಚೀನಾ ತನ್ನ ಯುದ್ಧ ವಿಮಾನಗಳನ್ನೂ ಗಡಿಯಲ್ಲಿ ಹಾರಾಡಿಸುತ್ತಿದೆ. ಅದರಲ್ಲಿ ಎಲ್​ಎಸಿ ಸಮೀಪವೇ ಹೆಲಿಕಾಪ್ಟರ್ಸ್ ಸುತ್ತಾಡುತ್ತಿದ್ದು ಚೀನಾದ ವಾಯುಸೇನೆ ಭಾರತದ ಗಡಿ ಸಮೀಪ ಸಿಕ್ಕಾಪಟ್ಟೆ ಌಕ್ಟಿವ್ ಆಗಿದೆ.

ಈ ಹಿನ್ನೆಲೆಯಲ್ಲಿ ನಮ್ಮ ಸೇನೆ ಕೂಡ ಗಡಿಯಲ್ಲಿ ವೆಪನ್ ಹಾಗೂ ಯುದ್ಧ ವಿಮಾನಗಳನ್ನ ಜಮಾವಣೆ ಮಾಡುತ್ತಿದೆ. ಸುಖೋಯ್ ಸರಣಿಯ ಯುದ್ಧ ವಿಮಾನಗಳನ್ನು ಚೀನಾ ಗಡಿ ಸಮೀಪ ಕಳುಹಿಸಲಾಗಿದ್ದು, ಕ್ಷಿಪಣಿ ನಿರೋಧಕ ವ್ಯವಸ್ಥೆ ಬಲಪಡಿಸಲಾಗುತ್ತಿದೆ. ವಾಯುಪಡೆ ಜತೆ ಭೂಸೇನೆಯೂ ಅಲರ್ಟ್ ಆಗಿದ್ದು, ಭಾರತದ ಸಾಮರ್ಥ್ಯದೆದುರು ಚೀನಿಯರು ಬಾಲ ಬಿಚ್ಚೋಕೆ ಆಗೋದು ಡೌಟ್. ಇದೇ ಕಾರಣಕ್ಕೆ ಸುತ್ತಿ ಬಳಸಿ ಮತ್ತೆ ಕಿರಿಕ್ ಮಾಡ್ತಿದ್ದಾರೆ.

ಇಡೀ ವಿಶ್ವದ ಕಣ್ಣು ಭಾರತ-ಚೀನಾ ಗಡಿ ಮೇಲೆ! ಭಾರತ ಹಾಗೂ ಚೀನಾ ನಡುವಿನ ಸಂಘರ್ಷ ಬರೀ ಏಷ್ಯಾ ರಾಷ್ಟ್ರಗಳನ್ನ ಆಕರ್ಷಿಸಿಲ್ಲ. ಇಡೀ ವಿಶ್ವವೇ ಈ ಕಡೆ ತಿರುಗಿ ನೋಡುತ್ತಿದೆ. 2 ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳು ಯುದ್ಧಕ್ಕೆ ನಿಂತರೆ ಆಗಬಹುದಾದ ಅನಾಹುತಗಳ ಕುರಿತು ವಿಶ್ವವೇ ಭಯಗೊಂಡಿದೆ.

ವಿಶ್ವಸಂಸ್ಥೆ ಕೂಡ ಎರಡೂ ರಾಷ್ಟ್ರಗಳು ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ ಇತ್ಯರ್ಥ ಮಾಡಿಕೊಳ್ಳಬೇಕು ಅಂದಿದೆ. ಆದ್ರೆ ವಿಶ್ವಸಂಸ್ಥೆ ಮಾತಿಗೆ ಕವಡೆಕಾಸಿನ ಕಿಮ್ಮತ್ತು ನೀಡದ ಡಬಲ್ ಗೇಮ್ ಚೀನಾ ತನ್ನ ಯುದ್ಧ ವಿಮಾನಗಳನ್ನ ಗಡಿಯಲ್ಲಿ ನಿಯೋಜಿಸಿದೆ. ಚೀನಾ ಸೇನೆಯೂ ಅಲರ್ಟ್ ಆಗಿರೋದು ಸಂಘರ್ಷದ ಸಾಧ್ಯತೆ ಹೆಚ್ಚಾಗುವಂತೆ ಮಾಡಿದೆ. ಒಂದ್ಕಡೆ ಶಾಂತಿ ಮಂತ್ರ ಪಠಿಸುವ ಚೀನಾ, ಮತ್ತೊಂದ್ಕಡೆ ಸದ್ದಿಲ್ಲದ ಕಿರಿಕ್ ಮಾಡ್ತಿದೆ.

ಒಟ್ನಲ್ಲಿ ಗಡಿಯಲ್ಲಿ ಎಲ್ಲವೂ ಸರಿಯಿಲ್ಲ. ಒಂದ್ಕಡೆ ಭಾರತ ಚೀನಾ ಸೇನಾಧಿಕಾರಿಗಳು ಮಾತುಕತೆ ನಡೆವಾಗಲೇ ಚೀನಾ ಸೈನಿಕರು ಕಿರಿಕ್ ಮಾಡ್ತಿದ್ದಾರೆ. ಭಾರತದ ಗಡಿಯೊಳಗೆ ನುಸುಳುತ್ತಿದ್ದಾರೆ. ಚೀನಾ ಹೀಗೆ ಕಿರಿಕ್ ಮಾಡ್ತಾ ಇದೆ. ಹಾಗೇ ಸದ್ಯ ಮಾಡುತ್ತಿರುವ ಕಿರಿಕಿರಿಗೆ ಡ್ರ್ಯಾಗನ್ ನಾಡು ಚೀನಾ ತಕ್ಕ ಬೆಲೆ ತೆರಬೇಕಾದ ದಿನಗಳು ದೂರವಿಲ್ಲ ಬಿಡಿ.

Follow us on

Most Read Stories

Click on your DTH Provider to Add TV9 Kannada