ಸ್ಟೇರಿಂಗ್ ಕಟ್​ ಆಗಿ ಲಾರಿ ಪಲ್ಟಿ, ಇಬ್ಬರ ಸಾವು

ರಾಯಚೂರು: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕಲ್ಲೂರು ಬಳಿ ಘಟನೆ ನಡೆದಿದೆ. ಚಾಲಕ ಸುರೇಶ್​(40) ಮತ್ತು ಕ್ಲೀನರ್ ಮಾರಿಯಾ(30) ಮೃತಪಟ್ಟವರು. ಲಾರಿಯ ಸ್ಟೇರಿಂಗ್ ಕಟ್ಟಾಗಿ ರಸ್ತೆ ‌ಪಕ್ಕಕ್ಕೆ ಲಾರಿ ಪಲ್ಟಿ ಹೊಡೆದಿದೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಟೇರಿಂಗ್ ಕಟ್​ ಆಗಿ ಲಾರಿ ಪಲ್ಟಿ, ಇಬ್ಬರ ಸಾವು
ಸಾಧು ಶ್ರೀನಾಥ್​

Updated on: Oct 12, 2020 | 1:48 PM

ರಾಯಚೂರು: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕಲ್ಲೂರು ಬಳಿ ಘಟನೆ ನಡೆದಿದೆ.

ಚಾಲಕ ಸುರೇಶ್​(40) ಮತ್ತು ಕ್ಲೀನರ್ ಮಾರಿಯಾ(30) ಮೃತಪಟ್ಟವರು. ಲಾರಿಯ ಸ್ಟೇರಿಂಗ್ ಕಟ್ಟಾಗಿ ರಸ್ತೆ ‌ಪಕ್ಕಕ್ಕೆ ಲಾರಿ ಪಲ್ಟಿ ಹೊಡೆದಿದೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 1:47 pm, Mon, 12 October 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us