ದೇವಸ್ಥಾನದ ಮುಂದೆ ಅಂಗಡಿ ಇಟ್ಟುಕೊಂಡಿದ್ದಕ್ಕೆ ಕಿರಿಕ್: ಅಂಗಡಿ ಮಾಲೀಕನ ಮೇಲೆ ಹಲ್ಲೆ

|

Updated on: Oct 25, 2020 | 4:22 PM

ದೊಡ್ಡಬಳ್ಳಾಪುರ: ದೇಗುಲದ ಹತ್ತಿರ ಬೀದಿಬದಿ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ದೊಡ್ಡಬಳ್ಳಾಪುರದ ಕನಸವಾಡಿಯ ಶನಿಮಹಾತ್ಮ ದೇವಸ್ಥಾನದ ಬಳಿ ಘಟನೆ ನಡೆದಿದೆ. ಅಂಗಡಿ ಮಾಲೀಕ ಮುನಿಯಪ್ಪ ಎಂಬುವವನ ಮೇಲೆ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್‌ನಿಂದ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ. ಇತ್ತೀಚೆಗೆ, ಪ್ರಕಾಶ್ ಕಡೆಯವರು ಹೊಸ ಅಂಗಡಿ ತೆರೆದಿದ್ದರು. ಆ ಅಂಗಡಿಗೆ ಸರಿಯಾಗಿ ವ್ಯಾಪಾರವಾಗುತ್ತಿಲ್ಲವೆಂದು ಬೀದಿಬದಿ ಅಂಗಡಿ ಹಾಕಿಕೊಂಡಿದ್ದ ನಮ್ಮ ಮೇಲೆ ಹಲ್ಲೆ ಮಾಡಿದ್ದಾನೆ ಎಂದು […]

ದೇವಸ್ಥಾನದ ಮುಂದೆ ಅಂಗಡಿ ಇಟ್ಟುಕೊಂಡಿದ್ದಕ್ಕೆ ಕಿರಿಕ್: ಅಂಗಡಿ ಮಾಲೀಕನ ಮೇಲೆ ಹಲ್ಲೆ
Follow us on

ದೊಡ್ಡಬಳ್ಳಾಪುರ: ದೇಗುಲದ ಹತ್ತಿರ ಬೀದಿಬದಿ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ದೊಡ್ಡಬಳ್ಳಾಪುರದ ಕನಸವಾಡಿಯ ಶನಿಮಹಾತ್ಮ ದೇವಸ್ಥಾನದ ಬಳಿ ಘಟನೆ ನಡೆದಿದೆ. ಅಂಗಡಿ ಮಾಲೀಕ ಮುನಿಯಪ್ಪ ಎಂಬುವವನ ಮೇಲೆ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್‌ನಿಂದ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ, ಪ್ರಕಾಶ್ ಕಡೆಯವರು ಹೊಸ ಅಂಗಡಿ ತೆರೆದಿದ್ದರು. ಆ ಅಂಗಡಿಗೆ ಸರಿಯಾಗಿ ವ್ಯಾಪಾರವಾಗುತ್ತಿಲ್ಲವೆಂದು ಬೀದಿಬದಿ ಅಂಗಡಿ ಹಾಕಿಕೊಂಡಿದ್ದ ನಮ್ಮ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪ್ರಕಾಶ್ ವಿರುದ್ಧ ಮುನಿಯಪ್ಪ ಆರೋಪಿಸಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದಾನೆ.

ಇನ್ನು, ಹಲ್ಲೆಯನ್ನು ಖಂಡಿಸಿ ದೇಗುಲದ ಬಳಿಯಿರುವ ವ್ಯಾಪಾರಿಗಳು ಅಧ್ಯಕ್ಷನ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ಹೊರಹಾಕಿದರು. ಜೊತೆಗೆ, ನೊಂದ ಬೀದಿಬದಿ ಅಂಗಡಿಗಳ ಮಾಲೀಕರಿಗೆ ನ್ಯಾಯ ಕೊಡಿಸುವಂತೆ ಒತ್ತಾಯ ಮಾಡಿದರು.

ಇತ್ತ, ಮುನಿಯಪ್ಪ ಸುಳ್ಳು ಹೇಳುತ್ತಿದ್ದಾನೆಂದು ಪ್ರಕಾಶ್ ಸಹ ಆರೋಪಿಸಿದ್ದಾನೆ. ಮುನಿಯಪ್ಪ ಭಕ್ತರನ್ನು ಬಲವಂತವಾಗಿ ತನ್ನ ಅಂಗಡಿಗೆ ಕರೆದೊಯ್ಯುತ್ತಿದ್ದ. ಹೀಗಾಗಿ, ಈ ರೀತಿ ಮಾಡಬೇಡ ಎಂದು ಹೇಳಿದ್ದೇನೆ. ಬುದ್ಧಿವಾದ ಹೇಳಿದ್ದಕ್ಕೆ ಹಲ್ಲೆ ಮಾಡಿರುವುದಾಗಿ ಆರೋಪಿಸ್ತಿದ್ದಾನೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಹೇಳಿದ್ದಾನೆ.