ಪುಷ್ಪರಥದ ಬದಲಿಗೆ ಕೊಲ್ಲೂರಿನಲ್ಲಿ ಚಿನ್ನದ ರಥೋತ್ಸವ: ಶಾಸಕರ ನಿರ್ಧಾರಕ್ಕೆ ಹಲವರ ಬೇಸರ
ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪುಷ್ಪರಥದ ಬದಲಿಗೆ ಚಿನ್ನದ ರಥದಲ್ಲಿ ಮೆರವಣಿಗೆ ನಡೆಸಲಾದ ಹಿನ್ನೆಲೆಯಲ್ಲಿ ಹಲವರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಮಹಾನವಮಿ ಪ್ರಯುಕ್ತ ಶನಿವಾರ ರಾತ್ರಿ ನಡೆದ ಉತ್ಸವದಲ್ಲಿ ಸಂಪ್ರದಾಯದಂತೆ ಪುಷ್ಪರಥವನ್ನು ಸಜ್ಜುಗೊಳಿಸಲಾಗಿತ್ತು. ಆದರೆ, ಸ್ಥಳೀಯ ಶಾಸಕ ಸುಕುಮಾರ ಶೆಟ್ಟಿ ಸೂಚನೆಯಂತೆ ಅದರ ಬದಲಿಗೆ ಚಿನ್ನದ ರಥದಲ್ಲಿ ರಥೋತ್ಸವ ನೆರವೇರಿಸಲಾಯಿತು ಎಂದು ತಿಳಿದುಬಂದಿದೆ. ಹಾಗಾಗಿ, ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯದಂತೆ ರಥೋತ್ಸವ ಮಾಡಿಲ್ಲವೆಂದು ಕೆಲವರು ತಮ್ಮ ಅಸಮಾಧಾನ ತೋಡಿಕೊಂಡರು. […]
ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪುಷ್ಪರಥದ ಬದಲಿಗೆ ಚಿನ್ನದ ರಥದಲ್ಲಿ ಮೆರವಣಿಗೆ ನಡೆಸಲಾದ ಹಿನ್ನೆಲೆಯಲ್ಲಿ ಹಲವರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಮಹಾನವಮಿ ಪ್ರಯುಕ್ತ ಶನಿವಾರ ರಾತ್ರಿ ನಡೆದ ಉತ್ಸವದಲ್ಲಿ ಸಂಪ್ರದಾಯದಂತೆ ಪುಷ್ಪರಥವನ್ನು ಸಜ್ಜುಗೊಳಿಸಲಾಗಿತ್ತು. ಆದರೆ, ಸ್ಥಳೀಯ ಶಾಸಕ ಸುಕುಮಾರ ಶೆಟ್ಟಿ ಸೂಚನೆಯಂತೆ ಅದರ ಬದಲಿಗೆ ಚಿನ್ನದ ರಥದಲ್ಲಿ ರಥೋತ್ಸವ ನೆರವೇರಿಸಲಾಯಿತು ಎಂದು ತಿಳಿದುಬಂದಿದೆ. ಹಾಗಾಗಿ, ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯದಂತೆ ರಥೋತ್ಸವ ಮಾಡಿಲ್ಲವೆಂದು ಕೆಲವರು ತಮ್ಮ ಅಸಮಾಧಾನ ತೋಡಿಕೊಂಡರು.
ಸುಕುಮಾರ ಶೆಟ್ಟಿ ಈ ಹಿಂದೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದರು. ಶಾಸಕರ ಕಾಲದಲ್ಲಿ ಚಿನ್ನದ ರಥವೊಂದು ದೇವಾಲಯಕ್ಕೆ ಅರ್ಪಣೆಯಾಗಿತ್ತು. ಈ ಹಿನ್ನೆಲೆಯಲ್ಲಿ, ಚಿನ್ನದ ರಥವನ್ನು ಬಳಸಲು ಶಾಸಕರು ಸೂಚನೆ ನೀಡಿದ್ದರು. ಹಾಗಾಗಿ, ಸಂಪ್ರದಾಯ ಬದಲಾಯಿಸಿದ ಬಗ್ಗೆ ಹಲವರು ಬೇಸರಗೊಂಡಿದ್ದರು. ಆದರೆ, ಇದೆಲ್ಲದರ ನಡುವೆಯೂ ಚಿನ್ನದ ರಥೋತ್ಸವ ಸುಸೂತ್ರವಾಗಿ ನೆರವೇರಿತು ಎಂದು ಹೇಳಲಾಗಿದೆ.