ತಹಶೀಲ್ದಾರ್ ಲಂಚ ದಾಹ: ಹಣ ನೀಡದಿದ್ದರೆ ಮರಳಿನ ಲಾರಿ ಮುಂದೆ ಹೋಗಲ್ವಂತೆ!

ಬಳ್ಳಾರಿ: ಹೂವಿನಹಡಗಲಿ ತಹಶೀಲ್ದಾರ್ ವಿಜಯಕುಮಾರ್​ರವರ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದ್ದು, KRS ಪಕ್ಷದ ಮುಖಂಡರು ಭ್ರಷ್ಟಾಚಾರದ ಸಿಡಿ ಸಮೇತ ದಾಖಲೆ ಬಿಡುಗಡೆ ಮಾಡಿದ್ದಾರೆ. ಹೂವಿನಹಡಗಲಿ ತಾಲೂಕಿನಲ್ಲಿ ಮರಳು ಲಾರಿಗೆ ಲಂಚ ಫಿಕ್ಸ್ ಮಾಡಿರುವ ತಹಶೀಲ್ದಾರ್ ವಿಜಯಕುಮಾರ್, ಪ್ರತಿ ಲಾರಿಗಳಿಂದ ತಿಂಗಳಿಗೆ 40 ಸಾವಿರ ಅಥವಾ ವಾರಕ್ಕೆ 10 ಸಾವಿರ ಲಂಚ ಫಿಕ್ಸ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತಹಶೀಲ್ದಾರ್ ಕಚೇರಿಯಲ್ಲಿಯೇ ಡೀಲ್ ಕುದರಿಸಿರುವ ವಿಜಯಕುಮಾರ್, ಲಂಚ ಕೊಡದಿದ್ರೆ ಮರಳು ಲಾರಿ ಜಪ್ತಿ ಮಾಡುವ ಬೆದರಿಕೆ ಹಾಕುತ್ತಾರಂತೆ. ಮರಳು ಲಾಭದ […]

ತಹಶೀಲ್ದಾರ್ ಲಂಚ ದಾಹ: ಹಣ ನೀಡದಿದ್ದರೆ ಮರಳಿನ ಲಾರಿ ಮುಂದೆ ಹೋಗಲ್ವಂತೆ!

Updated on: Sep 05, 2020 | 2:53 PM

ಬಳ್ಳಾರಿ: ಹೂವಿನಹಡಗಲಿ ತಹಶೀಲ್ದಾರ್ ವಿಜಯಕುಮಾರ್​ರವರ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದ್ದು, KRS ಪಕ್ಷದ ಮುಖಂಡರು ಭ್ರಷ್ಟಾಚಾರದ ಸಿಡಿ ಸಮೇತ ದಾಖಲೆ ಬಿಡುಗಡೆ ಮಾಡಿದ್ದಾರೆ.
ಹೂವಿನಹಡಗಲಿ ತಾಲೂಕಿನಲ್ಲಿ ಮರಳು ಲಾರಿಗೆ ಲಂಚ ಫಿಕ್ಸ್ ಮಾಡಿರುವ ತಹಶೀಲ್ದಾರ್ ವಿಜಯಕುಮಾರ್, ಪ್ರತಿ ಲಾರಿಗಳಿಂದ ತಿಂಗಳಿಗೆ 40 ಸಾವಿರ ಅಥವಾ ವಾರಕ್ಕೆ 10 ಸಾವಿರ ಲಂಚ ಫಿಕ್ಸ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ತಹಶೀಲ್ದಾರ್ ಕಚೇರಿಯಲ್ಲಿಯೇ ಡೀಲ್ ಕುದರಿಸಿರುವ ವಿಜಯಕುಮಾರ್, ಲಂಚ ಕೊಡದಿದ್ರೆ ಮರಳು ಲಾರಿ ಜಪ್ತಿ ಮಾಡುವ ಬೆದರಿಕೆ ಹಾಕುತ್ತಾರಂತೆ.

ಮರಳು ಲಾಭದ ಅರ್ಧದಷ್ಟು ನನಗೆ ಕೊಡ್ಬೇಕು ಅಂತಾ ತಹಶೀಲ್ದಾರ್ ಬೇಡಿಕೆಯಿಟ್ಟಿದ್ದು, ತಹಶೀಲ್ದಾರ್ ಸೂಚನೆ ಮೇರೆಗೆ ಮರಳು ಸಾಗಾಣಿಕೆ ಮಾಡುವರಿಂದ ಕಚೇರಿ ನೌಕರ 20 ಸಾವಿರ ಲಂಚ ಪಡೆದಿದ್ದಾನೆ.

ತಹಶೀಲ್ದಾರ್ ವಿಜಯಕುಮಾರ್​ರವರ ಲಂಚ ದಾಹಕ್ಕೆ ಬೇಸತ್ತ ಮರಳು ಸಾಗಾಣಿಕೆದಾರರು, ತಹಶೀಲ್ದಾರ್ ಹಣ ಪಡೆಯುತ್ತಿರುವ ವಿಡಿಯೋ ಮಾಡಿಕೊಂಡು ಈಗ ಸಿ.ಡಿ ಸಮೇತ ದಾಖಲೆ ಬಿಡುಗಡೆ ಮಾಡಿದ್ದಾರೆ.

Published On - 2:50 pm, Sat, 5 September 20