ಗಡಿ ವೈರತ್ವದ ನಡುವೆಯೂ ಬಂಧುತ್ವ: ಚೀನಾ ಪ್ರಜೆಗಳ ರಕ್ಷಣೆ ಮಾಡಿದ ಭಾರತೀಯ ಸೇನೆ

ಗಡಿ ವೈರತ್ವದ ನಡುವೆಯೂ ಬಂಧುತ್ವ: ಚೀನಾ ಪ್ರಜೆಗಳ ರಕ್ಷಣೆ ಮಾಡಿದ ಭಾರತೀಯ ಸೇನೆ

ದೆಹಲಿ: ತನ್ನ ವಿಸ್ತಾರವಾದದ ನೀತಿಯನ್ನ ಭಾರತದ ಮೇಲೆ ಹೇರಲು ಹೊರಟಿರುವ ಚೀನಾಕ್ಕೆ ನಮ್ಮ ಸೈನಿಕರು ನೀಡಿರುವ ತಿರುಗೇಟಿನಿಂದ ಸದ್ಯ ಬಾಲ ಮುದುರಿಕೊಂಡು ಸುಮ್ಮನಿದೆ. ಇದರಿಂದ ವೈರತ್ವ ತುಂಬಿರುವ ಉದ್ವಿಗ್ನ ಪರಿಸ್ಥಿತಿ ಚೀನಾ ಗಡಿಯಲ್ಲಿ ನಿರ್ಮಾಣವಾಗಿರುವುದರಲ್ಲಿ ಎರಡು ಮಾತಿಲ್ಲ.

 ಆದರೆ, ಈ ನಡುವೆಯೂ ದಾರಿ ತಪ್ಪಿ ಭಾರತದ ಒಳಕ್ಕೆ ಮೂವರು ಚೀನಾ ಪ್ರಜೆಗಳನ್ನ ರಕ್ಷಿಸುವ ಮೂಲಕ ಭಾರತೀಯ ಸೇನೆ ನಾವು ಸಮರಕ್ಕೆ ಸಿದ್ಧ ಆದರೆ ನೆರವಿಗೂ ಬದ್ಧ ಎಂಬುದನ್ನ ಪ್ರದರ್ಶಿಸಿದ್ದಾರೆ.

ಹೌದು, ಸುಮಾರು 17,500 ಅಡಿ ಎತ್ತರದಲ್ಲಿರುವ ಉತ್ತರ ಸಿಕ್ಕಿಂ ಪ್ರಸ್ಥಭೂಮಿಯಲ್ಲಿ ಮೂವರು ಚೀನಾ ಪ್ರಜೆಗಳ ದಾರಿ ತಪ್ಪಿ ಭಾರತದ ಒಳಕ್ಕೆ ಪ್ರವೇಶಿಸಿದ್ದರು. ಇವರನ್ನು ಕೂಡಲೇ ತಡೆದ ಸೈನಿಕರು ನಂತರ ಅವರ ಪರಿಸ್ಥಿತಿ ಕೇಳಿ ಮೂವರಿಗೆ ಊಟ, ಆಮ್ಲಜನಕ ಮತ್ತ ಬೆಚ್ಚನೆಯ ಬಟ್ಟೆಗಳನ್ನು ನೀಡಿ ಅವರು ತೆರಳಬೇಕಿದ್ದ ಸ್ಥಳಕ್ಕೆ ದಾರಿ ತೋರಿಸಿ ಕಳುಹಿಸಿ ಕೊಟ್ಟಿದ್ದಾರೆ.

Click on your DTH Provider to Add TV9 Kannada