ಪುರಸಭೆ ಚುನಾವಣೆ ವೇಳೆ ಗಲಾಟೆ: ಭುಜ ತಟ್ಟಿ ಬಿಜೆಪಿಗೆ ಸವಾಲ್ ಹಾಕಿದ ಭೀಮಾನಾಯ್ಕ್

|

Updated on: Nov 08, 2020 | 9:17 AM

ಬಳ್ಳಾರಿ: ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಪುರಸಭೆ ಮುಂದೆ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾಗಿದೆ. ಈ ವೇಳೆ ಕಾಂಗ್ರೆಸ್ ಶಾಸಕ ಭೀಮನಾಯ್ಕ ಭುಜತಟ್ಟಿ ಸವಾಲು ಹಾಕಿರುವ ವಿಡಿಯೋ ವೈರಲ್ ಆಗಿದೆ. ನಿನ್ನೆ ನಡೆದ ಚುನಾವಣೆ ವೇಳೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಭಾರಿ ಗಲಾಟೆಯಾಗಿದೆ. ಬಿಜೆಪಿ ಕಾರ್ಯಕರ್ತರು ಶಾಸಕ ಭೀಮನಾಯ್ಕ ವಿರುದ್ದ ಘೋಷಣೆ ಕೂಗಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಶಾಸಕ ಭೀಮನಾಯ್ಕ ಕುಸ್ತಿಪಟುವಿನಂತೆ ಭುಜ ತಟ್ಟಿ ಬಿಜೆಪಿ ಮುಖಂಡರಿಗೆ ಸವಾಲ್ ಹಾಕಿದ್ದು, ವಿಡಿಯೋ ವೈರಲ್ ಆಗಿದೆ. […]

ಪುರಸಭೆ ಚುನಾವಣೆ ವೇಳೆ ಗಲಾಟೆ: ಭುಜ ತಟ್ಟಿ ಬಿಜೆಪಿಗೆ ಸವಾಲ್ ಹಾಕಿದ ಭೀಮಾನಾಯ್ಕ್
Follow us on

ಬಳ್ಳಾರಿ: ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಪುರಸಭೆ ಮುಂದೆ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾಗಿದೆ. ಈ ವೇಳೆ ಕಾಂಗ್ರೆಸ್ ಶಾಸಕ ಭೀಮನಾಯ್ಕ ಭುಜತಟ್ಟಿ ಸವಾಲು ಹಾಕಿರುವ ವಿಡಿಯೋ ವೈರಲ್ ಆಗಿದೆ.

ನಿನ್ನೆ ನಡೆದ ಚುನಾವಣೆ ವೇಳೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಭಾರಿ ಗಲಾಟೆಯಾಗಿದೆ. ಬಿಜೆಪಿ ಕಾರ್ಯಕರ್ತರು ಶಾಸಕ ಭೀಮನಾಯ್ಕ ವಿರುದ್ದ ಘೋಷಣೆ ಕೂಗಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಶಾಸಕ ಭೀಮನಾಯ್ಕ ಕುಸ್ತಿಪಟುವಿನಂತೆ ಭುಜ ತಟ್ಟಿ ಬಿಜೆಪಿ ಮುಖಂಡರಿಗೆ ಸವಾಲ್ ಹಾಕಿದ್ದು, ವಿಡಿಯೋ ವೈರಲ್ ಆಗಿದೆ. ಬಿಜೆಪಿ ಕಾರ್ಯಕರ್ತರಿಗೆ ಓಪನ್ ಚಾಲೆಂಜ್ ಮಾಡಿದ್ದಾರೆ.

ಗಲಾಟೆ ವೇಳೆ ಬಿಜೆಪಿ ಮುಖಂಡ ಗರಗದ ಪ್ರಕಾಶ್ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಭೀಮಾನಾಯ್ಕ್ ವಿರುದ್ಧ ಬಿಜೆಪಿ ಮಾಜಿ ಶಾಸಕ ನೇಮಿರಾಜ್ ನೇತೃತ್ವದಲ್ಲಿ ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿದ್ದು ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೂ ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಮಡಿಲಿಗೆ ಸೇರಿದೆ.

ಬಿಜೆಪಿಯವರು ಆಂಧ್ರದಿಂದ ಗೂಂಡಾಗಳನ್ನು ಕರೆಸಿದ್ದರು:
ಬಿಜೆಪಿಯವರು ಆಂಧ್ರದಿಂದ ಗೂಂಡಾಗಳನ್ನು ಕರೆಸಿದ್ದರು ಎಂದು ಟಿವಿ9ಗೆ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ. ನಾನು ಮಾತ್ರ ಅವರಿಗೆ ಭುಜತಟ್ಟಿ ಸವಾಲ್ ಹಾಕಿಲ್ಲ. ಬಿಜೆಪಿಯವರು ಕೂಡ ಇದೇ ರೀತಿ ಸವಾಲ್ ಹಾಕಿದ್ದಾರೆ. ಗಲಾಟೆ ಸಂಬಂಧ ಬಳ್ಳಾರಿ ಎಸ್‌ಪಿಗೆ ದೂರು ನೀಡುತ್ತೇನೆ. ತಹಶೀಲ್ದಾರ್ ಕೂಡ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್‌ನವರನ್ನು ಒಳಗಡೆ ಹೋಗುವುದಕ್ಕೆ ಬಿಟ್ಟಿಲ್ಲ ಎಂದು ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಹೇಳಿದ್ರು