ಅಂದು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿದ್ದವರು.. ಇಂದು ಬೀದಿಯಲ್ಲಿ ಚಿಂದಿ ಆಯುತ್ತಿದ್ದಾರೆ

ಚಿಕ್ಕಬಳ್ಳಾಪುರ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಆತ, ನೆಮ್ಮದಿಯಾಗಿ ಇರೋಣ ಅಂತ ಸ್ವಯಂ ನಿವೃತ್ತಿ ಪಡೆದಿದ್ರು, ಆದ್ರೆ ನಿವೃತ್ತಿ ಪಡೆದ ಕೆಲವೇ ವರ್ಷಗಳಲ್ಲಿ ಅವರ ಜೀವನ ಬೀದಿಗೆ ಬಂದಿದೆ. ಅವ್ರು ಈಗಿರುವ ಪರಿಸ್ಥಿತಿಯನ್ನ ನೀವು ನೋಡಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತೀರಿ. ಉದ್ದ ಗಡ್ಡ.. ಮೀಸೆ.. ಗಲೀಜಾಗಿರುವ ಬಟ್ಟೆ.. ಬೀದಿ ಬೀದಿಯಲ್ಲಿ ಚಿಂದಿ ಆಯುತ್ತಿರುವ ವ್ಯಕ್ತಿ ಸಾಮಾನ್ಯ ವ್ಯಕ್ತಿಯಲ್ಲ, ಇವರೇ ನಾವು ಹೇಳಿದ ನಿವೃತ್ತ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮಧುಸೂದನ್ ರಾವ್.ಯಾರೂ ಊಹಿಸಲು ಆಗದಂತಹ […]

ಅಂದು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿದ್ದವರು.. ಇಂದು ಬೀದಿಯಲ್ಲಿ ಚಿಂದಿ ಆಯುತ್ತಿದ್ದಾರೆ
Follow us
ಆಯೇಷಾ ಬಾನು
|

Updated on: Nov 08, 2020 | 8:08 AM

ಚಿಕ್ಕಬಳ್ಳಾಪುರ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಆತ, ನೆಮ್ಮದಿಯಾಗಿ ಇರೋಣ ಅಂತ ಸ್ವಯಂ ನಿವೃತ್ತಿ ಪಡೆದಿದ್ರು, ಆದ್ರೆ ನಿವೃತ್ತಿ ಪಡೆದ ಕೆಲವೇ ವರ್ಷಗಳಲ್ಲಿ ಅವರ ಜೀವನ ಬೀದಿಗೆ ಬಂದಿದೆ. ಅವ್ರು ಈಗಿರುವ ಪರಿಸ್ಥಿತಿಯನ್ನ ನೀವು ನೋಡಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತೀರಿ.

ಉದ್ದ ಗಡ್ಡ.. ಮೀಸೆ.. ಗಲೀಜಾಗಿರುವ ಬಟ್ಟೆ.. ಬೀದಿ ಬೀದಿಯಲ್ಲಿ ಚಿಂದಿ ಆಯುತ್ತಿರುವ ವ್ಯಕ್ತಿ ಸಾಮಾನ್ಯ ವ್ಯಕ್ತಿಯಲ್ಲ, ಇವರೇ ನಾವು ಹೇಳಿದ ನಿವೃತ್ತ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮಧುಸೂದನ್ ರಾವ್.ಯಾರೂ ಊಹಿಸಲು ಆಗದಂತಹ ಸ್ಥಿತಿಗೆ ತಲುಪಿದ್ದಾರೆ. ಅಷ್ಟಕ್ಕೂ ನಿವೃತ್ತ ಪೊಲೀಸ್ ಅಧಿಕಾರಿಗೆ ಇಂಥ ಗತಿಯಾದ್ರೂ ಯ್ಯಾಕೆ ಬಂತು ಅಂತ ಅವರೆ ಹೇಳಿಕೊಂಡಿದ್ದಾರೆ.

ಅಸಲಿಗೆ ಮಧುಸೂದನ್ ರಾವ್ ಕೆಲಸದ ಒತ್ತಡದಿಂದ ವಿಮುಕ್ತರಾಗಲು, ಮನೆಯಲ್ಲಿ ನೆಮ್ಮದಿ ಜೀವನ ನಿರ್ವಹಿಸೋಣ ಅಂತ 2011ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ರು. ಇತ್ತೀಚಿಗೆ ಅವರ ಪತ್ನಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ರು, ಪತ್ನಿಯ ಸಾವಿನಿಂದ ನೊಂದ ಮಧುಸೂದನ್ ಮದ್ಯಪಾನಕ್ಕೆ ದಾಸರಾಗಿ ಮನೆಯಲ್ಲಿ ಕಿರಿ ಕಿರಿ ಮಾಡ್ತಿದ್ದರಂತೆ, ಇದ್ರಿಂದ ಮಗ ಹಾಗೂ ಇಬ್ಬರು ವಿವಾಹಿತ ಹೆಣ್ಣು ಮಕ್ಕಳುಗಳಿಗೆ ಇರಿಸು ಮುರಿಸು ಆಯ್ತಂತೆ, ಕೊನೆಗೆ ಮನೆಯಲ್ಲಿ ಇರೋದೆ ಬೇಡ ಅಂತ, ಮನೆಯಿಂದ ಬೀದಿಗೆ ಬಂದು ಚಿಂದಿ ಆಯ್ದು ಬೀದಿಯಲ್ಲಿ ಜೀವನ ಮಾಡ್ತಿದ್ದಾರೆ. ಆದ್ರೆ ಮಧುಸೂದನ್ ವಿಷಯ ತಿಳಿದ ಚಿಕ್ಕಬಳ್ಳಾಪುರ ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಚಿಂತಾಮಣಿ ನಗರ ಪೊಲೀಸರ ಮೂಲಕ ಹೊಸ ಬದುಕು ಕಟ್ಟಿಕೊಡಲು ಯತ್ನಿಸಿದ್ದಾರೆ.

ಮಧುಸೂದನ್ ಗೆ ಪ್ರತಿ ತಿಂಗಳು 9 ಸಾವಿರ ರೂಪಾಯಿ ಪೆನಷನ್ ಬರ್ತಿದೆ, ಅಕೌಂಟ್ ನಲ್ಲಿ ಲಕ್ಷ ಲಕ್ಷ ಹಣ ಇದೆ ಆದ್ರೂ ಅದ್ಯಾವುದನ್ನು ಪಡೆಯದ ಮಧುಸೂದನ್. ಮಕ್ಕಳ ಸಹವಾಸದಿಂದ ದೂರವಿದ್ದು ಇರೋ ಹಣವನ್ನು ಬಳಸಿಕೊಳ್ಳದೆ ಬೀದಿಯಲ್ಲಿ ಚಿಂದಿ ಕಾಯಕ ಮಾಡಿ ಅದರಿಂದ ಬರುವ ಹಣದಿಂದಲೆ ಕುಡಿಯೋದು, ತಿನ್ನೋದು, ಬೀದಿಯಲ್ಲಿ ಜೀವನ ಮಾಡೋದು ಮಾಡ್ತಿದ್ದಾರೆ. ಬೀದಿ ಜೀವನವೇ ತಮಗೆ ನೆಮ್ಮದಿ ನೀಡ್ತಿದೆ ಅಂತ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ