ಲಾಕ್‌ಡೌನ್‌ ಎಫೆಕ್ಟ್, ಗದಗಿನ ದೇವಸ್ಥಾನಗಳಿಗೆ ಬೀಗ

ಗದಗ: ಕೊರೊನಾ ಹೆಮ್ಮಾರಿಯನ್ನ ಹತ್ತಿಕ್ಕಲೂ ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಈ ಸಂಬಂಧ ಈಗ ಮತ್ತೇ ಲಾಕ್‌ಡೌನ್‌ ಮೊರೆ ಹೋಗಿದ್ದು ಇಂದು ರಾಜ್ಯಾದ್ಯಂತ ಸಂ​ಡೇ ಲಾಕ್‌ಡೌನ್‌ ಜಾರಿ ಮಾಡಿದೆ. ಇದರ ಪರಿಣಾಮ ದೇವಸ್ಥಾನಗಳ ಮೇಲೂ ಆಗಿದೆ. ಹೌದು ಗದುಗಿನ ಪ್ರಖ್ಯಾತ ದೇವಸ್ಥಾನಗಳೆಲ್ಲಾ ಲಾಕ್‌ಡೌನ್‌ನಿಂದಾಗಿ ಇವತ್ತು ಸಂಪೂರ್ಣವಾಗಿ ಭಕ್ತರಿಗೆ ಕ್ಲೋಸ್‌ ಆಗಿವೆ. ಅದ್ರಲ್ಲೂ ಇವತ್ತು ಗುರು ಪೂರ್ಣಿಮಾ ಇರೋದ್ರಿಂದ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿರುತ್ತೆ. ಹೀಗಾಗಿ ಪೂಜಾರಿಗಳು ಬೆಳೆಗ್ಗೆಯೇ ಪೂಜೆ ನೆರವೇರಿಸಿ ದೇವಸ್ಥಾನಗಳ ಬಾಗಿಲುಗಳನ್ನ ಕ್ಲೋಸ್‌ ಮಾಡಿದ್ದಾರೆ. […]

ಲಾಕ್‌ಡೌನ್‌ ಎಫೆಕ್ಟ್, ಗದಗಿನ ದೇವಸ್ಥಾನಗಳಿಗೆ ಬೀಗ
Edited By:

Updated on: Jul 05, 2020 | 12:20 PM

ಗದಗ: ಕೊರೊನಾ ಹೆಮ್ಮಾರಿಯನ್ನ ಹತ್ತಿಕ್ಕಲೂ ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಈ ಸಂಬಂಧ ಈಗ ಮತ್ತೇ ಲಾಕ್‌ಡೌನ್‌ ಮೊರೆ ಹೋಗಿದ್ದು ಇಂದು ರಾಜ್ಯಾದ್ಯಂತ ಸಂ​ಡೇ ಲಾಕ್‌ಡೌನ್‌ ಜಾರಿ ಮಾಡಿದೆ. ಇದರ ಪರಿಣಾಮ ದೇವಸ್ಥಾನಗಳ ಮೇಲೂ ಆಗಿದೆ.

ಹೌದು ಗದುಗಿನ ಪ್ರಖ್ಯಾತ ದೇವಸ್ಥಾನಗಳೆಲ್ಲಾ ಲಾಕ್‌ಡೌನ್‌ನಿಂದಾಗಿ ಇವತ್ತು ಸಂಪೂರ್ಣವಾಗಿ ಭಕ್ತರಿಗೆ ಕ್ಲೋಸ್‌ ಆಗಿವೆ. ಅದ್ರಲ್ಲೂ ಇವತ್ತು ಗುರು ಪೂರ್ಣಿಮಾ ಇರೋದ್ರಿಂದ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿರುತ್ತೆ. ಹೀಗಾಗಿ ಪೂಜಾರಿಗಳು ಬೆಳೆಗ್ಗೆಯೇ ಪೂಜೆ ನೆರವೇರಿಸಿ ದೇವಸ್ಥಾನಗಳ ಬಾಗಿಲುಗಳನ್ನ ಕ್ಲೋಸ್‌ ಮಾಡಿದ್ದಾರೆ.

ಗದಗ ನಗರದ ವಿವೇಕಾನಂದ ನಗರದಲ್ಲಿರುವ ಸಾಯಿಬಾಬಾ ದೇವಸ್ಥಾನ, ಗಂಗಾಪೂರ ಪೇಟೆಯ ದುರ್ಗಾದೇವಿ ದೇವಾಲಯ, ಐತಿಹಾಸಿಕ ವೀರನಾರಾಯಣ ದೇವಾಲಯಗಳ ದ್ವಾರ ಬಾಗಿಲುಗಳನ್ನ ಬಂದ್‌ ಮಾಡಲಾಗಿದೆ. ಪರಿಣಾಮ ಭಕ್ತರು ದೇವರ ದರ್ಶನವಿಲ್ಲದೇ ವಾಪಸ್‌ ಹೋಗುತ್ತಿದ್ದಾರೆ.

Published On - 11:29 am, Sun, 5 July 20