ಇಂದು ಗುರು ಪೂರ್ಣಿಮೆ: ಸಂಗಮ್ ಘಾಟ್‌ನಲ್ಲಿ ನಡೆಯುತ್ತಿದೆ ಪವಿತ್ರ ಸ್ನಾನ, ಪೂಜೆ

ಪ್ರಯಾಗರಾಜ್: ಗುಕಾರಸ್ಯಂಧಕಾರಾರ್ಥ ರುಕಾರಸ್ತನ್ನಿರೋಧಕಃ ಅಂಧಕಾರ ನಿರೋಧಿತ್ವಾತ್ ಗುರುರಿತ್ಯಭಿಧೀಯತೆ. ಇಂದು ಅತ್ಯಂತ ಶುಭ ದಿನ. ಏಕೆಂದರೆ ನಮ್ಮಲ್ಲಿರುವ ಅಂಧಕಾರವನ್ನು ದೂರ ಮಾಡಿ ಬೆಳಕನ್ನು ತೋರಿಸಿದ ಗುರುಗಳಿಗೆ ಕೃತಜ್ಞತೆ ಕೇಳುವ ದಿನ. ಬದುಕಿನ ದಾರಿ ತೋರಿಸಿದ ಗುರುವಿಗೆ ಶತಕೋಟಿ ನಮನ ಸಲ್ಲಿಸುವ ದಿನ. ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು ಎಂಬಂತೆ ತಾಯಿಯಿಂದ ಹಿಡಿದು ಮುಂದೆ ನಾವು ಬೆಳೆದು ದೊಡ್ಡವರಾಗಿ ನಮ್ಮ ಬದುಕನ್ನು ಸಾಗಿಸಿ ಸಾಯುವವರೆಗೂ ನಮಗೆ ವಿದ್ಯಾ ಬುದ್ಧಿ ನೀಡುವ ಎಲ್ಲಾ ಗುರುಗಳಿಗೂ ಇಂದು ಗುರು […]

ಇಂದು ಗುರು ಪೂರ್ಣಿಮೆ: ಸಂಗಮ್ ಘಾಟ್‌ನಲ್ಲಿ ನಡೆಯುತ್ತಿದೆ ಪವಿತ್ರ ಸ್ನಾನ, ಪೂಜೆ
Follow us
ಆಯೇಷಾ ಬಾನು
|

Updated on: Jul 05, 2020 | 10:18 AM

ಪ್ರಯಾಗರಾಜ್: ಗುಕಾರಸ್ಯಂಧಕಾರಾರ್ಥ ರುಕಾರಸ್ತನ್ನಿರೋಧಕಃ ಅಂಧಕಾರ ನಿರೋಧಿತ್ವಾತ್ ಗುರುರಿತ್ಯಭಿಧೀಯತೆ. ಇಂದು ಅತ್ಯಂತ ಶುಭ ದಿನ. ಏಕೆಂದರೆ ನಮ್ಮಲ್ಲಿರುವ ಅಂಧಕಾರವನ್ನು ದೂರ ಮಾಡಿ ಬೆಳಕನ್ನು ತೋರಿಸಿದ ಗುರುಗಳಿಗೆ ಕೃತಜ್ಞತೆ ಕೇಳುವ ದಿನ. ಬದುಕಿನ ದಾರಿ ತೋರಿಸಿದ ಗುರುವಿಗೆ ಶತಕೋಟಿ ನಮನ ಸಲ್ಲಿಸುವ ದಿನ.

ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು ಎಂಬಂತೆ ತಾಯಿಯಿಂದ ಹಿಡಿದು ಮುಂದೆ ನಾವು ಬೆಳೆದು ದೊಡ್ಡವರಾಗಿ ನಮ್ಮ ಬದುಕನ್ನು ಸಾಗಿಸಿ ಸಾಯುವವರೆಗೂ ನಮಗೆ ವಿದ್ಯಾ ಬುದ್ಧಿ ನೀಡುವ ಎಲ್ಲಾ ಗುರುಗಳಿಗೂ ಇಂದು ಗುರು ಪೂರ್ಣಿಮೆಯ ಶುಭಾಶಯಗಳು.

ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ದಿನದಂದು, ಹಿಂದೂಗಳು ಮತ್ತು ಬೌದ್ಧರು ಸಹ ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಈ ಶುಭದಿನದ ಅಂಗವಾಗಿ ನೂರಾರ ಭಕ್ತರು ಉತ್ತರ ಪ್ರದೇಶದ ಪ್ರಯಾಗರಾಜ್​ನ ಸಂಗಮ್ ಘಾಟ್‌ನಲ್ಲಿ ಪವಿತ್ರ ಸ್ನಾನ ಮಾಡಿ ಪೂಜೆ ಸಲ್ಲಿಸಿದರು.