ಭಾರತದಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ.. ಮುಂದೇನು?
ಕೊರೊನಾ ಹೆಸರು ಕೇಳಿದ್ರೆ ಸಾಕು ಎದೆ ಬಡಿತ ಹೆಚ್ಚಾಗುತ್ತಿದೆ. ಭಾರತದಲ್ಲಿ ಹೆಮ್ಮಾರಿ ಕೊರೊನಾದ ಅಟ್ಟಹಾಸ ಎಲ್ಲೆ ಮೀರಿ ಹೋಗಿದೆ. ವೈರಿ ವೈರಸ್ ದಾಳಿಗೆ ಎಲ್ಲರ ಜಂಘಾಬಲವೇ ಉಡುಗಿ ಹೋಗಿದೆ. ಸಿಕ್ಕಸಿಕ್ಕವರು ಸೋಂಕಿನ ತೆಕ್ಕೆಗೆ ಜಾರುತ್ತಿದ್ದಾರೆ. ಕೆಲವರಂತೂ ಸಾವಿನ ಮನೆ ಸೇರುತ್ತಿದ್ದಾರೆ. ಒಟ್ನಲ್ಲಿ ದೇಶದಲ್ಲಿ ಹೆಮ್ಮಾರಿಯ ರೌದ್ರನರ್ತನಕ್ಕೆ ಎಲ್ಲರೂ ನಲುಗಿ ಹೋಗಿದ್ದಾರೆ. ದೇಶದಲ್ಲಿ ಈವರೆಗೆ 6,25,544 ಜನರಿಗೆ ಕ್ರೂರಿ ವಕ್ಕರಿಸಿಕೊಂಡಿದೆ. ಅದರಲ್ಲೂ 18,213 213 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಔಟ್ ಆಫ್ ಕಂಟ್ರೋಲ್ ಆದ ಕೊರೊನಾ ಮಹಾರಾಷ್ಟ್ರದಲ್ಲಿ […]
ಕೊರೊನಾ ಹೆಸರು ಕೇಳಿದ್ರೆ ಸಾಕು ಎದೆ ಬಡಿತ ಹೆಚ್ಚಾಗುತ್ತಿದೆ. ಭಾರತದಲ್ಲಿ ಹೆಮ್ಮಾರಿ ಕೊರೊನಾದ ಅಟ್ಟಹಾಸ ಎಲ್ಲೆ ಮೀರಿ ಹೋಗಿದೆ. ವೈರಿ ವೈರಸ್ ದಾಳಿಗೆ ಎಲ್ಲರ ಜಂಘಾಬಲವೇ ಉಡುಗಿ ಹೋಗಿದೆ. ಸಿಕ್ಕಸಿಕ್ಕವರು ಸೋಂಕಿನ ತೆಕ್ಕೆಗೆ ಜಾರುತ್ತಿದ್ದಾರೆ. ಕೆಲವರಂತೂ ಸಾವಿನ ಮನೆ ಸೇರುತ್ತಿದ್ದಾರೆ. ಒಟ್ನಲ್ಲಿ ದೇಶದಲ್ಲಿ ಹೆಮ್ಮಾರಿಯ ರೌದ್ರನರ್ತನಕ್ಕೆ ಎಲ್ಲರೂ ನಲುಗಿ ಹೋಗಿದ್ದಾರೆ. ದೇಶದಲ್ಲಿ ಈವರೆಗೆ 6,25,544 ಜನರಿಗೆ ಕ್ರೂರಿ ವಕ್ಕರಿಸಿಕೊಂಡಿದೆ. ಅದರಲ್ಲೂ 18,213 213 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಔಟ್ ಆಫ್ ಕಂಟ್ರೋಲ್ ಆದ ಕೊರೊನಾ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಮಹಾಸ್ಫೋಟಗೊಂಡಿದೆ. ರಾಜ್ಯದಲ್ಲಿ ನಿನ್ನೆ ಒಂದೇ ದಿನ 6,364 ಜನರಿಗೆ ಸೋಂಕು ದೃಢವಾಗಿದೆ. ಅದರಲ್ಲೂ 192 ಜನರು ಕೊರೊನಾ ಕೂಪಕ್ಕೆ ಬಿದ್ದು ಅಸುನೀಗಿದ್ದಾರೆ. ಮಹಾರಾಷ್ಟ್ರದಲ್ಲಿ ಈವರೆಗೆ 1,92,990 ಮಂದಿ ಸೋಂಕಿತರಿದ್ದಾರೆ.
ತಮಿಳುನಾಡಿನಲ್ಲಿ 1 ಲಕ್ಷದ ಗಡಿ ದಾಟಿದ ಕ್ರೂರಿ ಕೊರೊನಾ! ಡೆಡ್ಲಿ ಕೊರೊನಾದ ಅಟ್ಟಹಾಸಕ್ಕೆ ತಮಿಳುನಾಡು ಕಂಗಾಲಾಗಿ ಹೋಗಿದೆ. ತಮಿಳುನಾಡಿನಲ್ಲಿ ನಿನ್ನೆ ಒಂದೇ ದಿನ ಬರೋಬ್ಬರಿ 4,329 ಜನರಿಗೆ ಸೋಂಕು ಪತ್ತೆಯಾಗಿದ್ದು 64 ಮಂದಿಯನ್ನ ಬಲಿ ಪಡೆದಿದೆ. ಈ ಮೂಲಕ ದ್ರಾವಿಡರ ನಾಡನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷ ಗಡಿ ದಾಟಿ ಮುನ್ನುಗ್ಗಿದೆ.
ಬೇರೆ ಬೇರೆ ರಾಜ್ಯಗಳಲ್ಲಿ ಕೊರೊನಾ ಅಟ್ಟಹಾಸ ಹೀಗಿದೆ
ಒಟ್ನಲ್ಲಿ ದೇಶದಲ್ಲಿ ಕ್ರೂರಿ ಕೊರೊನಾ ತನ್ನ ಆರ್ಭಟ ಮುಂದುವರೆಸಿದೆ. ವೈರಸ್ ಸಾಗಿದ ದಾರಿಯಲ್ಲೆಲ್ಲಾ ಸೋಂಕಿನ ನಂಜನ್ನ ಹರಡುತ್ತಿರೋ ಕೊರೊನಾ ಸದ್ದೇ ಇಲ್ಲದೆ ದಾಳಿ ಮಾಡ್ತಿದೆ. ಡೆಡ್ಲಿ ಕೊರೊನಾ ಅಟ್ಟಹಾಸಕ್ಕೆ ಇಡೀ ದೇಶವೇ ನಡುಗಿ ಹೋಗಿದ್ದು ಮುಂದೇನು ಕಾದಿದ್ಯೋ ಅನ್ನೋ ಭೀತಿ ಶುರುವಾಗಿದೆ.