ರಷ್ಯವನ್ನ ಹಿಂದಿಕ್ಕಿ ಕೊರೊನಾ ಸೋಂಕಿತರ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದ ಭಾರತ!
ದೆಹಲಿ: ಗೆದ್ದೇ ಬಿಡ್ತು ಭಾರತ ಕೊರೊನಾದಿಂದ ಗೆದ್ದೇ ಬಿಡ್ತು. ನಮ್ ದೇಶದಲ್ಲಿ ಕೊರೊನಾ ಕಂಟ್ರೋಲ್ ಆಯ್ತು. ನಮ್ ಜನ ಸಂಖ್ಯೆಗೆ ಹೋಲಿಸಿದ್ರೆ ಕೊರೊನಾ ಬಂದಿರೋ ಸಂಖ್ಯೆ ಕಡಿಮೆ ಅಂತಿದ್ದ ಇಂಡಿಯನ್ಸ್ ಈಗ ಬೆಚ್ಚಿ ಬಿದ್ದಿದ್ದಾರೆ. ಯಾಕಂದ್ರೆ ಲಾಕ್‌ಡೌನ್, ಸೀಲ್‌ಡೌನ್ ಅಸ್ತ್ರಕ್ಕೆ ಜಗ್ಗದ ಹೆಮ್ಮಾರಿ ವೈರಸ್ ಭಾರತದಲ್ಲಿ ಕೈಗೆ ಸಿಕ್ಕವರನ್ನ ಬಗ್ಗು ಬಡಿಯುತ್ತಿದೆ. ಭಾರತ ಬಾಗಿಲಿನಲ್ಲಿ ನಿಂತು ರಣಕೇಕೆ ಹಾಕುತ್ತಿದೆ. ಸೋಂಕಿನ ವಿಷ ಉಗುಳುತ್ತಾ, ಸಾವಿನ ಸವಾರಿ ಮಾಡುತ್ತಿದೆ. ದೇಶದಲ್ಲಿ ಶರವೇಗದಲ್ಲಿ ಏರುತ್ತಿದೆ ಸೋಂಕಿತರ ಸಂಖ್ಯೆ! ನೋಡಿ ಎಲ್ಲಿದ್ದ […]
ದೆಹಲಿ: ಗೆದ್ದೇ ಬಿಡ್ತು ಭಾರತ ಕೊರೊನಾದಿಂದ ಗೆದ್ದೇ ಬಿಡ್ತು. ನಮ್ ದೇಶದಲ್ಲಿ ಕೊರೊನಾ ಕಂಟ್ರೋಲ್ ಆಯ್ತು. ನಮ್ ಜನ ಸಂಖ್ಯೆಗೆ ಹೋಲಿಸಿದ್ರೆ ಕೊರೊನಾ ಬಂದಿರೋ ಸಂಖ್ಯೆ ಕಡಿಮೆ ಅಂತಿದ್ದ ಇಂಡಿಯನ್ಸ್ ಈಗ ಬೆಚ್ಚಿ ಬಿದ್ದಿದ್ದಾರೆ. ಯಾಕಂದ್ರೆ ಲಾಕ್‌ಡೌನ್, ಸೀಲ್‌ಡೌನ್ ಅಸ್ತ್ರಕ್ಕೆ ಜಗ್ಗದ ಹೆಮ್ಮಾರಿ ವೈರಸ್ ಭಾರತದಲ್ಲಿ ಕೈಗೆ ಸಿಕ್ಕವರನ್ನ ಬಗ್ಗು ಬಡಿಯುತ್ತಿದೆ. ಭಾರತ ಬಾಗಿಲಿನಲ್ಲಿ ನಿಂತು ರಣಕೇಕೆ ಹಾಕುತ್ತಿದೆ. ಸೋಂಕಿನ ವಿಷ ಉಗುಳುತ್ತಾ, ಸಾವಿನ ಸವಾರಿ ಮಾಡುತ್ತಿದೆ.
ದೇಶದಲ್ಲಿ ಶರವೇಗದಲ್ಲಿ ಏರುತ್ತಿದೆ ಸೋಂಕಿತರ ಸಂಖ್ಯೆ! ನೋಡಿ ಎಲ್ಲಿದ್ದ ಭಾರತ ಎಲ್ಲಿಗೆ ಬಂತು ಅನ್ನೋದನ್ನ. ಮೊದ ಮೊದಲು ಇಡೀ ವಿಶ್ವಕ್ಕೆ ಮಾದರಿಯಾಗಿದ್ದ ಭಾರತ. ನಮ್ಮದೇ ಸ್ವಯಂಕೃತ ಅಪರಾಧಗಳಿಂದ ಕೊರೊನಾ ರಣಕೇಕೆ ಹಾಕುತ್ತಿದೆ. ವಿಶ್ವದ ಸೋಂಕಿತರ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೆ ಬಂದು ನಿಂತಿದೆ. ರಷ್ಯವನ್ನ ಹಿಂದಿಕ್ಕಿ ಭಾರತ ನಿನ್ನೆ ಮೂರನೇ ಸ್ಥಾನಕ್ಕೆ ಏರಿದೆ.
3ನೇ ಸ್ಥಾನದಲ್ಲಿ ಭಾರತ! ಅಮೆರಿಕದಲ್ಲಿ 29,64,797 ಜನ ಸೋಂಕಿತರಿದ್ದು, ವಿಶ್ವದ ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಎರಡೇ ಸ್ಥಾನದಲ್ಲಿ ಬ್ರೆಜಿಲ್ ಇದ್ದು, ಇಲ್ಲಿ 15,79,837 ಜನ ಸೋಂಕಿತರಿದ್ದಾರೆ. ಇನ್ನು ಭಾರತ ರಷ್ಯಾವನ್ನ ಹಿಂದಿಕ್ಕಿ 3ನೇ ಸ್ಥಾನಕ್ಕೆ ಬಂದಿದೆ, ಭಾರತಲ್ಲಿ 6,97,069 ಜನರಿಗೆ ಸೋಂಕು ತಗುಲಿದ್ದು, ಕ್ಷಣ ಕ್ಷಣಕ್ಕೂ ಈ ನಂಬರ್ ಚೇಂಜ್ ಆಗುತ್ತಿದೆ. ಇನ್ನು ರಷ್ಯಾದಲ್ಲಿ 6,81,251 ಜನ ಸೋಂಕಿತರಿದ್ದು, 4ನೇ ಸ್ಥಾನದಲ್ಲಿದೆ.
ಇನ್ನೂ ದಿನ ನಿತ್ಯ ದೇಶದಲ್ಲಿ 15 ಸಾವಿರ ಗಡಿ ದಾಟಿ ರಣಕೇಕೆ ಹಾಕುತ್ತಿರುವ ಹೆಮ್ಮಾರಿ ಕಳೆದ 24 ಗಂಟೆಯಲ್ಲಿ 17000 ಜನರಿಗೆ ವಕ್ಕರಿಸಿದೆ. ಹಾಗಿದ್ರೆ ಯಾವ ಯಾವ ರಾಜ್ಯದಲ್ಲಿ ಎಷ್ಟೆಷ್ಟು ಕೇಸ್‌ಗಳು ಇವೆ ಅನ್ನೋದನ್ನ ನೋಡಾದ್ರೆ..
ಸೋಂಕಿನ ಆರ್ಭಟ! ಭಾರತ ಸೋಂಕಿತರ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದಲ್ಲಿದ್ದು, ಇಲ್ಲಿ 2,00,064 ಜನರಿಗೆ ಸೋಂಕು ವಕ್ಕರಿಸಿದೆ. ಇನ್ನು ತಮಿಳುನಾಡಿನಲ್ಲಿ 1,07,001 ಜನಕ್ಕೆ ಹಾಗೂ ದೆಹಲಿಯಲ್ಲಿ 97,200 ಜನಕ್ಕೆ ಸೋಂಕು ತಗುಲಿದೆ. ಗುಜರಾತ್‌ನಲ್ಲಿ 35312 ಜನರ ಮೇಲೆ ವೈರಸ್ ದಾಳಿ ಮಾಡಿದ್ರೆ, ಉತ್ತರ ಪ್ರದೇಶದಲ್ಲಿ 26554 ದೇಹಕ್ಕೆ ಸೋಂಕು ಅಂಟಿದೆ. ಇನ್ನು ತೆಲಂಗಾಣದಲ್ಲಿ 22312 ಜನಕ್ಕೆ ಸೋಂಕು ತಗುಲಿದ್ರೆ, ಆಂಧ್ರಪ್ರದೇಶದಲ್ಲಿ 17699 ಜನ ಸೋಂಕಿನ ಬಲೆಗೆ ಬಿದ್ದಿದ್ದಾರೆ.
ಒಟ್ನಲ್ಲಿ, ದೇಶದಲ್ಲಿ ಲಾಕ್‌ಡೌನ್ ಟೈಂನಲ್ಲಿ ಕಂಟ್ರೋಲ್ ಆಗಿದ್ದ ಸೋಂಕು ಫ್ರೀ ಡೌನ್ ಆದ ಮೇಲೆ ಸಿಡಿದೆದ್ದಿದೆ. ಅದರಲ್ಲೂ ವಿಶ್ವದ ಸೋಂಕಿತರ ಡೈರಿಯಲ್ಲಿ ಭಾರತ 3ನೇ ಸ್ಥಾನವನ್ನ ಅಲಂಕರಿಸಿದ್ದು, ಮತ್ತಷ್ಟು ಭಯ ಹುಟ್ಟಿಸಿದೆ.