ಬೆಂಗಳೂರು: ಕೇಂದ್ರ ಸರ್ಕಾರ ಕೆಲ ರಾಜ್ಯಗಳಿಗೆ ರೈಲು ಸೇವೆ ಕಲ್ಪಿಸುವ ನಿರ್ಧಾರ ಕೈಗೊಂಡಿತ್ತು. ಅದರಂತೆ ಕಳೆದ ಮಂಗಳವಾರದಿಂದ ರೈಲು ಸೇವೆ ಆರಂಭವಾಗಿದೆ. ಬೆಳಿಗ್ಗೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ರೈಲಿನಲ್ಲಿ ಬಂದ ಪ್ರಯಾಣಿಕರು ಕ್ವಾರಂಟೈನ್ಗೆ ತೆರಳಲು ನಿರಾಕರಿಸಿ ಗಲಾಟೆ ಮಾಡಿರುವ ಘಟನೆ ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ನಡೆದಿದೆ.
ರೈಲು ಸೇವೆ ಆರಂಭವಾಗಿರುವ ಹಿನ್ನೆಲೆಯಲ್ಲಿ ದೆಹಲಿಯಿಂದ ಬೆಂಗಳೂರಿಗೆ ಬಂದ ಪ್ರಯಾಣಿಕರು ಕ್ವಾರಂಟೈನ್ಗೆ ತೆರಳಲು ಒಪ್ಪದೆ ಗಲಾಟೆ ಮಾಡ್ತಿದ್ದಾರೆ. ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ್ದಾರೆ. ಕ್ವಾರಂಟೈನ್ನಲ್ಲಿ ಇರುವ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಟಿಕೆಟ್ ಬುಕ್ ಮಾಡಿ ನಮ್ಮನ್ನು ವಾಪಸ್ ಕಳುಹಿಸಿ ಬಿಡಿ ಎಂದು 10 ಜನ ಪ್ರಯಾಣಿಕರು ಪಟ್ಟು ಹಿಡಿದಿದ್ದಾರೆ.
Published On - 10:07 am, Thu, 14 May 20