ಬಿಹಾರದ ವಿದ್ಯಾರ್ಥಿಗೆ ಸನ್ನಿ ಲಿಯೋನ್ ಅಮ್ಮ, ಇಮ್ರಾನ್ ಹಶ್ಮಿ ಅಪ್ಪ!

ಮುಜಾಫರ್​ಪುರದ ಧನರಾಜ್ ಭಗತ್ ಪದವಿ ಕಾಲೇಜಿನ ದ್ವಿತೀಯ ವರ್ಷದ ಬಿಎ ವಿದ್ಯಾರ್ಥಿ ಕುಂದನ್ ಕುಮಾರ್ ಪರೀಕ್ಷಾ ಪ್ರವೇಶ ಪತ್ರದಲ್ಲಿ ತಂದೆ, ತಾಯಿಯರ ಹೆಸರು ಸನ್ನಿ ಲಿಯೋನ್ ಮತ್ತು ಇಮ್ರಾನ್ ಹಶ್ಮಿ ಎಂದು ನಮೂದಾಗಿದೆ.

ಬಿಹಾರದ ವಿದ್ಯಾರ್ಥಿಗೆ ಸನ್ನಿ ಲಿಯೋನ್ ಅಮ್ಮ, ಇಮ್ರಾನ್ ಹಶ್ಮಿ ಅಪ್ಪ!
ಸನ್ನಿ ಲಿಯೋನ್ ಮತ್ತು ಇಮ್ರಾನ್ ಹಶ್ಮಿ
Edited By:

Updated on: Dec 14, 2020 | 9:28 PM

ಪಾಟ್ನಾ: ಬಿಹಾರದ ವಿದ್ಯಾರ್ಥಿಯೊಬ್ಬನ ಪರೀಕ್ಷಾ ಪ್ರವೇಶ ಪತ್ರದಲ್ಲಿ ತಾಯಿಯ ಹೆಸರು ಸನ್ನಿ ಲಿಯೋನ್ ಮತ್ತು ತಂದೆಯ ಹೆಸರು ಇಮ್ರಾನ್ ಹಶ್ಮಿ ಎಂದು ನಮೂದಾಗಿದೆ ಎಂದು ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಟ್ವೀಟ್ ಮಾಡಿದೆ. ಸನ್ನಿ ಲಿಯೋನ್ ‘ಈಗಿನ ಮಕ್ಕಳು ತುಂಬಾ ಅದ್ಭುತ’ ಎಂದು ನಗುತ್ತಾ ಆರ್​ಜೆಡಿ ಟ್ವೀಟ್​ ಅನ್ನು ರಿಟ್ವೀಟ್ ಮಾಡಿದ್ದಾರೆ.

ಮುಜಾಫರ್​ಪುರದ ಧನರಾಜ್ ಭಗತ್ ಪದವಿ ಕಾಲೇಜಿನ ದ್ವಿತೀಯ ವರ್ಷದ ಬಿಎ ವಿದ್ಯಾರ್ಥಿ ಕುಂದನ್ ಕುಮಾರ್ ಪರೀಕ್ಷಾ ಪ್ರವೇಶ ಪತ್ರದಲ್ಲಿ ತಂದೆ, ತಾಯಿಯರ ಹೆಸರು ಸನ್ನಿ ಲಿಯೋನ್ ಮತ್ತು ಇಮ್ರಾನ್ ಹಶ್ಮಿ ಎಂದು ನಮೂದಾಗಿದೆ. ಇಮ್ರಾನ್ ಹಶ್ಮಿ ಟ್ವೀಟ್ ಮಾಡುವ ಮೂಲಕ ‘ಇವರು ನನ್ನವರಲ್ಲ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಪರೀಕ್ಷಾ ಪ್ರವೇಶ ಪತ್ರದ ಸ್ಕ್ರೀನ್ ಶಾಟ್ ಅನ್ನು ಭೀಮರಾವ್ ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾಲಯ ಗಮನಕ್ಕೆ ತಂದಾಗ ಅಧಿಕಾರಿಗಳು ಆಶ್ಚರ್ಯಗೊಂಡಿದ್ದಾರೆ. ಈತ ಉತ್ತರ ಬಿಹಾರ ಮುಜಾಫರ್​ಪುರದ ನಿವಾಸಿಯೆಂದು ಹೇಳಲಾಗಿದೆ.

ಮಾದಕ ನಟಿ ಸನ್ನಿ ಲಿಯೋನ್​ಗೆ ಭಾರತ ಸೇಫ್​ ಅಲ್ವಂತೆ!

Published On - 9:21 pm, Mon, 14 December 20