ಸೋಂಕಿತ ಪತ್ನಿಯನ್ನ ನೋಡಲು ಬಂದ ಪತಿರಾಯ ಆತ್ಮಹತ್ಯೆಗೆ ಯತ್ನಿಸಿದ, ಎಲ್ಲಿ?

ಹುಬ್ಬಳ್ಳಿ:ಕೊರೊನಾ ಸೋಂಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ನಿಯನ್ನು ನೋಡಲು ಬಂದ ಪತಿ, ಆಸ್ಪತ್ರೆಯ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಸೂರಣಗಿ ಗ್ರಾಮದ ಮುತ್ತುರಾಜ ಶಿವಣ್ಣವರ (26) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಇನ್ನು ಮುತ್ತುರಾಜ ಶಿವಣ್ಣವರ ಪತ್ನಿಗೆ ಕೊರೊನಾ ಸೋಂಕು ತಗುಲಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇಳೆ ಪತ್ನಿಯನ್ನು ನೋಡಲು ಬಂದ ಮುತ್ತುರಾಜ ಶಿವಣ್ಣವರ, ನಿನ್ನೆ ರಾತ್ರಿ ಹುಬ್ಬಳ್ಳಿಯ […]

ಸೋಂಕಿತ ಪತ್ನಿಯನ್ನ ನೋಡಲು ಬಂದ ಪತಿರಾಯ ಆತ್ಮಹತ್ಯೆಗೆ ಯತ್ನಿಸಿದ, ಎಲ್ಲಿ?

Updated on: Aug 26, 2020 | 11:18 AM

ಹುಬ್ಬಳ್ಳಿ:ಕೊರೊನಾ ಸೋಂಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ನಿಯನ್ನು ನೋಡಲು ಬಂದ ಪತಿ, ಆಸ್ಪತ್ರೆಯ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಸೂರಣಗಿ ಗ್ರಾಮದ ಮುತ್ತುರಾಜ ಶಿವಣ್ಣವರ (26) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಇನ್ನು ಮುತ್ತುರಾಜ ಶಿವಣ್ಣವರ ಪತ್ನಿಗೆ ಕೊರೊನಾ ಸೋಂಕು ತಗುಲಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ವೇಳೆ ಪತ್ನಿಯನ್ನು ನೋಡಲು ಬಂದ ಮುತ್ತುರಾಜ ಶಿವಣ್ಣವರ, ನಿನ್ನೆ ರಾತ್ರಿ ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿರುವ PMSSY ಆಸ್ಪತ್ರೆಯ ಮ‌ೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು, ಮುತ್ತುರಾಜ ಶಿವಣ್ಣವರನನ್ನು ವಶಕ್ಕೆ ಪಡೆದು, ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣದ ಬಗ್ಗೆ ತನಿಖೆ ಮಾಡುತ್ತಿದ್ದಾರೆ.