ಮನೆ ಕೆಳಗೆ ಬಂಗಾರ ಸಿಕ್ಕಿದ್ದೇ ಇವರಿಗೆ ಶಾಪವಾಗಿಬಿಡ್ತು..
ರಾಯಚೂರು: ಜಿಲ್ಲೆಯು ಚಿನ್ನದ ನಾಡು ಎಂದೇ ಪ್ರಸಿದ್ಧಿ ಪಡೆದಿದೆ. ಜಿಲ್ಲೆಯಲ್ಲಿರುವ ಪ್ರತಿಷ್ಠಿತ ಹಟ್ಟಿ ಚಿನ್ನದ ಗಣಿಯಿಂದ ಜಿಲ್ಲೆಗೆ ಹೆಸರು ಮತ್ತು ಕೀರ್ತಿ ದೊರೆತಿದೆ ಎಂದು ಹೇಳಿದರೆ ತಪ್ಪಾಗೋದಿಲ್ಲ. ಆದರೆ, ಗಣಿ ಪಕ್ಕದ ನಿವಾಸಿಗಳಿಗೆ ಹಟ್ಟಿ ಚಿನ್ನದ ಗಣಿ ಶಾಪವಾಗಿ ಪರಿಣಮಿಸಿದೆ. ಹೌದು, ಜಿಲ್ಲೆಯ ಲಿಂಗಸೂಗುರು ತಾಲೂಕಿನ ಹಟ್ಟಿ ಚಿನ್ನದ ಗಣಿ ವ್ಯಾಪ್ತಿಗೆ ಬರುವ ಬುದ್ದಿನ್ನಿ ಗ್ರಾಮದ ನಿವಾಸಿಗಳಿಗೆ ಚಿನ್ನದ ಗಣಿ ಕಂಟಕವಾಗಿಬಿಟ್ಟಿದೆ. ಗಣಿಯ ಚಟುವಟಿಕೆಗಳಿಂದ ಹೊರಹೊಮ್ಮುವ ಭಾರಿ ಸದ್ದಿಗೆ ಗ್ರಾಮದ ಹಲವಾರು ಮನೆಗಳಿಗೆ ತೊಂದರೆ ಉಂಟಾಗಿದ್ದು ಇನ್ನು […]

ರಾಯಚೂರು: ಜಿಲ್ಲೆಯು ಚಿನ್ನದ ನಾಡು ಎಂದೇ ಪ್ರಸಿದ್ಧಿ ಪಡೆದಿದೆ. ಜಿಲ್ಲೆಯಲ್ಲಿರುವ ಪ್ರತಿಷ್ಠಿತ ಹಟ್ಟಿ ಚಿನ್ನದ ಗಣಿಯಿಂದ ಜಿಲ್ಲೆಗೆ ಹೆಸರು ಮತ್ತು ಕೀರ್ತಿ ದೊರೆತಿದೆ ಎಂದು ಹೇಳಿದರೆ ತಪ್ಪಾಗೋದಿಲ್ಲ. ಆದರೆ, ಗಣಿ ಪಕ್ಕದ ನಿವಾಸಿಗಳಿಗೆ ಹಟ್ಟಿ ಚಿನ್ನದ ಗಣಿ ಶಾಪವಾಗಿ ಪರಿಣಮಿಸಿದೆ.
ಹೌದು, ಜಿಲ್ಲೆಯ ಲಿಂಗಸೂಗುರು ತಾಲೂಕಿನ ಹಟ್ಟಿ ಚಿನ್ನದ ಗಣಿ ವ್ಯಾಪ್ತಿಗೆ ಬರುವ ಬುದ್ದಿನ್ನಿ ಗ್ರಾಮದ ನಿವಾಸಿಗಳಿಗೆ ಚಿನ್ನದ ಗಣಿ ಕಂಟಕವಾಗಿಬಿಟ್ಟಿದೆ. ಗಣಿಯ ಚಟುವಟಿಕೆಗಳಿಂದ ಹೊರಹೊಮ್ಮುವ ಭಾರಿ ಸದ್ದಿಗೆ ಗ್ರಾಮದ ಹಲವಾರು ಮನೆಗಳಿಗೆ ತೊಂದರೆ ಉಂಟಾಗಿದ್ದು ಇನ್ನು ಕೆಲವರ ಮನೆಗಳು ಸದ್ದಿಲ್ಲದೆ ನೆಲಸಮವಾಗುತ್ತಿದೆ.
ಅಂತೆಯೇ, ಗಣಿಯ ಸದ್ದಿಗೆ ಗುಂಡಯ್ಯ ಸ್ವಾಮಿ ಎಂಬ ಗ್ರಾಮಸ್ಥರ ಮನೆ ಕುಸಿದಿದ್ದು ಆತನ ಇಡೀ ಕುಟುಂಬ ಬೀದಿಗೆ ಬಂದಿದೆ. ಹಾಗಾಗಿ, ಮನೆ ಕಳೆದುಕೊಂಡ ಗುಂಡಯ್ಯ ಸ್ವಾಮಿ ಕುಟುಂಬ ಗ್ರಾಮದ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದಾರೆ. ಜೊತೆಗೆ, ತಮಗಾದ ನಷ್ಟಕ್ಕೆ ಗಣಿಯ ಆಡಳಿತ ಮಂಡಳಿ ಹತ್ತಿರ ಪರಿಹಾರಕ್ಕಾಗಿ ಮನವಿ ಸಹ ಮಾಡಿದ್ದಾರಂತೆ. ಆದರೆ, ಬಡ ಗುಂಡಯ್ಯ ಸ್ವಾಮಿಯ ಮನವಿಗೆ ಗಣಿ ಅಧಿಕಾರಿಗಳು ಡೋಂಟ್ ಕೇರ್ ಎಂಬಂತೆ ವರ್ತಿಸಿದ್ದಾರೆ ಎಂದು ತಿಳಿದುಬಂದಿದೆ.