ಬಾಲ್ಯದಲ್ಲಿ ಮನೆಯ ಹಿರಿಯರೊಂದಿಗೆ ಊರಿನ ಕಿರಾಣಿ ಅಂಗಡಿಗೆ ಹೋಗುವುದು ಉಲ್ಲಾಸವನ್ನು ತಂದುಕೊಡುತಿತ್ತು. ಜಾತ್ರೆಯಲ್ಲಿ ತಗೆದುಕೊಳ್ಳುವ ಅಲಂಕಾರಿಕ ವಸ್ತು ಒಂದಿಷ್ಟು ಖುಷಿಕೊಡುತ್ತಿತ್ತು. ಸಂತೆಯಲ್ಲಿ ಸುತ್ತಾಡುವುದು ಮನಸಿಗೆ ಸಂತಸ ತರುತ್ತಿತ್ತು. ಇದೆಲ್ಲಾ ಹಳೆಯ ನೆನಪು. ಈಗ ಪ್ರಪಂಚ ಪರಿವರ್ತನೆ ಹೊಂದಿದೆ, ನಾಗರಿಕರಣದ ನೆಪದಲ್ಲಿ ಸಾಕಷ್ಟು ಉದ್ಯಮಗಳು ಹುಟ್ಟಿಕೊಂಡಿದೆ ಇದರಿಂದಾಗಿ ಸಣ್ಣ ಪುಟ್ಟ ವ್ಯಾಪಾರವೂ ಮೂಲೆಸರಿದು ಹೋಗಿದೆ. ಆಧುನಿಕ ಯುಗದಲ್ಲಿ ಸುಸಜ್ಜಿತ ಕಟ್ಟಡಗಳಲ್ಲಿ ಸಿಗುವ ವಸ್ತುಗಳಿಗಷ್ಟೆ ಬೇಡಿಕೆ. ಬೀದಿ ಬದಿಯಲ್ಲಿ , ಚಿಕ್ಕ ಪುಟ್ಟ ಅಂಗಡಿಗಳಲ್ಲಿ ಸಿಗುವ ಸಾಮಾಗ್ರಿಗಳನ್ನು ಕೊಂಡುಕೊಳ್ಳುವವರು ಕಡಿಮೆ.
ಈ ಬದಲಾವಣೆ ಇಂದು ನಿನ್ನೆಯದಲ್ಲಾ ಹಲವು ವರ್ಷದ್ದು ಆದರೆ ಈಗ ಮತ್ತೆ ಸಂಪರ್ಕವಾಗಿದೆ. ಇದರ ಬಗೆಗೆ ಹೆಚ್ಚು ವಿಶ್ಲೇಷಣೆ ಬೇಡ ಅಂದುಕೊಳ್ಳುತ್ತೇನೆ. ಎರಡೂ ಮೂರು ವರ್ಷಗಳಿಂದ ಶ್ರೀಮಂತ ಬಡವ ಎನ್ನುವ ಭೇದಭಾವವಿಲ್ಲದೆ ಎಲ್ಲರ ರಕ್ತವನ್ನು ತಿಗಣೆಯಂತೆ ಹೀರಿದ್ದು ಕೋವಿಡ್ -19 ವೈರಸ್ ಇದರಿಂದಾಗಿ ದೇಶವೇ ತತ್ತರಿಸಿ ಹೋಯಿತು.ಪರಿಸ್ಥಿತಿ ನಿಭಾಯಿಸಲು ಸರ್ಕಾರ ಲಾಕ್ ಡೌನ್ ಮಾಡಿತ್ತು. ಈ ಕಾರಣದಿಂದ ದಿನ ಕೂಲಿ ಕಾರ್ಮಿಕರಿಂದ ಎಲ್ಲಾ ವರ್ಗದ ಜನರ ಆರ್ಥಿಕ ಸ್ಥಿತಿ ಹದಗೆಟ್ಟಿತು.
ಅನೇಕ ಜನ ಅಂಗಡಿ ಬಾಡಿಗೆ ಕಟ್ಟಲಾಗದೇ ಬಿಟ್ಟು ಬಂದು ಮತ್ತೆ ಹಳೆಯ ಬೀದಿ ಬದಿ ವ್ಯಾಪರಿಗಳಾಗಿದ್ದಾರೆ, ತಪ್ಪೆನಿಲ್ಲ ಆದರೂ ಏಣಿ ಹತ್ತುವಾಗ ಇರುವ ಹುಮ್ಮಸ್ಸು ಇಳಿಯುವಾಗ ಆ ಹುಮ್ಮಸ್ಸು ಇರಲ್ಲ .ಹಾಗಾಗಿ ಆ ಸಂದರ್ಭವನ್ನು ನಿಭಾಯಿಸುವುದು ಸುಲಭದ ಮಾತಲ್ಲಾ ! ಇಂತಹ ಸನ್ನಿವೇಶವನ್ನು ನಿಭಾಯಿಸುವ ವ್ಯಕ್ತಿಯನ್ನು ನಾನು ಕಣ್ಣಾರೆ ಕಂಡೆ. ಕೊಳೆಯ ಬಟ್ಟೆ ಧರಿಸಿ ಕೆಂಡದಂತಹ ಬಿಸಿಲಿನಲ್ಲಿ , ನಾಲ್ಕು ಬಗೆಯ ಹಣ್ಣನ್ನು ಹಳೆಯ ಮೇಜಿನ ಮೇಲಿಟ್ಟು ಧೂಳು ತುಂಬಿದ್ದ ಕುರ್ಚಿಯ ಮೇಲೆ ಕೂತಿದ್ದರು . ಅಲ್ಲಿರುವ ಹಣ್ಣು ನನಗೆ ಬೇಕೆ ಎಂದು ಇರಲಿಲ್ಲ. ಆದರೂ ಕುತೂಹಲದಿಂದಾಗಿ ತಡೆಯಲಾಗದೇ ಅಲ್ಲಿಗೆ ಹೋಗಿ ಆ ವ್ಯಕ್ತಿಯಲ್ಲಿ ಮಾತಿಗೆ ನಿಂತೆ, ಹಾಗೆ ಬರಲೂ ಮನಸಾಗಲಿಲ್ಲ ಹಣ್ಣು ತಾಜಾತನ ಕಳೆದು ಸುಟ್ಟುಹೋಗಿತ್ತು.
ಆದರೂ 95 ರೂಪಾಯಿಗಳ ಹಣ್ಣನ್ನು ಖರೀದಿಸಿದೆ ಆ ವ್ಯಕ್ತಿ ಚಿಲ್ಲರೆ ಇಲ್ಲವೆಂದು ಒಂದು ದಾಳಿಂಬೆ ಹಣ್ಣು ಕೊಟ್ಟರು. ಆದರೆ ಯಾಕೋ ಈ ವಿಚಾರ ಇಷ್ಟವಾಗದೇ ಜೋರಾಗಿಯೇ ಪ್ರಶ್ನಿಸಿದೇ ಯಾಕೆ ಚಿಲ್ಲರೆ ಬದಲಾಗಿ ದಾಳಿಂಬೆ ಕೊಟ್ಟಿದ್ದೀರಾ ನೀವು ಈ ಹಣ್ಣನ್ನು ಎಷ್ಟು ರೂಪಾಯಿಗೆ ಖರೀದಿ ಮಾಡಿದ್ದೀರಾ? ಎಂದು ಕೇಳಿದಾಗ ಆಗ ಅವರು ಇಲ್ಲ ನಾನು ತೂಕಕ್ಕೆ ಇಷ್ಟು ಎಂದು ಹೇಳಿದರು ಮತ್ತೆ ನನಗೆ ಯಾಕೆ ಇಷ್ಟಕ್ಕೆ ಕೊಡುತ್ತಿರಿ ಎಂದಾಗ ಅವರ ಮುಖದಲ್ಲಿ ಅಸಹಾಯಕತೆ ಇತ್ತು ,ಮುಗ್ಧತೆ ನೆಲೆಮಾಡಿತ್ತು ನಾನು ಹೇಳಿದೆ ನೋಡಿ ಸರ್ ವವ್ಯಹಾರ ಸರಿಯಾಗಿ ಮಾಡಿ ಎಂದು ಮುನ್ನಡೆದೆ ನನಗೆ ಕಾದು ಕುಳಿತ ಆಟೋಚಾಲಕರು ನಮ್ಮ ಸಂಭಾಷಣೆ ಕಂಡು ಮಂದಹಾಸಬೀರಿದರು.
ಪವಿತ್ರ ಕುಂದಾಪುರ
ಆಳ್ವಾಸ್ ಕಾಲೇಜು ಮೂಡುಬಿದರೆ