ಅಜ್ಮೀರ್‌ ಲಿಂಕ್: ಒಂದೇ ಸಮುದಾಯ ಗುರಿಯಾಗಿಸ ಬೇಡಿ ಎಂದು ಸಾವಿರಾರು ಮಂದಿ ಮಾಡಿದ್ದೇನು?

|

Updated on: May 12, 2020 | 10:59 AM

ದಾವಣಗೆರೆ: ಜಿಲ್ಲೆಯ ಶಿವನಗರದಲ್ಲಿ ಅಜ್ಮೀರ್‌ನಿಂದ ಬಂದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸೋಂಕಿತನಿದ್ದ ಏರಿಯಾವನ್ನು ಸೀಲ್‌ಡೌನ್‌ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿತ್ತು. ಆದ್ರೆ ಸ್ಥಳೀಯರು ಸೀಲ್‌ಡೌನ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಮುದಾಯ ಗುರಿಯಾಗಿಸಿಕೊಂಡು ಸೀಲ್‌ಡೌನ್ ಮಾಡ್ತಿದ್ದೀರಿ. ಹೀಗಾಗಿ ಸೀಲ್‌ಡೌನ್ ಮಾಡುವುದಕ್ಕೆ ನಾವು ಬಿಡುವುದಿಲ್ಲ ಎಂದು ಸ್ಥಳೀಯ ನಿವಾಸಿಗಳು ಅಧಿಕಾರಿಗಳ ಜತೆ ವಾಗ್ವಾದಕ್ಕಿಳಿದ ಘಟನೆ ನಡೆದಿದೆ. P-847, 22 ವರ್ಷದ ವ್ಯಕ್ತಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆತ ಅಜ್ಮೀರ್‌ನಿಂದ ದಾವಣಗೆರಗೆ ಆಗಮಿಸಿದ. ಹೀಗಾಗಿ ಇಡೀ ಏರಿಯಾವನ್ನು ಸೀಲ್​ಡೌನ್ ಮಾಡಲು […]

ಅಜ್ಮೀರ್‌ ಲಿಂಕ್: ಒಂದೇ ಸಮುದಾಯ ಗುರಿಯಾಗಿಸ ಬೇಡಿ ಎಂದು ಸಾವಿರಾರು ಮಂದಿ ಮಾಡಿದ್ದೇನು?
Follow us on

ದಾವಣಗೆರೆ: ಜಿಲ್ಲೆಯ ಶಿವನಗರದಲ್ಲಿ ಅಜ್ಮೀರ್‌ನಿಂದ ಬಂದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸೋಂಕಿತನಿದ್ದ ಏರಿಯಾವನ್ನು ಸೀಲ್‌ಡೌನ್‌ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿತ್ತು. ಆದ್ರೆ ಸ್ಥಳೀಯರು ಸೀಲ್‌ಡೌನ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಸಮುದಾಯ ಗುರಿಯಾಗಿಸಿಕೊಂಡು ಸೀಲ್‌ಡೌನ್ ಮಾಡ್ತಿದ್ದೀರಿ. ಹೀಗಾಗಿ ಸೀಲ್‌ಡೌನ್ ಮಾಡುವುದಕ್ಕೆ ನಾವು ಬಿಡುವುದಿಲ್ಲ ಎಂದು ಸ್ಥಳೀಯ ನಿವಾಸಿಗಳು ಅಧಿಕಾರಿಗಳ ಜತೆ ವಾಗ್ವಾದಕ್ಕಿಳಿದ ಘಟನೆ ನಡೆದಿದೆ. P-847, 22 ವರ್ಷದ ವ್ಯಕ್ತಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಆತ ಅಜ್ಮೀರ್‌ನಿಂದ ದಾವಣಗೆರಗೆ ಆಗಮಿಸಿದ. ಹೀಗಾಗಿ ಇಡೀ ಏರಿಯಾವನ್ನು ಸೀಲ್​ಡೌನ್ ಮಾಡಲು ಜಿಲ್ಲಾಡಳಿತ ನಿರ್ಧಾರಿಸಿತ್ತು. ಆದರೆ ಅಲ್ಲಿನ ನೀವಾಸಿಗಳು ಜಿಲ್ಲಾಡಳಿತದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಅಂತರವನ್ನೂ ಮರೆತು ಸಾವಿರಾರು ಜನರು ಒಂದೇ ಸ್ಥಳದಲ್ಲಿ ಸೇರಿ ಪ್ರತಿಭಟನೆ ನಡೆಸಿದ್ದಾರೆ.