ಕೊರೊನಾ ಸಂಕಷ್ಟದಲ್ಲೂ ಬ್ಯಾಕ್ ಸಿಬ್ಬಂದಿಯಿಂದಲೇ ಜನ್​ಧನ್ ಹಣ ಲೂಟಿ!

|

Updated on: May 12, 2020 | 10:23 AM

ಬಾಗಲಕೋಟೆ: ಕೊರೊನಾ ಸಂಕಷ್ಟದಲ್ಲಿರುವ ಬಡವರಿಗೆ ಮೋಸ ಆಗ್ತಿದೆ. ಹುನಗುಂದ ತಾಲೂಕಿನ ಗೋನಾಳ ಎಸ್ಟಿ ಗ್ರಾಮದಲ್ಲಿ ಜನ್​ಧನ್ ಖಾತೆ ದುಡ್ಡಿಗೆ ಕನ್ನ ಹಾಕಲಾಗುತ್ತಿದೆ. ಹುನಗುಂದ ಎಸ್​ಬಿಐ ಶಾಖೆಯ ಪ್ರತಿನಿಧಿ ರಿಯಾಜ್ ಬಡ ಜನರಿಗೆ ಮೋಸ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ರಿಯಾಜ್, ಬ್ಯಾಂಕ್​ನ ಗ್ರಾಹಕರ ಸೇವಾ ಕೇಂದ್ರದ ಪ್ರತಿನಿಧಿ. ಈತ ಮಹಿಳೆಯರಿಂದ ಹೆಬ್ಬೆಟ್ಟು ಪಡೆದು ಖಾತೆಯಲ್ಲಿ ಇದ್ದ ಎಲ್ಲ ಹಣವನ್ನೂ ಡ್ರಾ ಮಾಡಿ ಗ್ರಾಹಕರಿಗೆ 400, 500 ರೂ. ಮಾತ್ರ ಕೊಟ್ಟು ಮೋಸ ಮಾಡುತ್ತಿದ್ದ. ಗ್ರಾಮದ ಒಬ್ಬ […]

ಕೊರೊನಾ ಸಂಕಷ್ಟದಲ್ಲೂ ಬ್ಯಾಕ್ ಸಿಬ್ಬಂದಿಯಿಂದಲೇ ಜನ್​ಧನ್ ಹಣ ಲೂಟಿ!
Follow us on

ಬಾಗಲಕೋಟೆ: ಕೊರೊನಾ ಸಂಕಷ್ಟದಲ್ಲಿರುವ ಬಡವರಿಗೆ ಮೋಸ ಆಗ್ತಿದೆ. ಹುನಗುಂದ ತಾಲೂಕಿನ ಗೋನಾಳ ಎಸ್ಟಿ ಗ್ರಾಮದಲ್ಲಿ ಜನ್​ಧನ್ ಖಾತೆ ದುಡ್ಡಿಗೆ ಕನ್ನ ಹಾಕಲಾಗುತ್ತಿದೆ. ಹುನಗುಂದ ಎಸ್​ಬಿಐ ಶಾಖೆಯ ಪ್ರತಿನಿಧಿ ರಿಯಾಜ್ ಬಡ ಜನರಿಗೆ ಮೋಸ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ರಿಯಾಜ್, ಬ್ಯಾಂಕ್​ನ ಗ್ರಾಹಕರ ಸೇವಾ ಕೇಂದ್ರದ ಪ್ರತಿನಿಧಿ. ಈತ ಮಹಿಳೆಯರಿಂದ ಹೆಬ್ಬೆಟ್ಟು ಪಡೆದು ಖಾತೆಯಲ್ಲಿ ಇದ್ದ ಎಲ್ಲ ಹಣವನ್ನೂ ಡ್ರಾ ಮಾಡಿ ಗ್ರಾಹಕರಿಗೆ 400, 500 ರೂ. ಮಾತ್ರ ಕೊಟ್ಟು ಮೋಸ ಮಾಡುತ್ತಿದ್ದ. ಗ್ರಾಮದ ಒಬ್ಬ ಮಹಿಳೆ ಮೊಬೈಲ್​ಗೆ ಬಂದ ಮೆಸೇಜ್ ನೋಡಿದಾಗ ಮೋಸ ಬಯಲಾಗಿದೆ.

ಇದೇ ರೀತಿ ಗ್ರಾಮದ ಹಲವು ಮಹಿಳೆಯರಿಗೆ ರಿಯಾಜ್ ಮೋಸ ಮಾಡಿದ್ದಾನೆ. ಈ ಬಗ್ಗೆ ಎಸ್​ಬಿಐ ಮ್ಯಾನೇಜರ್​ಗೆ ಮಾಹಿತಿ ನೀಡಿದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹೀಗಾಗಿ ಮೋಸಗಾರನ ವಿರುದ್ದ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್​ಗೆ ಮನವಿ ಮಾಡಿಕೊಂಡಿದ್ದಾರೆ. ಹಾಗೂ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Published On - 10:21 am, Tue, 12 May 20