ಮಂಡ್ಯ: ಕೊರೊನಾದಿಂದಾಗಿ ಗ್ರಾಮ ದೇವತೆ ಪೂಜೆಗೆ ಅಡ್ಡಿಯಾದ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆಯೇ 3 ಕಲ್ಲುಗಳನ್ನಿಟ್ಟು ಗ್ರಾಮಸ್ಥರು ಪೂಜೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ NES ಬಡಾವಣೆಲ್ಲಿ ನಡೆದಿದೆ.
ಪ್ರತಿವರ್ಷ ಪಟ್ಟಣದಲ್ಲಿ ವಿಜ್ರಂಭೃಣೆಯಿಂದ ಗ್ರಾಮದೇವತೆಯ ಪೂಜೆ ನಡೆಯುತ್ತಿತ್ತು. ಆದರೆ ಈ ವರ್ಷ ಈ ಗ್ರಾಮ ಕೊರೊನದಿಂದ ಕಂಟೋನ್ಮೆಂಟ್ ಪ್ರದೇಶವಾಗಿರೋ ಕಾರಣ ಗ್ರಾಮ ದೇವತೆ ಪೂಜೆಗೆ ಅಡ್ಡಿಯಾಗಿದೆ. ಕೋಟೆ ಕಾಳಮ್ಮ ಬೀದಿಯಲ್ಲಿರೋ ದಂಡಿನಮಾರಮ್ಮ ದೇವಾಲಯದ ಬಾಗಿಲು ಮುಚ್ಚಲಾಗಿದೆ. ಹೀಗಾಗಿ ಮಳವಳ್ಳಿ ಪಟ್ಟಣದ ಗ್ರಾಮ ದೇವತೆಯ ಪೂಜೆಯನ್ನು ಗ್ರಾಮಸ್ಥರು ರಸ್ತೆ ಮಧ್ಯೆಯೇ ನೆರವೇರಿಸಿದ್ದಾರೆ.
ರಸ್ತೆ ಮಧ್ಯೆ 3 ಕಲ್ಲಿಟ್ಟು ಅದರ ಮುಂದೆ ನೈವೇದ್ಯ ಇಟ್ಟು ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ. ಗ್ರಾಮ ದೇವತೆಯ ಶಾಂತಿಗೆ ಭಕ್ತರು ಕೋಳಿಗಳನ್ನು ಬಲಿ ನೀಡಿದ್ದಾರೆ. ಶೀಘ್ರವಾಗಿ ಗ್ರಾಮಕ್ಕೆ ವಕ್ಕರಿಸಿರೋ ಕೊರೊನಾ ಓಡಿಸುವಂತೆ ಭಕ್ತರು ಮೊರೆ ಇಟ್ಟಿದ್ದಾರೆ.
Published On - 11:29 am, Tue, 12 May 20