ಬೆಂಗಳೂರು: ಮೊದಲೇ ಕೊರೊನಾ ಸೋಂಕಿತರಿಂದ ಕಂಗಾಲಾಗಿರೋ ಬೆಂಗಳೂರಿಗೆ ಈಗ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಕಾಣುತ್ತಿದೆ. ಇದಕ್ಕೆ ಕಾರಣ ತಮಿಳುನಾಡಿನಲ್ಲಿ ಹೆಚ್ಚಿರುವ ಕೊರೊನಾ ಮಾರಿಯಿಂದ ತಪ್ಪಿಸಿಕೊಳ್ಳಲು ಅಲ್ಲಿನ ಜನ ಈಗ ಬೆಂಗಳೂರಿಗೆ ಸಾವಿರಾರು ಸಂಖ್ಯೆಯಲ್ಲಿ ಗುಳೆ ಬರುತ್ತಿದ್ದಾರೆ.
ಹೌದು ತಮಿಳುನಾಡಿನಲ್ಲಿ ಕೊರೊನಾ ಪ್ರಕರಣಗಳು ಔಟ್ ಆಫ್ ಕಂಟ್ರೋಲ್ ಆಗಿವೆ. ಲಕ್ಷಾಂತರ ಜನರು ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ. ಪರಿಣಾಮ ತಮಿಳುನಾಡಿನಲ್ಲಿನ ಲಕ್ಷಾಂತರ ಜನರು ಈಗ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಕರ್ನಾಟಕ-ತಮಿಳುನಾಡು ಗಡಿಯ ಅತ್ತಿಬೆಲೆ ಚೆಕ್ ಪೋಸ್ಟ್‌ನಲ್ಲಿ ಭಾರೀ ಜನಸಂದಣಿ ಮತ್ತು ಟ್ರಾಫಿಕ್ ಆಗಿದೆ.
ಹೀಗೆ ಸಾವಿರಾರು ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ತಮಿಳರ ಆಗಮನದಿಂದ ಎಚ್ಚೆತ್ತಿರುವ ಅಧಿಕಾರಿಗಳು ಈ-ಪಾಸ್ ಹೊಂದಿರುವವರನ್ನು ಮಾತ್ರ ಚೆಕ್ ಮಾಡಿ ಒಳಬಿಡುತ್ತಿದ್ದಾರೆ. ಒಳಬಂದವರಿಗೆ ಹೊಂ ಕ್ವಾರಂಟೈನ್ ಸೀಲ್ ಹಾಕಿ ಬಿಡುತ್ತಿದ್ದಾರೆ. ಈ-ಪಾಸ್ ಇಲ್ಲದ ಇನ್ನುಳಿದವರನ್ನ ವಾಪಸ್ ಕಳಿಸುತ್ತಿದ್ದಾರೆ.
Published On - 12:24 pm, Mon, 6 July 20