ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಕಲು, ಮೂವರು ವಿದ್ಯಾರ್ಥಿಗಳು ಡಿಬಾರ್‌

| Updated By:

Updated on: Jun 27, 2020 | 12:10 PM

ಗದಗ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳನ್ನ ಡಿಬಾರ್‌ ಮಾಡಿದ ಘಟನೆ ಗದಗ ನಗರದಲ್ಲಿ ನಡೆದಿದೆ. ಗದಗನ ಮುನ್ಸಿಪಲ್‌ ಕಾಲೇಜ್‌ನ ಪರೀಕ್ಷಾ ಕೇಂದ್ರದಲ್ಲಿ ಇಂದು ಗಣೀತ ವಿಷಯದಲ್ಲಿ ಪರೀಕ್ಷೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಕ್ಕೆ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ದಿಡೀರ್‌ ಭೇಟಿ ನೀಡಿದ್ರು. ಆಗ ಗಣಿತ ವಿಷಯದ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದು ಕಂಡು ಬಂದಿದೆ. ಇದನ್ನು ಗಮನಿಸಿದ ಆಯುಕ್ತ ಮೇಜರ್‌ ಮೇಜರ್ ಸಿದ್ದಲಿಂಗಯ್ಯ, ತಕ್ಷಣವೇ ಈ […]

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಕಲು, ಮೂವರು ವಿದ್ಯಾರ್ಥಿಗಳು ಡಿಬಾರ್‌
Follow us on

ಗದಗ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳನ್ನ ಡಿಬಾರ್‌ ಮಾಡಿದ ಘಟನೆ ಗದಗ ನಗರದಲ್ಲಿ ನಡೆದಿದೆ.

ಗದಗನ ಮುನ್ಸಿಪಲ್‌ ಕಾಲೇಜ್‌ನ ಪರೀಕ್ಷಾ ಕೇಂದ್ರದಲ್ಲಿ ಇಂದು ಗಣೀತ ವಿಷಯದಲ್ಲಿ ಪರೀಕ್ಷೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಕ್ಕೆ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ದಿಡೀರ್‌ ಭೇಟಿ ನೀಡಿದ್ರು. ಆಗ ಗಣಿತ ವಿಷಯದ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದು ಕಂಡು ಬಂದಿದೆ.

ಇದನ್ನು ಗಮನಿಸಿದ ಆಯುಕ್ತ ಮೇಜರ್‌ ಮೇಜರ್ ಸಿದ್ದಲಿಂಗಯ್ಯ, ತಕ್ಷಣವೇ ಈ ಮೂವರು ವಿದ್ಯಾರ್ಥಿಗಳನ್ನ ಪರೀಕ್ಷೆಯಿಂದ ಡಿಬಾರ್‌ ಮಾಡಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಸಿದ್ದಲಿಂಗಯ್ಯ ಹೇಳಿಕೆ ಕೂಡಾ ನೀಡಿದ್ದಾರೆ.