ಕರ್ನಾಟಕದ ವಿದ್ಯಾಕಾಶಿಯಲ್ಲಿ ಕನ್ನಡ ಭಾಷೆಯ ಕೊಲೆಗೆ ಸಂಚು..!
ಧಾರವಾಡ: ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸಗಳು ನಡೆದೇ ಇವೆ. ಧಾರವಾಡದಲ್ಲೂ ಕನ್ನಡ ನುಡಿಗೆ ಯಾವುದೇ ಚ್ಯುತಿ ಬಾರದಂತೆ ಜನ ವ್ಯವಹರಿಸುತ್ತಾರೆ, ಕನ್ನಡವನ್ನು ಪೊರೆಯುತ್ತಾರೆ. ರಾಜ್ಯ ಸರಕಾರವೂ ಆಡಳಿತ ಭಾಷೆಯಾಗಿ ಕನ್ನಡವನ್ನು ಕಡ್ಡಾಯಗೊಳಿಸಿ ಬಹಳ ದಿನಗಳೇ ಕಳೆದಿವೆ. ಆದರೆ ಅದೇ ಸರಕಾರದ ಅಡಿ ಬರುವ ಅನೇಕ ಇಲಾಖೆಗಳ ಅಧಿಕಾರಿಗಳಿಗೆ ಕನ್ನಡ ಅಂದ್ರೆ ಅಷ್ಟಕ್ಕಷ್ಟೇ.. ಕನ್ನಡ ಅದ್ರೆ ದಿವ್ಯ ನಿರ್ಲಕ್ಷ್ಯ. ಸಂಬಂಧಪಟ್ಟ ಅಧಿಕಾರಿಗಳಿಗೆ ಕನ್ನಡ ಕಲಿಸುವ ಅಗತ್ಯವಿದೆಯಾ ಎನ್ನಿಸುವ ವಾತಾವರಣ ನಿರ್ಮಾಣವಾಗಿದೆ ವಿದ್ಯಾಕಾಶಿ ಧಾರವಾಡದಲ್ಲಿ! […]
ಧಾರವಾಡ: ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸಗಳು ನಡೆದೇ ಇವೆ. ಧಾರವಾಡದಲ್ಲೂ ಕನ್ನಡ ನುಡಿಗೆ ಯಾವುದೇ ಚ್ಯುತಿ ಬಾರದಂತೆ ಜನ ವ್ಯವಹರಿಸುತ್ತಾರೆ, ಕನ್ನಡವನ್ನು ಪೊರೆಯುತ್ತಾರೆ.
ರಾಜ್ಯ ಸರಕಾರವೂ ಆಡಳಿತ ಭಾಷೆಯಾಗಿ ಕನ್ನಡವನ್ನು ಕಡ್ಡಾಯಗೊಳಿಸಿ ಬಹಳ ದಿನಗಳೇ ಕಳೆದಿವೆ. ಆದರೆ ಅದೇ ಸರಕಾರದ ಅಡಿ ಬರುವ ಅನೇಕ ಇಲಾಖೆಗಳ ಅಧಿಕಾರಿಗಳಿಗೆ ಕನ್ನಡ ಅಂದ್ರೆ ಅಷ್ಟಕ್ಕಷ್ಟೇ.. ಕನ್ನಡ ಅದ್ರೆ ದಿವ್ಯ ನಿರ್ಲಕ್ಷ್ಯ. ಸಂಬಂಧಪಟ್ಟ ಅಧಿಕಾರಿಗಳಿಗೆ ಕನ್ನಡ ಕಲಿಸುವ ಅಗತ್ಯವಿದೆಯಾ ಎನ್ನಿಸುವ ವಾತಾವರಣ ನಿರ್ಮಾಣವಾಗಿದೆ ವಿದ್ಯಾಕಾಶಿ ಧಾರವಾಡದಲ್ಲಿ!
ಹೌದು ಉತ್ತರ ಕರ್ನಾಟಕದ ಪ್ರಮುಖ ವಿದ್ಯಾಕೇಂದ್ರ ಮತ್ತು ವಿದ್ಯಾಕಾಶಿ ಎಂದೇ ಧಾರವಾಡ ಖ್ಯಾತಿಯಾಗಿದೆ. ಆದ್ರೆ ಇಲ್ಲಿನ ಅನೇಕ ಇಲಾಖೆಗಳ ನಾಮ ಫಲಕಗಳಲ್ಲಿರುವ ಕನ್ನಡ ಗಮನಿಸಿದ್ರೆ ಕನ್ನಡಿಗರ ಹೃದಯ ಚೂರು ಚೂರಾಗುವಂತಿದೆ. ನಾಮಫಲಕಗಳಲ್ಲಿ ಬಳಸಿರುವ ಕನ್ನಡ ಶಬ್ಧಗಳು ಕನ್ನಡಿಗರ ಹೃದಯ ಕಿತ್ತು ಬರುವಂತೆ ಮಾಡುತ್ತವೆ.
ನಾಮಫಲಕಗಳಲ್ಲಿ ಕನ್ನಡದ ಕಗ್ಗೊಲೆ ಧಾರವಾಡ ನಗರದ ಹೃದಯ ಭಾಗದಲ್ಲಿರುವ ಸರ್ಕ್ಯೂಟ್ ಹೌಸ್ ಅನ್ನುವುದು ಅಧಿಕಾರಿಗಳ ಪಾಲಿಗೆ ‘ಸರ್ಕ್ಯೂಟ ಹೌಸ’ ಆಗಿದೆ. ಇನ್ನು ನಿತ್ಯವೂ ಸಾವಿರಾರು ಜನರು ಭೇಟಿ ನೀಡುವ ನಗರದ ಬಸ್ ನಿಲ್ದಾಣ ‘ಕೇಂದ್ರಿಯ ಬಸ್ ನಿಲ್ದಾಣ’ ಆಗಿದೆ.
ಹಾಗೆಯೇ.. ನಗರದ ಅರಣ್ಯ ಇಲಾಖೆಯ ಹೊರ ಭಾಗದಲ್ಲಿನ ದೊಡ್ಡ ನಾಮಫಲಕದಲ್ಲಿ ‘ಅರಣ್ಯ ಸಂಕಿರ್ಣ’ ಅಂತಾ ಬರೆಯಲಾಗಿದೆ. ಬೆಳಗಾವಿ ರಸ್ತೆಯಲ್ಲಿ ದೊಡ್ಡದಾದ ‘ಪಾವರ್ ಗ್ರಿಡ’ ಎದ್ದು ಕಾಣುತ್ತದೆ. ಇನ್ನು ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ‘ಬೇಲೂರ ಕೈಗಾರಿಕೊದ್ಯಮಗಳ’ ಸಂಘ ಕಣ್ಣಿಗೆ ಬೀಳುತ್ತದೆ.
ಇವು ಕೇವಲ ಕೆಲವು ಉದಾಹರಣೆಗಳು ಮಾತ್ರ. ವಿದ್ಯಾಕಾಶಿ ಧಾರವಾಡ ನಗರದಲ್ಲಿ ಪುರುಸೊತ್ತು ಮಾಡಿಕೊಂಡು ಒಂದು ಸುತ್ತು ಹೋಗಿ ಬಂದರೆ ಇಂತಹ ಅನೇಕ ಫಲಕಗಳನ್ನು ಕಾಣಬಹುದು.
ಸಂಬಂಧಪಟ್ಟ ಅಧಿಕಾರಿಗಳು ಯಾಕೆ ಇವುಗಳನ್ನು ಗಮನಿಸುವುದಿಲ್ಲವಾ? ಯಾಕೆ ತಿದ್ದುಪಡಿ ಮಾಡುತ್ತಿಲ್ಲ ಎನ್ನುವುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆ. ಹೀಗೆ ಅಪಭ್ರಂಶ ಕನ್ನಡ ಬಳಸಿ, ಕನ್ನಡ ಉಳಿಯಲಿ ಎಂದರೆ ಹೇಗೆ? ಇದಕ್ಕೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೇ ಉತ್ತರಿಸಬೇಕಿದೆ. -ನರಸಿಂಹಮೂರ್ತಿ ಪ್ಯಾಟಿ
Published On - 12:57 pm, Sat, 27 June 20