‘ಪಾಸಿಟೀವ್’ ನ್ಯೂಸ್! ಕೊರೊನಾ ಗೆದ್ದ ಬೆಂಗಳೂರಿನ ನೂರು ವರ್ಷದ ಅಜ್ಜಿ
ಬೆಂಗಳೂರು: ಹೆಮ್ಮಾರಿ ಕೊರೊನಾದಿಂದ ಯಾವಾಗಲೂ ನಕಾರಾತ್ಮಕ ಸುದ್ದಿಗಳನ್ನ ಕೇಳುತ್ತಿರುವ ಸಂದರ್ಭದಲ್ಲಿ ಸಾವಿರಾರು ಕೊರೊನಾ ರೋಗಿಗಳಿಗೆ ಇವರೇ ಸ್ಫೂರ್ತಿಯಾಗಿದ್ದಾರೆ. ಹೌದು, ಕೇವಲ 9 ದಿನದಲ್ಲಿ 99 ವರ್ಷದ ಕೊರೊನಾ ಸೋಂಕಿತ ವೃದ್ಧೆ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲದೆ, ಕರ್ನಾಟಕದಲ್ಲಿ ಅತ್ಯಂತ ಹಿರಿಯ ವಯಸ್ಸಿನ ಕೊರೊನಾ ರೋಗಿ ಗುಣಮುಖ ಆಗಿರೋದು ಇವರೇ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಿ ಆಗಿರುವ ವೃದ್ಧೆ ಮಾರ್ಸಿಲಿನ್ ಸಾಲ್ಡಾನಾರಿಗೆ ಸೋಂಕು ತಗುಲಿತ್ತು. 99 ವರ್ಷ ತುಂಬಿ 100ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೆ ಜೂನ್ 18 […]
ಬೆಂಗಳೂರು: ಹೆಮ್ಮಾರಿ ಕೊರೊನಾದಿಂದ ಯಾವಾಗಲೂ ನಕಾರಾತ್ಮಕ ಸುದ್ದಿಗಳನ್ನ ಕೇಳುತ್ತಿರುವ ಸಂದರ್ಭದಲ್ಲಿ ಸಾವಿರಾರು ಕೊರೊನಾ ರೋಗಿಗಳಿಗೆ ಇವರೇ ಸ್ಫೂರ್ತಿಯಾಗಿದ್ದಾರೆ. ಹೌದು, ಕೇವಲ 9 ದಿನದಲ್ಲಿ 99 ವರ್ಷದ ಕೊರೊನಾ ಸೋಂಕಿತ ವೃದ್ಧೆ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲದೆ, ಕರ್ನಾಟಕದಲ್ಲಿ ಅತ್ಯಂತ ಹಿರಿಯ ವಯಸ್ಸಿನ ಕೊರೊನಾ ರೋಗಿ ಗುಣಮುಖ ಆಗಿರೋದು ಇವರೇ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಿ ಆಗಿರುವ ವೃದ್ಧೆ ಮಾರ್ಸಿಲಿನ್ ಸಾಲ್ಡಾನಾರಿಗೆ ಸೋಂಕು ತಗುಲಿತ್ತು. 99 ವರ್ಷ ತುಂಬಿ 100ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೆ ಜೂನ್ 18 ರಂದು ತಮ್ಮ 99ನೇ ಹುಟ್ಟುಹಬ್ಬದ ದಿನವೇ ವಿಕ್ಟೋರಿಯಾ ಆಸ್ಪತ್ರೆಗೆ ವೃದ್ಧೆ ದಾಖಲಾಗಿದ್ದರು.
ವೃದ್ಧೆಯ ಪುತ್ರ, ಸೊಸೆ ಹಾಗೂ ಮೊಮ್ಮಗನಿಗೂ ಸೋಂಕು ತಗುಲಿತ್ತು. ವಿಕ್ಟೋರಿಯಾದ ಟ್ರಾಮಾ ಕೇರ್ ಸೆಂಟರ್ನಲ್ಲಿ ವೃದ್ಧೆ ಚಿಕಿತ್ಸೆ ಪಡೆಯುತ್ತಿದ್ದರು. ಕೇವಲ 9 ದಿನಕ್ಕೆ ಗುಣಮುಖ ಆಗಿ ಇದೀಗ ಆಸ್ಪತ್ರೆಯಿಂದ ನಿನ್ನೆ ಡಿಸ್ಚಾರ್ಜ್ ಆಗಿದ್ದಾರೆ.
ವೃದ್ಧೆ ಗುಣಮುಖ ಆಗಿರುವುದು ವೈದ್ಯಲೋಕಕ್ಕೂ ಸಂತಸವಾಗಿದೆ. ವಿಕ್ಟೋರಿಯಾ ಟ್ರಾಮಾ ಕೇರ್ ಸೆಂಟರ್ನಲ್ಲಿರುವ ರೋಗಿಗಳಿಗೆಲ್ಲಾ ಧೈರ್ಯ ಹೇಳಿ ಬಂದಿದ್ದಾರೆ.
Published On - 12:26 pm, Sat, 27 June 20