ಕುಡಿದ ಅಮಲಿನಲ್ಲಿ ಹಲ್ಲೆ: 3 ಯುವಕರಿಗೆ ಗ್ರಾಮಸ್ಥರಿಂದ ಧರ್ಮದೇಟು, ಎಲ್ಲಿ?

ಚಿತ್ರದುರ್ಗ: ಮೂವರು ಯುವಕರನ್ನು ಗ್ರಾಮಸ್ಥರು ನಿನ್ನೆ ರಾತ್ರಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ಜಿಲ್ಲೆಯ ಅಡವಿಗೊಲ್ಲರಹಳ್ಳಿಯಲ್ಲಿ ನಡೆದಿದೆ.  ಗ್ರಾಮದ ಶಿವರಾಜ ಎಂಬುವರ ಮೇಲೆ ಯುವಕರು ಕುಡಿದ ಅಮಲಿನಲ್ಲಿ ಹಲ್ಲೆ ಮಾಡಿದ್ದ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದ ಮೂವರು ಯುವಕರಿಗೆ ಗ್ರಾಮಸ್ಥರಿಂದ ಧರ್ಮದೇಟು ಬಿದ್ದಿದೆ. ಶಿವರಾಜ್ ಮತ್ತು ಜಗದೀಶ ಎಂಬುವವರ ನಡುವೆ ಗ್ರಾಮದಲ್ಲಿ ಜಾಗದ ವಿವಾದ ನಡೆಯುತ್ತಿತ್ತು. ಹೀಗಾಗಿ, ಜಗದೀಶ ಪರವಾಗಿ ನಗರದ ಯುವಕರು ಬಂದು ಹಲ್ಲೆ ನಡೆಸಿದ್ದಾರಂತೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭರಮಸಾಗರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು […]

ಕುಡಿದ ಅಮಲಿನಲ್ಲಿ ಹಲ್ಲೆ: 3 ಯುವಕರಿಗೆ ಗ್ರಾಮಸ್ಥರಿಂದ ಧರ್ಮದೇಟು, ಎಲ್ಲಿ?
Updated By: ಸಾಧು ಶ್ರೀನಾಥ್​

Updated on: Aug 08, 2020 | 11:51 AM

ಚಿತ್ರದುರ್ಗ: ಮೂವರು ಯುವಕರನ್ನು ಗ್ರಾಮಸ್ಥರು ನಿನ್ನೆ ರಾತ್ರಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ಜಿಲ್ಲೆಯ ಅಡವಿಗೊಲ್ಲರಹಳ್ಳಿಯಲ್ಲಿ ನಡೆದಿದೆ. 

ಗ್ರಾಮದ ಶಿವರಾಜ ಎಂಬುವರ ಮೇಲೆ ಯುವಕರು ಕುಡಿದ ಅಮಲಿನಲ್ಲಿ ಹಲ್ಲೆ ಮಾಡಿದ್ದ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದ ಮೂವರು ಯುವಕರಿಗೆ ಗ್ರಾಮಸ್ಥರಿಂದ ಧರ್ಮದೇಟು ಬಿದ್ದಿದೆ.

ಶಿವರಾಜ್ ಮತ್ತು ಜಗದೀಶ ಎಂಬುವವರ ನಡುವೆ ಗ್ರಾಮದಲ್ಲಿ ಜಾಗದ ವಿವಾದ ನಡೆಯುತ್ತಿತ್ತು. ಹೀಗಾಗಿ, ಜಗದೀಶ ಪರವಾಗಿ ನಗರದ ಯುವಕರು ಬಂದು ಹಲ್ಲೆ ನಡೆಸಿದ್ದಾರಂತೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭರಮಸಾಗರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದ್ದು ನಗರದ ಯುವಕರಾದ ಜಯಸೂರ್ಯ, ಮಾರುತಿ, ಮತ್ತು ಶರತ್ ನನ್ನು ​ಪೊಲೀಸರು ವಶಕ್ಕೆ ಪಡೆದಿದ್ದಾರೆ.