ಕರ್ನಾಟಕ ಬಂದ್: ಯಾರೂ ಅನುಮತಿ ಕೇಳಿಲ್ಲ.. ನಾವೂ ಕೊಟ್ಟಿಲ್ಲ -ಕಮಲ್​ ಪಂತ್​

ನಾಳೆ ಕರ್ನಾಟಕ ಬಂದ್ ಮಾಡಲೇ ಬೇಕು ಎಂದು ಹಲವು ಕನ್ನಡ ಪರ ಸಂಘಟನೆಗಳು ತಯಾರಿ ನಡಿಸಿವೆ. ಮರಾಠ ನಿಗಮ ಸ್ಥಾಪನೆ ವಿರೋಧಿಸಿ ಡಿಸೆಂಬರ್​ 5ರಂದು ಇಡೀ ಕರ್ನಾಟಕ ಸ್ತಬ್ಧವಾಗಲಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಯಾವ ರೀತಿ ಕ್ರಮ ಕೈಗೊಂಡಿದೆ. ಹಾಗೂ ಇಲಾಖೆ ಅನುಮತಿ ನೀಡಿದೆಯಾ? ಇಲ್ಲವಾ ಎಂಬ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸುದ್ದಿಗೋಷ್ಠಿ ನಡೆಸಿದ್ದಾರೆ.

ಕರ್ನಾಟಕ ಬಂದ್: ಯಾರೂ ಅನುಮತಿ ಕೇಳಿಲ್ಲ.. ನಾವೂ ಕೊಟ್ಟಿಲ್ಲ -ಕಮಲ್​ ಪಂತ್​
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್
Edited By:

Updated on: Dec 05, 2020 | 10:44 AM

ಬೆಂಗಳೂರು: ನಾಳೆ ಕರ್ನಾಟಕ ಬಂದ್ ಮಾಡಲೇ ಬೇಕು ಎಂದು ಹಲವು ಕನ್ನಡ ಪರ ಸಂಘಟನೆಗಳು ತಯಾರಿ ನಡಿಸಿವೆ. ಮರಾಠ ನಿಗಮ ಸ್ಥಾಪನೆ ವಿರೋಧಿಸಿ ಡಿಸೆಂಬರ್​ 5ರಂದು ಇಡೀ ಕರ್ನಾಟಕ ಸ್ತಬ್ಧವಾಗಲಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಯಾವ ರೀತಿ ಕ್ರಮ ಕೈಗೊಂಡಿದೆ. ಹಾಗೂ ಇಲಾಖೆ ಅನುಮತಿ ನೀಡಿದೆಯಾ? ಇಲ್ಲವಾ ಎಂಬ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸುದ್ದಿಗೋಷ್ಠಿ ನಡೆಸಿದ್ದಾರೆ.

ಕರ್ನಾಟಕ ಬಂದ್‌ಗೆ ಯಾರೂ ಅನುಮತಿಯನ್ನು ಕೇಳಿಲ್ಲ. ನಾವು ಕರ್ನಾಟಕ ಬಂದ್‌ಗೆ ಅನುಮತಿಯನ್ನೂ ಕೊಟ್ಟಿಲ್ಲ ಎಂದಿದ್ದಾರೆ. ನಾಳೆ ಬೆಂಗಳೂರಲ್ಲಿ ಯಾವುದೇ ಱಲಿಗೆ ಅವಕಾಶ ಕೊಟ್ಟಿಲ್ಲ. ನಾಳೆ ಎಂದಿನಂತೆ ಜನಜೀವನ ಇರಲಿದೆ. ಹೀಗಾಗಿ ಬಂದ್ ಬಗ್ಗೆ ಭಯ ಬೇಡ. ಯಾರಾದರೂ ಚೇಷ್ಟೆ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ. ರೌಡಿಶೀಟರ್‌ಗಳ ಪಟ್ಟಿ ಮಾಡಿದ್ದೇವೆ, ನಿಗಾ ವಹಿಸಿದ್ದೇವೆ ಎಂದು ತಿಳಿಸಿದ್ದಾರೆ.

ಭದ್ರತೆಗಾಗಿ ಸಿದ್ಧರಿದ್ದಾರೆ 15 ಸಾವಿರ ಪೊಲೀಸರು:
ಇನ್ನು ನಾಳೆ ಅನಾವಶ್ಯಕವಾಗಿ ಬಂದ್ ಮಾಡಲು ಕೆಲವರು ನಾನಾ ಪ್ಲಾನ್​ಗಳನ್ನ ಮಾಡ್ತಾರೆ. ಈ ವೇಳೆ ಬೆಂಕಿ ಹಚ್ಚುವುದಂತಹ ದುರ್ಘಟನೆಗಳು ಸಂಭವಿಸಬಹುದು ಹೀಗಾಗಿ ಪೊಲೀಸರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಭದ್ರತೆಗಾಗಿ 15 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಹೊಯ್ಸಳ, ಡಿಸಿಪಿಗಳು ಸಿಟಿ ರೌಂಡ್ಸ್‌ನಲ್ಲಿ ಇರುತ್ತಾರೆ. 33 KSRP, 32 ಸಿಎಆರ್ ತುಕಡಿಗಳನ್ನು ನಿಯೋಜಿಸಿದ್ದಾರೆ.

Published On - 2:00 pm, Fri, 4 December 20