ಅಧಿಕಾರಿಗಳ ಬೇಜವಾಬ್ದಾರಿ: ಲಕ್ಷಾಂತರ ರಾಗಿ ಹಣ ಬೇರೆ ಖಾತೆಗೆ ವರ್ಗಾವಣೆ, ರೈತ ಕಂಗಾಲು..

ಮಂಡ್ಯ: ಬ್ಯಾಂಕ್ ಅಧಿಕಾರಿಗಳ ಎಡವಟ್ಟಿನಿಂದಾಗಿ, ರಾಗಿ ಮಾರಾಟದಿಂದ ರೈತನಿಗೆ ಸಿಗಬೇಕಾದ 1.20 ಲಕ್ಷ ಹಣ ಬೇರೊಬ್ಬರ ಖಾತೆಗೆ ಜಮಾವಣೆ ಆಗಿದ್ದು, ತನ್ನ ಪಾಲಿನ ಹಣ ಸಿಗದೇ ರೈತ ಕಂಗಾಲಾಗಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ನಡೆದಿದೆ. ಪಾಂಡವಪುರ ತಾಲೂಕಿನ ಬಸವನಗುಡಿ ಕೊಪ್ಪಲು ಗ್ರಾಮದ ದೊಡ್ಡೇಗೌಡ ಎಂಬುವವರು ರಾಜ್ಯ ಉಗ್ರಾಣ ನಿಗಮದಿಂದ ತೆರೆದಿದ್ದ ರಾಗಿ ಖರೀದಿ ಕೇಂದ್ರಕ್ಕೆ 2019-20 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ 38 ರಾಗಿಯನ್ನು ಮಾರಾಟ ಮಾಡಿದ್ದಾರೆ. ರಾಗಿ ಮಾರಾಟದ ಹಣ ಜಮಾವಣೆಗಾಗಿ ದೊಡ್ಡೇಗೌಡರು […]

ಅಧಿಕಾರಿಗಳ ಬೇಜವಾಬ್ದಾರಿ: ಲಕ್ಷಾಂತರ ರಾಗಿ ಹಣ ಬೇರೆ ಖಾತೆಗೆ ವರ್ಗಾವಣೆ, ರೈತ ಕಂಗಾಲು..
ಸಾಧು ಶ್ರೀನಾಥ್​ Edited By:

Updated on: Jul 25, 2020 | 7:29 PM

ಮಂಡ್ಯ: ಬ್ಯಾಂಕ್ ಅಧಿಕಾರಿಗಳ ಎಡವಟ್ಟಿನಿಂದಾಗಿ, ರಾಗಿ ಮಾರಾಟದಿಂದ ರೈತನಿಗೆ ಸಿಗಬೇಕಾದ 1.20 ಲಕ್ಷ ಹಣ ಬೇರೊಬ್ಬರ ಖಾತೆಗೆ ಜಮಾವಣೆ ಆಗಿದ್ದು, ತನ್ನ ಪಾಲಿನ ಹಣ ಸಿಗದೇ ರೈತ ಕಂಗಾಲಾಗಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ನಡೆದಿದೆ.

ಪಾಂಡವಪುರ ತಾಲೂಕಿನ ಬಸವನಗುಡಿ ಕೊಪ್ಪಲು ಗ್ರಾಮದ ದೊಡ್ಡೇಗೌಡ ಎಂಬುವವರು ರಾಜ್ಯ ಉಗ್ರಾಣ ನಿಗಮದಿಂದ ತೆರೆದಿದ್ದ ರಾಗಿ ಖರೀದಿ ಕೇಂದ್ರಕ್ಕೆ 2019-20 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ 38 ರಾಗಿಯನ್ನು ಮಾರಾಟ ಮಾಡಿದ್ದಾರೆ.

ರಾಗಿ ಮಾರಾಟದ ಹಣ ಜಮಾವಣೆಗಾಗಿ ದೊಡ್ಡೇಗೌಡರು ಸೂಕ್ತ ದಾಖಲೆಯನ್ನು ಬ್ಯಾಂಕ್ ಅಧಿಕಾರಿಗಳಿಗೆ ನೀಡಿದ್ದು, ಆದರೆ ಅಧಿಕಾರಿಗಳ ಎಡವಟ್ಟಿನಿಂದಾಗಿ ರೈತನಿಗೆ ಬರಬೇಕಾದ ಹಣ ಬೇರೊಬ್ಬರ ಖಾತೆಗೆ ವರ್ಗಾವಣೆಯಾಗಿದೆ.

ಹಣ ಸಿಗದೆ ಕಚೇರಿಯಿಂದ ಕಚೇರಿಗೆ ರೈತನ ಅಲೆದಾಟ
ಹೀಗಾಗಿ ಹಲವು ದಿನ ಕಳೆದರೂ ಹಣ ಕೈಸೇರದಿದ್ದಾದಗ ಕಂಗಾಲಾದ ರೈತ ಬ್ಯಾಂಕ್ನಲ್ಲಿ ಬಂದು ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. 1,20,612 ರೂ ಹಣ ಸಾಕಮ್ಮ ಎಂಬ ಮಹಿಳೆ ಖಾತೆಗೆ ವರ್ಗಾವಣೆಯಾಗಿದ್ದು, ತನ್ನ ಪಾಲಿನ ಹಣವನ್ನು ತನಗೆ ಕೊಡಿಸುವಂತೆ ರೈತ ಸರ್ಕಾರಿ ಕಚೇರಿ, ಬ್ಯಾಂಕ್ ಗಳಿಗೆ ಅಲೆದಾಡಿದರೂ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡಿ ರೈತನನ್ನು ಕಳುಹಿಸುತ್ತಿದ್ದಾರೆ. ಇದರಿಂದಾಗಿ ಹಣ ಸಿಗದೆ ರೈತ ಕಚೇರಿಯಿಂದ ಕಚೇರಿಗೆ ಅಲೆಯುವ ಪರಿಸ್ಥಿತಿ ಎದುರಾಗಿದೆ.

Published On - 1:31 pm, Fri, 24 July 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us