ಬೆಂಗಳೂರು: ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅವ್ಯವಹಾರದ ಕುರಿತು Tv9 ಕನ್ನಡ ಸುದ್ದಿ ವಾಹಿನಿ ವಿಸ್ತೃತ ವರದಿ ಮಾಡಿತ್ತು. ಈ ಕುರಿತಂತೆ ಇಂದು (ಫೆ.4)) ಟಿವಿ9 ಕನ್ನಡ ಡಿಜಿಟಲ್ ಲೈವ್ನಲ್ಲಿ ಚರ್ಚೆ ನಡೆಯಿತು. ಕ್ರೈಂ ವಿಭಾಗದ ಮುಖ್ಯಸ್ಥ ಕಿರಣ್ ಹಾಗೂ ನಿವೃತ್ತ ಡಿಐಜಿ ಜಯರಾಮಯ್ಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಟಿವಿ9 ಆ್ಯಂಕರ್ ಮಾಲ್ತೇಶ್ ಚರ್ಚೆ ನಡೆಸಿಕೊಟ್ಟರು.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತಂತೆ ನಿವೃತ್ತ ಡಿಐಜಿ ಜಯರಾಮಯ್ಯ ಮಾತನಾಡಿ, ವಿಶೇಷ ಸೌಲಭ್ಯಗಳಾಗಿ ಕೋಣೆಯ ವ್ಯವಸ್ಥೆ, ಅಕ್ಕಿ, ಬೇಳೆ, ಮಾಂಸಾಹಾರ ಹೀಗೆ ಇತ್ಯಾದಿ ವಿಶೇಷ ಸೌಲಭ್ಯಗಳು ಜೈಲಿನಲ್ಲಿ ಸಿಗುತ್ತಿರುವುದು ಅವ್ಯವಹಾರ. ಈ ವಿಷಯ ಮೇಲಾಧಿಕಾರಿಗಳಿಗೆ ಗೊತ್ತಿಲ್ವೇ ಎಂಬ ಪ್ರಶ್ನೆ ಮೂಡುತ್ತದೆ. ಹಣ ಸುಲಿಗೆ ಮಾಡುವ ಮೂಲಕ ಅವ್ಯವಹಾರ ನಡೆಯುತ್ತಿರುವ ಕೃತ್ಯಗಳು ನಿಲ್ಲಬೇಕು. ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲೇ ಬೇಕಾದ ಅಗತ್ಯ ಎದುರಾಗಿದೆ. ಈ ಕುರಿತಂತೆ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು. ಆಗ ಮಾತ್ರ ಇಂತಹ ಕೃತ್ಯಗಳನ್ನು ತಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಿಡಿಗೇಡಿ ಕೈದಿಗಳು, ಮಾಮೂಲಿ ಕೈದಿಗಳನ್ನು ಉತ್ತೇಜಿಸುತ್ತಾರೆ. ಇಂತಹ ಕೃತ್ಯಕ್ಕೆ ಕ್ರಮ ಕೈಗೊಳ್ಳಬೇಕಿದೆ. ಜೈಲಿನ ಒಳಗೆ ಏನು ನಡೆಯುತ್ತಿದೆ ಎಂಬುದರ ಕುರಿತಾಗಿ ಮೇಲಧಿಕಾರಿಗಳು ತಿಳಿದುಕೊಳ್ಳಬೇಕು. ಅಕ್ಕಿ, ಬೇಳೆ ಮಾರಾಟ ಮಾಡುತ್ತಾರೆ. ಈ ಮೂಲಕ ವ್ಯಾಪಾರ ನಡೆಸುತ್ತಿದ್ದಾರೆ ಎಂದರೆ ಅದು ಅವ್ಯವಹಾರ. ಕೊಂಡುಕೊಳ್ಳದಿದ್ದರೆ ಊಟ ಕಡಿತಗೊಳಿಸುವಂತೆ ಬೆದರಿಕೆ ಒಡ್ಡುತ್ತಾರೆ. ಕೈದಿಗಳನ್ನು ಹಿಡಿತಕ್ಕೆ ತರಬೇಕು ಅಂದರೆ ಅದು ಸುಲಭದ ಮಾತಲ್ಲ. ಮೇಲಾಧಿಕಾರಿಗಳೇ ಅವರ ಜೊತೆ ಸೇರಿ ಅವ್ಯವಹಾರಕ್ಕೆ ತೊಡಗಿದರೆ ಸುಧಾರಣೆಯ ಮಾತೆಲ್ಲಿ? ಈ ಕುರಿತಂತೆ ಗಮನ ಹರಿಸಲೇಬೇಕು ಎಂದು ಮಾತನಾಡಿದರು.
ಸಂವಾದದಲ್ಲಿ ಮಾತನಾಡಿದ ವರದಿಗಾರ ಕಿರಣ್, ಈ ಕುರಿತಂತೆ ತನಿಖೆ ಪ್ರಾರಂಭಿಸಿದಾಗ ಕೈದಿಗಳಿಗೆ ಯಾವ ಯಾವ ಸೌಲಭ್ಯಗಳಿವೆ ಎಂಬುದನ್ನು ಮೊದಲು ತಿಳಿದುಕೊಂಡೆವು. ಜೈಲುಗಳಲ್ಲಿ ಮತ್ತಷ್ಟು ಕ್ರೈಂಗಳನ್ನು ಹುಟ್ಟುಹಾಕುವಂಥ ವ್ಯವಸ್ಥೆಗಳು ರೂಪುಗೊಳ್ಳುತ್ತಿವೆ. ಜೈಲಿನ ಅಧಿಕಾರಿಗಳೇ ಇದಕ್ಕೆ ಬೆಂಬಲ ನೀಡುತ್ತಿದ್ದಾರೆ. ಹಣ ನೀಡಿ ಸೌಲಭ್ಯಗಳನ್ನು ಪಡೆಯದಿದ್ದರೆ, ಹೊಡೆಯುವುದು, ಹಿಂಸಿಸುವ ಕೃತ್ಯಗಳನ್ನು ಮಾಡುತ್ತಾರೆ. ಆಗ ತಾನೆ ಬಂದ ಕೈದಿ ಬೇಸತ್ತು ಹಣ ನೀಡಿ ಸೌಲಭ್ಯ ಪಡೆಯುವಂತೆ ಮಾಡುತ್ತಾರೆ ಎಂದು ಅಗ್ರಹಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಹೇಳಿದರು.
ಜೈಲಿನಲ್ಲಿರುವ ವಿಶೇಷ ಸೌಲಭ್ಯ ಪಡೆಯದಿದ್ದರೆ ಹಳೆಯ ಕೈದಿಗಳಿಂದ, ಆಗತಾನೆ ಬಂದ ಕೈದಿಗಳಿಗೆ ಟಾರ್ಚರ್ ಕೊಡಿಸಲಾಗುತ್ತದೆ. ಹಣ ಪಡೆದು ಸೌಲಭ್ಯ ಪಡೆಯದಿದ್ದರೆ ಹಳೆಯ ಕೈದಿಗಳು, ಹೊಸ ಕೈದಿಗಳಿಗೆ ಹೊಡೆದು ಸೌಲಭ್ಯ ಪಡೆಯುವಂತೆ ಟಾರ್ಚರ್ ನೀಡುತ್ತಿದ್ದಾರೆ. ಹೀಗಾಗಿ ಹಳೆ ಕೈದಿಗಳ ಟಾರ್ಚರ್ ಸಹಿಸಲಾಗದೆ ಕೈದಿಗಳು ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಹೇಳಿದರು.
Facebook Live| ಲಸಿಕೆ ವಿತರಣೆಯಾಗುತ್ತಿದ್ದರೂ ಜನರಲ್ಲಿ ಉತ್ಸಾಹ ಕಡಿಮೆ ಇದೆ : ಸಾರ್ವಜನಿಕರ ಹಿಂಜರಿಕೆಗೆ ಕಾರಣ ಏನು?