ರಾಯಚೂರು: ತಾಲೂಕು ಪಂಚಾಯಿತಿ ಕಚೇರಿಯಲ್ಲಿ ವಿಕಲಚೇತನರಿಗೆ ಬೈಕ್ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ನೇತೃತ್ವದಲ್ಲಿ ಬೈಕ್ಗಳ ವಿತರಣೆಗೆ ಚಾಲನೆ ಸುಕ್ಕಿದೆ.
ಜಿಲ್ಲಾ ಪಂಚಾಯತ್ ಕಚೇರಿಯ ಗೋದಾಮಿನಲ್ಲಿ ಅಂಗವಿಕಲರಿಗಾಗಿ ಸುಮಾರು 2 ಕೋಟಿಗೂ ಅಧಿಕ ಹಣ ಖರ್ಚು ಮಾಡಿ ಖರೀದಿಸಿರುವ ಬೈಕ್‌ಗಳನ್ನೆಲ್ಲಾ ಇರಿಸಲಾಗಿತ್ತು. ಕಳೆದ 8 ತಿಂಗಳಾದ್ರೂ ಇದುವರೆಗೂ ರಾಯಚೂರು ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯತಿ ಕಚೇರಿಗಳಿಗೆ ಸರಬರಾಜು ಆಗಿರಲಿಲ್ಲ. ಈ ಬಗ್ಗೆ ವಿಸ್ತೃತ ವರದಿಯನ್ನು ಟಿವಿ9 ಡಿಜಿಟಲ್ ಪ್ರಕಟಿಸಿದ್ದು ಇದರ ಫಲವಾಗಿ ಫಲಾನುಭವಿಗಳಿಗೆ ಸಿಗಬೇಕಿದ್ದ ಬೈಕ್‌ಗಳು ಸಿಕ್ಕಿವೆ.
ಟಿವಿ9 ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು ತ್ರಿಚಕ್ರ ವಾಹನಗಳ ವಿತರಣೆ ಮಾಡಿದ್ದಾರೆ. ಕೊನೆಗೂ ಗೋದಾಮಿನಲ್ಲಿ ತುಕ್ಕು ಹಿಡಿಯುವ ಸ್ಥಿತಿಗೆ ಬಂದಿದ್ದ ತ್ರಿಚಕ್ರ ವಾಹನಗಳನ್ನು ವಿಕಲಚೇತನರಿಗೆ ವಿತರಿಸಲಾಗಿದೆ. ಈ ಹಿಂದೆ ಜಿಲ್ಲೆಯಾದ್ಯಂತ 240 ಬೈಕ್‌ಗಳು ವಿತರಣೆಯಾಗದೇ ಗೋದಾಮಿನಲ್ಲೆ ಅನಾಥವಾಗಿ ಬಿದ್ದಿದ್ದವು.
ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ.. ಧೂಳು ತಿನ್ನುತ್ತಾ, ಗೋದಾಮಿನಲ್ಲೇ ಬಿದ್ದಿವೆ ಅಂಗವಿಕಲರಿಗೆ ಸೇರಬೇಕಾದ ಬೈಕ್‌ಗಳು