ನಕಲಿ ನೋಟು ಪ್ರಿಂಟ್​ ಮಾಡ್ತಿದ್ದ ಇಬ್ಬರು ಖದೀಮರು ಅಂದರ್

|

Updated on: Feb 17, 2020 | 2:53 PM

ಬೆಳಗಾವಿ: ನಕಲಿ ನೋಟುಗಳ ಹಾವಳಿಗೆ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ. ಮುರಗೋಡ ಹಾಗೂ ಸದಲಗಾ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಿಪ್ಪಾಣಿ ತಾಲೂಕಿನ ಬೋರಗಾವ ಗ್ರಾಮದಲ್ಲಿ ನಕಲಿ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ. ಬೋರಗಾವ ಗ್ರಾಮದ ವಿಜಯ್ ಬೆಡಕಿಹಾಳ ಮತ್ತು ಅಕ್ಷಯ್ ವಡ್ಡರ್ ಬಂಧಿತರು. ಮುರಗೋಡದ ಬಾರ್‌ವೊಂದರಲ್ಲಿ ನಕಲಿ ನೋಟು ಚಲಾವಣೆಗೆ ಯುವಕನೊಬ್ಬ ಪ್ರಯತ್ನಿಸಿದ್ದಾನೆ. ಈ ವೇಳೆ ನಕಲಿ ನೋಟೆಂದು ತಿಳಿದ ತಕ್ಷಣ, ಮುರಗೋಡ‌‌ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ […]

ನಕಲಿ ನೋಟು ಪ್ರಿಂಟ್​ ಮಾಡ್ತಿದ್ದ ಇಬ್ಬರು ಖದೀಮರು ಅಂದರ್
Follow us on

ಬೆಳಗಾವಿ: ನಕಲಿ ನೋಟುಗಳ ಹಾವಳಿಗೆ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ. ಮುರಗೋಡ ಹಾಗೂ ಸದಲಗಾ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಿಪ್ಪಾಣಿ ತಾಲೂಕಿನ ಬೋರಗಾವ ಗ್ರಾಮದಲ್ಲಿ ನಕಲಿ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ. ಬೋರಗಾವ ಗ್ರಾಮದ ವಿಜಯ್ ಬೆಡಕಿಹಾಳ ಮತ್ತು ಅಕ್ಷಯ್ ವಡ್ಡರ್ ಬಂಧಿತರು.

ಮುರಗೋಡದ ಬಾರ್‌ವೊಂದರಲ್ಲಿ ನಕಲಿ ನೋಟು ಚಲಾವಣೆಗೆ ಯುವಕನೊಬ್ಬ ಪ್ರಯತ್ನಿಸಿದ್ದಾನೆ. ಈ ವೇಳೆ ನಕಲಿ ನೋಟೆಂದು ತಿಳಿದ ತಕ್ಷಣ, ಮುರಗೋಡ‌‌ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಬೋರಗಾವ ಗ್ರಾಮದಲ್ಲಿ ನಕಲಿ ನೋಟು ಪಡೆದ ಬಗ್ಗೆ ಯುವಕ ಮಾಹಿತಿ ನೀಡಿದ್ದಾನೆ.

ಪ್ರಮುಖ ಆರೋಪಿಗಾಗಿ ಶೋಧ:
ಖಚಿತ ಮಾಹಿತಿ ಮೇರೆಗೆ ನಕಲಿ ನೋಟು ಪ್ರಿಂಟ್ ಮಾಡುತ್ತಿದ್ದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಪ್ರಿಂಟರ್ ಸುಡಲು‌ ಆರೋಪಿಗಳು ಯತ್ನಿಸಿದ್ದಾರೆ. ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದ ಪೊಲೀಸರು, 500 ರೂ. ಮುಖಬೆಲೆಯ 14 ನಕಲಿ ನೋಟುಗಳು, ಪ್ರಿಂಟರ್ ಜಪ್ತಿ ಮಾಡಿದ್ದಾರೆ. ಆರೋಪಿಗಳು 5 ಸಾವಿರ ರೂಪಾಯಿ ಅಸಲಿ ನೋಟು ಪಡೆದು 10 ಸಾವಿರ ರೂ. ನಕಲಿ ನೋಟು ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಹಾಗಾಗಿ ಪ್ರಮುಖ ಆರೋಪಿಗಾಗಿ ಮುರಗೋಡ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.


Published On - 2:24 pm, Mon, 17 February 20