ಗದಗ: ಎರಡು ಲಾರಿಗಳ ಮಧ್ಯೆ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಾರಾಯಣಪೂರ ಗ್ರಾಮದಲ್ಲಿ ನಡೆದಿದೆ. ಮೋಹನ್(40) ಮಂಜುನಾಥ(55) ಮೃತ ದುರ್ದೈವಿಗಳು.
ಮೃತ ಮೋಹನ್ ರೋಣ ತಾಲೂಕಿನ ಮೆಣಸಗಿ ನಿವಾಸಿ. ಹಾಗೂ ಮಂಜುನಾಥ ಮೈಸೂರು ಮೂಲದವ. ಗದಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.