
ಚಿಕ್ಕಬಳ್ಳಾಪುರ: ಮನೆ ಕುಸಿದು ಇಬ್ಬರು ಮೃತಪಟ್ಟಿರುವ ಘಟನೆ ಚಿಂತಾಮಣಿ ತಾಲೂಕಿನ ವೈಜಕೂರು ಗ್ರಾಮದಲ್ಲಿ ನಡೆದಿದೆ. ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆ ಕುಸಿದುಬಿದ್ದಿದೆ. ತಂದೆ ರವಿಕುಮಾರ್, ಮಗ ರಾಹುಲ್ ಮೃತರು. ಘಟನೆಯಲ್ಲಿ ತಾಯಿ ಮುನಿರಾಜಮ್ಮ, ಮಗಳು ರುಚಿತಾಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಚಿಕ್ಕಬಳ್ಳಾಪುರದಲ್ಲಿ ಭಾರಿ ಅನಾಹುತ ನಡೆದಿದೆ. ಮಳೆ ರಭಸಕ್ಕೆ ಮನೆ ಕುಸಿದು ತಂದೆ-ಮಗ ಇಬ್ಬರೂ ಮೃತಪಟ್ಟಿದ್ದು, ತಾಯಿ-ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮಳೆಗೆ ಕೆಲಕಡೆ ರಸ್ತೆಗಳು ಮುಳುಗಿವೆ.
ವಿಷಯುಕ್ತ ಇಂಜೆಕ್ಷನ್ ಕೊಟ್ಟು ನನ್ನನ್ನು ಸಾಯಿಸಿಬೇಡಿ:
ಕಣ್ಮುಂದೆ ಗಂಡ-ಮಗ ಮೃತಪಟ್ಟ ಹಿನ್ನೆಲೆಯಲ್ಲಿ ಗಾಯಾಳು ಮುನಿರಾಜಮ್ಮಗೆ ಮಾನಸಿಕ ಅಘಾತವಾಗಿದೆ. ವಿಷಯುಕ್ತ ಇಂಜೆಕ್ಷನ್ ಕೊಟ್ಟು ನನ್ನನ್ನು ಸಾಯಿಸಿಬೇಡಿ ಎಂದು ಕಣ್ಣೀರು ಹಾಕುತ್ತಿದ್ದಾರೆ. ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಮುನಿರಾಜಮ್ಮ ತನ್ನ ಗಂಡ-ಮಗನನ್ನು ಕಳೆದುಕೊಂಡ ನೋವು ತಾಳಲಾಗದೆ ಗೋಳಾಡಿದ್ದಾರೆ.
Published On - 9:18 am, Fri, 23 October 20