ಬೆಂಗಳೂರು: ಆನೆಗಳಿಗೆ ಸಾವಿರ ವರ್ಷಗಳ ನೆನಪು ಅಂತಾರೆ. ಹೀಗಾಗಿಯೇ ಅವು ಆನೆ ದಂಡಿನ ದಾರಿಯನ್ನು ತಲ ತಲಾಂತರ ವರ್ಷಗಳಿಂದಲೂ ಫಾಲೋ ಮಾಡುತ್ತವೆ ಅನ್ನೋದು ಪ್ರಾಣಿ ತಜ್ಞರ ಮಾತು. ಇದು ನಿಜವೆನ್ನುವಂತೆ ಬೆಂಗಳೂರಿನಲ್ಲಿರುವ ಎರಡು ಆನೆಗಳು ಮಾನವರಂತೆ ಮೈಗೆ ತುರುಕೆ ಬಂದಾಗ ಕಡ್ಡಿಯನ್ನು ತೆಗೆದುಕೊಂಡು ಕಿವಿಯನ್ನು ಕೆರೆದುಕೊಳ್ಳುತ್ತಿರುವ ದೃಶ್ಯ ಈಗ ವೈರಲ್ ಆಗಿದೆ.
ಹೌದು ಬೆಂಗಳೂರಿನ ಹೊರ ವಲಯದಲ್ಲಿರುವ ರಾಷ್ಟೀಯ ಉದ್ಯಾನವನ ಅಂದ್ರೆ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್‌ನಲ್ಲಿರುವ ಎರಡು ಆನೆಗಳು ತಮ್ಮ ಮೈ, ಕಿವಿ ಮತ್ತು ತಲೆಯಯಲ್ಲಿ ತುರುಕೆ ಬಂದಾಗ ಸಮೀಪದ ಕಡ್ಡಿಯೊಂದರಿಂದ ಪರಚಿಕೊಳ್ಳುವ ಮೂಲಕ ತುರಕೆಯನ್ನ ನಿವಾರಣೆ ಮಾಡಿಕೊಂಡಿವೆ. ಆನೆಗಳು ಕಿವಿಯಲ್ಲಿ ಕಡ್ಡಿಯನ್ನು ತೂರಿ ಮನುಷ್ಯರಂತೆ ಕೆರೆದುಕೊಳ್ಳುತ್ತಿರುವುದನ್ನು ನೋಡಿದರೆ ನಿಜಕ್ಕೂ ಅಚ್ಚರಿಯನಿಸುತ್ತಿದೆ.
ಹೀಗೆ ಆನೆಗಳು ಕಡ್ಡಿಯಿಂದ ತಮ್ಮ ಮೈ ಮತ್ತು ತಲೆ, ಕಿವಿಗಳನ್ನು ತುರುಚಿಕೊಳ್ಳುವುದನ್ನ ಗಮನಿಸಿದ ಒಬ್ಬರು ಅಚ್ಚರಿಗೊಂಡಿದ್ದಾರೆ. ಅಷ್ಟೇ ಅಲ್ಲ ಅದನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ನಂತರ ಆ ದೃಶ್ಯ ಮಾಧ್ಯಮಗಳಿಗೂ ಸಿಕ್ಕಿದ್ದು ಈಗ ಸಾಕಷ್ಟು ವೈರಲ್ ಆಗಿದೆ.
#WATCH: Two elephants spotted using twigs to comfort themselves at Bannerghatta Biological Park near Bengaluru in Karnataka. pic.twitter.com/JsPbcoNABp
— ANI (@ANI) July 24, 2020