ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು

| Updated By:

Updated on: Jul 03, 2020 | 12:40 PM

ಉಡುಪಿ: ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಬ್ರಹ್ಮಾವರ ತಾಲೂಕಿನ ಬಾರ್ಕೂರು ಹಾಲೆಕೊಡಿ ಎಂಬಲ್ಲಿ ನಡೆದಿದೆ. ಬಾರ್ಕೂರು ಹೊಸಾಳ ಗ್ರಾಮದ ಹರ್ಷ(25) ಮತ್ತು ಕಾರ್ತಿಕ್ (21) ಮೃತ ದುರ್ದೈವಿಗಳು. ನಿನ್ನೆ ರಾತ್ರಿ ಸೀತಾ ನದಿಯಲ್ಲಿ ಮೀನಿಗಾಗಿ ಬಲೆ ಬೀಸಿ ಯುವಕರು ಮನೆಗೆ ಹೋಗಿದ್ದರು. ಇಂದು ಮುಂಜಾನೆ ನದಿಯಲ್ಲಿ ಬಲೆಯನ್ನು ಎಳೆಯುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಮೃತ ಹರ್ಷ, ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ರಿಕವರಿ ಕೆಲಸ ಮಾಡುತ್ತಿದ್ದರು. ಕಾರ್ತಿಕ್ ಕೊನೆಯ ವರ್ಷದ ಬಿಕಾಂ […]

ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು
Follow us on

ಉಡುಪಿ: ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಬ್ರಹ್ಮಾವರ ತಾಲೂಕಿನ ಬಾರ್ಕೂರು ಹಾಲೆಕೊಡಿ ಎಂಬಲ್ಲಿ ನಡೆದಿದೆ. ಬಾರ್ಕೂರು ಹೊಸಾಳ ಗ್ರಾಮದ ಹರ್ಷ(25) ಮತ್ತು ಕಾರ್ತಿಕ್ (21) ಮೃತ ದುರ್ದೈವಿಗಳು.

ನಿನ್ನೆ ರಾತ್ರಿ ಸೀತಾ ನದಿಯಲ್ಲಿ ಮೀನಿಗಾಗಿ ಬಲೆ ಬೀಸಿ ಯುವಕರು ಮನೆಗೆ ಹೋಗಿದ್ದರು. ಇಂದು ಮುಂಜಾನೆ ನದಿಯಲ್ಲಿ ಬಲೆಯನ್ನು ಎಳೆಯುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಮೃತ ಹರ್ಷ, ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ರಿಕವರಿ ಕೆಲಸ ಮಾಡುತ್ತಿದ್ದರು. ಕಾರ್ತಿಕ್ ಕೊನೆಯ ವರ್ಷದ ಬಿಕಾಂ ಓದುತ್ತಿದ್ದ. ಘಟನೆ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.