
ಮಂಡ್ಯ: ಕಾವೇರಿ ನದಿಯಲ್ಲಿ ಕೃಷ್ಣನ ಇಬ್ಬರು ಭಕ್ತರು ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಬಳಿಯಿರುವ ಇಸ್ಕಾನ್‌ನ ಫಾರ್ಮ್ ಹೌಸ್ನಲ್ಲಿ ನಡೆದಿದೆ. ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿ RS ದಾಸ್(43) ಹಾಗೂ ಚಿತ್ರದುರ್ಗದ ನಿವಾಸಿ ಗುಣಾರನವ ದಾಸ್(35) ನೀರುಪಾಲಾದ ದುರ್ದೈವಿಗಳು.
ಆಹಾರ ಸೇವನೆಗೆ ಮುನ್ನ ಸ್ನಾನ ಮಾಡಲು ತೆರಳಿದ್ದ ವೇಳೆ ಆಯಾ ತಪ್ಪಿ ಕಾವೇರಿ ನದಿಯಲ್ಲಿ ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಸಲಾಗುತ್ತಿದ್ದು ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 11:44 am, Sat, 17 October 20