ಒಂದೇ ಸಬ್​ ರಿಜಿಸ್ಟ್ರಾರ್ ಕುರ್ಚಿಗಾಗಿ.. ಒಂದೇ ರೂಂನಲ್ಲಿ 2 ಚೇರ್​ ಹಾಕಿ ಕುಳಿತ ಅಧಿಕಾರಿಗಳು!

| Updated By: ಸಾಧು ಶ್ರೀನಾಥ್​

Updated on: Nov 13, 2020 | 1:40 PM

ದೊಡ್ಡಬಳ್ಳಾಪುರ: ಒಂದೇ ಸಬ್​ ರಿಜಿಸ್ಟ್ರಾರ್ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ನಡುವೆ ಪರೋಕ್ಷ ಕಿತ್ತಾಟ ನಡೆದಿರುವ ಘಟನೆ ನಗರದ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಬೆಳಕಿಗೆ ಬಂದಿದೆ. ಹಾಗಾಗಿ, ಒಂದೇ ಕೊಠಡಿಯಲ್ಲಿ ಇಬ್ಬರು ಅಧಿಕಾರಿಗಳು ಎರೆಡು ಚೇರ್​ಗಳನ್ನ ಹಾಕಿಕೊಂಡು ಕೂತಿದ್ದಾರೆ! ಏನಿದು ಕುರ್ಚಿಯ ಕಿತ್ತಾಟ! ಸಬ್ ರಿಜಿಸ್ಟ್ರಾರ್ಸ್​ ರಂಗರಾಜು ಮತ್ತು ಸತೀಶ್ ನಡುವೆ ಕಿತ್ತಾಟ ನಡೆಯುತ್ತಿದೆ. ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಿಂದ ರಂಗರಾಜು ಅವರ ವರ್ಗಾವಣೆಯಾಗಿದ್ದು ಅವರ ಸ್ಥಾನಕ್ಕೆ ಸತೀಶ್​ರನ್ನ ಸರ್ಕಾರ ನೇಮಕ ಮಾಡಿತ್ತು. […]

ಒಂದೇ ಸಬ್​ ರಿಜಿಸ್ಟ್ರಾರ್ ಕುರ್ಚಿಗಾಗಿ.. ಒಂದೇ ರೂಂನಲ್ಲಿ 2 ಚೇರ್​ ಹಾಕಿ ಕುಳಿತ ಅಧಿಕಾರಿಗಳು!
Follow us on

ದೊಡ್ಡಬಳ್ಳಾಪುರ: ಒಂದೇ ಸಬ್​ ರಿಜಿಸ್ಟ್ರಾರ್ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ನಡುವೆ ಪರೋಕ್ಷ ಕಿತ್ತಾಟ ನಡೆದಿರುವ ಘಟನೆ ನಗರದ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಬೆಳಕಿಗೆ ಬಂದಿದೆ. ಹಾಗಾಗಿ, ಒಂದೇ ಕೊಠಡಿಯಲ್ಲಿ ಇಬ್ಬರು ಅಧಿಕಾರಿಗಳು ಎರೆಡು ಚೇರ್​ಗಳನ್ನ ಹಾಕಿಕೊಂಡು ಕೂತಿದ್ದಾರೆ!

ಏನಿದು ಕುರ್ಚಿಯ ಕಿತ್ತಾಟ!
ಸಬ್ ರಿಜಿಸ್ಟ್ರಾರ್ಸ್​ ರಂಗರಾಜು ಮತ್ತು ಸತೀಶ್ ನಡುವೆ ಕಿತ್ತಾಟ ನಡೆಯುತ್ತಿದೆ. ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಿಂದ ರಂಗರಾಜು ಅವರ ವರ್ಗಾವಣೆಯಾಗಿದ್ದು ಅವರ ಸ್ಥಾನಕ್ಕೆ ಸತೀಶ್​ರನ್ನ ಸರ್ಕಾರ ನೇಮಕ ಮಾಡಿತ್ತು.

ಆದರೆ, ವರ್ಗಾವಣೆ ವಿರುದ್ಧ ರಂಗರಾಜು KAT ಮೊರೆ ಹೋಗಿ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದರು. KAT ತಡೆ ನೀಡಿದರೂ ಮತ್ತೊಬ್ಬ ಅಧಿಕಾರಿ ಸತೀಶ್ ದೊಡ್ಡಬಳ್ಳಾಪುರದಲ್ಲೇ ಕರ್ತವ್ಯ ಮುಂದುವರಿಸಿದ್ದಾರೆ. ಇಬ್ಬರು ಅಧಿಕಾರಿಗಳು ಸದ್ಯ ಕಾನೂನು ಹೋರಾಟ ಮಾಡುತ್ತಾ ಒಂದೇ ಕಚೇರಿಯಲ್ಲಿ ಕೂತಿದ್ದಾರೆ.

ಒಂದು ಸ್ಥಾನಕ್ಕೆ ಒಂದೇ ಕೊಠಡಿಯಲ್ಲಿ ಎರಡು ಚೇರ್​ಗಳನ್ನು ಹಾಕಿಕೊಂಡು ಕೂತಿದ್ದಾರೆ. ಇಬ್ಬರು ಅಧಿಕಾರಿಗಳ ಕಿತ್ತಾಟ ಕೆಳ ಹಂತದ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಪರದಾಡುವ ಸ್ಥಿತಿ ಎದುರಾಗಿದೆ. ಯಾರು ಅಸಲಿ ಅಧಿಕಾರಿ ಅನ್ನೋ ಗೊಂದಲದಲ್ಲಿ ಪರದಾಡುತ್ತಿದ್ದಾರೆ.