ಮತ್ತೊಂದು ಮೆಗಾ ವಂಚನೆ: ಇಬ್ಬರು ಅರೆಸ್ಟ್​, ಪ್ರಮುಖ ಆರೋಪಿ ನಾಪತ್ತೆ

|

Updated on: Jan 25, 2020 | 1:59 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಫಾರಿನ್ ಟ್ರೇಡ್, ಬುಲಿಯನ್ಸ್‌ನಲ್ಲಿ ಹೂಡಿಕೆ ನೆಪದಲ್ಲಿ TTSPL ಕಂಪನಿ ನೂರಾರು ಜನರಿಗೆ ವಂಚನೆ ಮಾಡಿದೆ. ಈ ಸಂಬಂಧ ಇಬ್ಬರು ಆರೋಪಿಗಳ ಬಂಧನವಾಗಿದ್ದು ಪ್ರಮುಖ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ವಂಚನೆ: 2018ರಲ್ಲಿ ಪ್ರಕರಣದ ಪ್ರಮುಖ ಆರೋಪಿ ಹಬಿಬುಲ್ಲಾ ಎಂಬುವನು ಕಂಪನಿ ಆರಂಭಿಸಿದ್ದ. ಈ ಹಿಂದೆ ಹಬಿಬುಲ್ಲಾ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಕಂಪನಿ ಶುರುಮಾಡುತ್ತಿದ್ದಂತೆ ಹೆಚ್ಚಿನ ಲಾಭಾಂಶದ ಆಸೆ […]

ಮತ್ತೊಂದು ಮೆಗಾ ವಂಚನೆ: ಇಬ್ಬರು ಅರೆಸ್ಟ್​, ಪ್ರಮುಖ ಆರೋಪಿ ನಾಪತ್ತೆ
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಫಾರಿನ್ ಟ್ರೇಡ್, ಬುಲಿಯನ್ಸ್‌ನಲ್ಲಿ ಹೂಡಿಕೆ ನೆಪದಲ್ಲಿ TTSPL ಕಂಪನಿ ನೂರಾರು ಜನರಿಗೆ ವಂಚನೆ ಮಾಡಿದೆ. ಈ ಸಂಬಂಧ ಇಬ್ಬರು ಆರೋಪಿಗಳ ಬಂಧನವಾಗಿದ್ದು ಪ್ರಮುಖ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ವಂಚನೆ:
2018ರಲ್ಲಿ ಪ್ರಕರಣದ ಪ್ರಮುಖ ಆರೋಪಿ ಹಬಿಬುಲ್ಲಾ ಎಂಬುವನು ಕಂಪನಿ ಆರಂಭಿಸಿದ್ದ. ಈ ಹಿಂದೆ ಹಬಿಬುಲ್ಲಾ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಕಂಪನಿ ಶುರುಮಾಡುತ್ತಿದ್ದಂತೆ ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ನೂರಾರು ಮಂದಿಯಿಂದ ಹಣ ಹೂಡಿಕೆ ಮಾಡಿಸಿಕೊಂಡಿದ್ದಾನೆ. ಸಾರ್ವಜನಿಕರು 10 ಕೋಟಿಗೂ ಅಧಿಕ ಹಣ ಹೂಡಿಕೆ ಮಾಡಿದ್ದರು. ಬೆಂಗಳೂರಿನ ಜಯನಗರದ 9ನೇ ಹಂತದಲ್ಲಿರುವ TTSPL ಕಂಪನಿ, ಹೂಡಿಕೆದಾರರಿಗೆ ಆರಂಭದಲ್ಲಿ ಲಾಭಾಂಶ ನೀಡಿತ್ತು.

ಐದಾರು ತಿಂಗಳಿಂದ ಹಣ ನೀಡಿದೆ ಕಂಪನಿ ಗ್ರಾಹಕರಿಗೆ ವಂಚನೆ ಮಾಡಿದೆ. ಈ ಬಗ್ಗೆ ನೊಂದ ಹೂಡಿಕೆದಾರರು ತಿಲಕನಗರ ಪೊಲೀಸ್ ಠಾಣೆಗೆ ಸಾಲು ಸಾಲು ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ 1.75 ಕೋಟಿ ರೂ. ವಂಚನೆಯಾದ ಬಗ್ಗೆ ಸದ್ಯ 40 ಮಂದಿ ಪ್ರಕರಣ ದಾಖಲಿಸಿದ್ದಾರೆ.

ಪ್ರಮುಖ ಆರೋಪಿ ನಾಪತ್ತೆ:
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಮಂಜುನಾಥ್, ಮಸಿವುಲ್ಲಾ ಷರೀಫ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 80 ಲಕ್ಷ ರೂ. ಮೌಲ್ಯದ ಒಂದು BMW ಕಾರು, 32 ಲಕ್ಷ ಮೌಲ್ಯದ ಮತ್ತೊಂದು ಐಷಾರಾಮಿ ಕಾರು, 15 ಲಕ್ಷ ಮೌಲ್ಯದ ಕಾರು ಮತ್ತು ಒಂದು ಬಂಗಲೆ ಜಪ್ತಿ ಮಾಡಿದ್ದಾರೆ. ಪ್ರಮುಖ ಆರೋಪಿ ಹಬಿಬುಲ್ಲಾ ದುಬೈನಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಹಬಿಬುಲ್ಲಾಗಾಗಿ ತಿಲಕ್ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


Published On - 1:41 pm, Sat, 25 January 20