ಚಿಕಿತ್ಸೆ ಸಿಗದೆ ವೃದ್ಧೆ ಸಾವು, ಅಂತ್ಯಕ್ರಿಯೆಗೂ ಬರುತ್ತಿಲ್ಲ ಸಂಬಂಧಿಕರು
ಬೆಂಗಳೂರು: ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೊರೊನಾ ಸೋಂಕಿತನ ತಾಯಿ ಮೃತಪಟ್ಟ ಕರುಳು ಹಿಂಡುವಂಥ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಸಂಭವಿಸಿದೆ. ಇದಕ್ಕಿಂತಲೂ ಮನ ನೋಯಿಸುವಂತಹದ್ದು ಅಂದ್ರೆ ವೃದ್ಧೆಯ ಅಂತ್ಯಕ್ರಿಯೆಗೆ ಯಾರೂ ಮುಂದೆ ಬರದಿರೋದು. ಸಂಬಂಧಿಕರು, ನೆರೆಹೊರೆಯವರು, ಆರೋಗ್ಯ ಸಿಬ್ಬಂದಿ ಮತ್ತು 108 ಌಂಬುಲೆನ್ಸ್ ಸಿಬ್ಬಂದಿ ಕೂಡಾ ವೃದ್ದೆಯ ಅಂತ್ಯಕ್ರಿಯೆಗೆ ಮುಂದೆ ಬರುತ್ತಿಲ್ಲ. ಇನ್ನೊಂದೆಡೆ ಮೃತಳ ಮಗ ಕೊರೊನಾ ಸೋಂಕಿನಿಂದ ಆಸ್ಪತ್ರೆ ಸೇರಿದ್ದಾರೆ. ಹೀಗಾಗಿ ಕುಟುಂಬ ಸದಸ್ಯರು ಈಗ ಕಂಗಾಲಾಗಿದ್ದಾರೆ. ಮೃತ ವೃದ್ಧೆಯ ಮಗ […]
ಬೆಂಗಳೂರು: ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೊರೊನಾ ಸೋಂಕಿತನ ತಾಯಿ ಮೃತಪಟ್ಟ ಕರುಳು ಹಿಂಡುವಂಥ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಸಂಭವಿಸಿದೆ.
ಇದಕ್ಕಿಂತಲೂ ಮನ ನೋಯಿಸುವಂತಹದ್ದು ಅಂದ್ರೆ ವೃದ್ಧೆಯ ಅಂತ್ಯಕ್ರಿಯೆಗೆ ಯಾರೂ ಮುಂದೆ ಬರದಿರೋದು. ಸಂಬಂಧಿಕರು, ನೆರೆಹೊರೆಯವರು, ಆರೋಗ್ಯ ಸಿಬ್ಬಂದಿ ಮತ್ತು 108 ಌಂಬುಲೆನ್ಸ್ ಸಿಬ್ಬಂದಿ ಕೂಡಾ ವೃದ್ದೆಯ ಅಂತ್ಯಕ್ರಿಯೆಗೆ ಮುಂದೆ ಬರುತ್ತಿಲ್ಲ. ಇನ್ನೊಂದೆಡೆ ಮೃತಳ ಮಗ ಕೊರೊನಾ ಸೋಂಕಿನಿಂದ ಆಸ್ಪತ್ರೆ ಸೇರಿದ್ದಾರೆ. ಹೀಗಾಗಿ ಕುಟುಂಬ ಸದಸ್ಯರು ಈಗ ಕಂಗಾಲಾಗಿದ್ದಾರೆ.
ಮೃತ ವೃದ್ಧೆಯ ಮಗ ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಎಲ್ಐಸಿಯಲ್ಲಿ ಉದ್ಯೋಗಿಯಾಗಿರುವ ಮೃತ ವೃದ್ಧೆಯ ಪುತ್ರ ಕೂಡಾ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಹಲವಾರು ಗಂಟೆಗಳ ಹೋರಾಟದ ನಂತರ 25,000 ರೂಪಾಯಿಗಳನ್ನ ಕಟ್ಟಿ ಆಕ್ಸ್ಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೃದ್ಧೆಗೂ ಅನಾರೋಗ್ಯ ಎಂದಾಗ ತಾಯಿನ್ನು ಕೂಡಾ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಪುತ್ರ ಆಸ್ಪತ್ರೆಗೆ ಮನವಿ ಮಾಡಿದ್ದ. ಆದರೆ, ಮೊದಲು ಕೋವಿಡ್-19 ಟೆಸ್ಟ್ ಮಾಡಿಸಿ ನಂತರ ದಾಖಲಿಸಿಕೊಳ್ಳುತ್ತೇವೆ ಎಂದು ಆಸ್ಪತ್ರೆಯವರು ಮನವಿಯನ್ನ ತಳ್ಳಿಹಾಕಿದ್ದರು.
ಆದ್ರೆ ಬೆಳಿಗ್ಗೆಯಿಂದ ವೃದ್ಧೆಯ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ವೃದ್ಧೆಯ ಕುಟುಂಬಸ್ಥರು ‘108 ಌಂಬುಲೆನ್ಸ್’ಗೆ ಕರೆ ಮಾಡಿದ್ದಾರೆ. ಆದ್ರೆ ಮನೆಯಿಂದ ಆಸ್ಪತ್ರೆಗೆ ಸ್ಥಳಾಂತರಿಸುವುದಷ್ಟೇ ನಮ್ಮ ಕೆಲಸ, ಮೊದಲು ‘ಬೆಡ್ ಹುಡುಕಿ ನಂತರ ಸ್ಥಳಾಂತರಿಸುತ್ತೇವೆ’ ಎಂದು 108 ಌಂಬುಲೆನ್ನವರು ಜಾರಿಕೊಂಡಿದ್ದಾರೆ. ಆದ್ರೆ ಯಾವುದೇ ಚಿಕಿತ್ಸೆ ಸಿಗದೇ ವೃದ್ಧೆ ನರಳಿ ನರಳಿ ಸಾವನ್ನಪ್ಪಿದ್ದಾರೆ.
Published On - 3:48 pm, Fri, 10 July 20