
ಮೈಸೂರು: ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದ ಹುಲಿ ಬೇಟೆ ಪ್ರಕರಣವನ್ನು ಕಡಿಮೆ ಸಮಯದಲ್ಲಿ ಭೇದಿಸಿದ ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಕ್ಕೆ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಜಿಲ್ಲೆಯ ಹುಣಸೂರು ತಾಲೂಕಿನಲ್ಲಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಲಿ ಸಂರಕ್ಷಣಾ ವಲಯದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಕಿರಾತಕರು ಹುಲಿಯೊಂದಕ್ಕೆ ಗುಂಡಿಕ್ಕಿ ಕೊಂದು ಅದರ ಹಲ್ಲು ಮತ್ತು ಕಾಲನ್ನು ಕತ್ತರಿಸಿಕೊಂಡು ಪರಾರಿಯಾಗಿದ್ದ ಘಟನೆ ನಡೆದಿತ್ತು.
ಅಭಯಾರಣ್ಯದ ಕಲ್ಲಹಳ್ಳದಲ್ಲಿ ಈ ಘಟೆನ ನಡೆದಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೇವಲ ನಾಲ್ಕು ದಿನಗಳಲ್ಲಿ ತನಿಖೆ ನಡೆಸಿ ಪ್ರಕರಣದ ಆರೋಪಿಗಳನ್ನ ಬಂಧಿಸಿದ್ದರು. ಸದ್ಯ ಇವರ ಕಾರ್ಯಕ್ಕೆ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಚಿವರು ಟ್ವೀಟ್ ಮುಖಾಂತರ ಅರಣ್ಯ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Well done ?, Forest staff & officers of Nagarhole Tiger Reserve for nabbing all the culprits responsible for poaching the Tiger, in such quick time. @moefcc https://t.co/lnakDKPEGh
— Prakash Javadekar (@PrakashJavdekar) September 6, 2020
Published On - 12:05 pm, Mon, 7 September 20