PUBG ಬ್ಯಾನ್: ಖಿನ್ನತೆಯಿಂದ ಯುವಕ ಆತ್ಮಹತ್ಯೆ
21 ವರ್ಷದ ವಿದ್ಯಾರ್ಥಿಯೊಬ್ಬ PUBG ಗೇಮ್ ಆಡಲು ಸಾಧ್ಯವಾಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ ಚಕ್ತಾಹಾ ಪೊಲೀಸ್ ಠಾಣೆ ಪ್ರದೇಶದ ಪುರ್ಬಾ ಲಾಲ್ಪುರದ ಮನೆಯಲ್ಲಿ ಐಟಿಐ ವಿದ್ಯಾರ್ಥಿ ಪ್ರೀತಮ್ ಹಾಲ್ಡರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಶುಕ್ರವಾರ ಬೆಳಿಗ್ಗೆ ಉಪಾಹಾರ ಸೇವಿಸಿದ ನಂತರ ಪ್ರೀತಮ್ ತನ್ನ ಕೋಣೆಗೆ ಹೋದ ಎಂದು ಅವರ ತಾಯಿ ರತ್ನ ತಿಳಿಸಿದ್ದಾರೆ. ನಾನು ಅವನನ್ನು ಊಟಕ್ಕೆ ಕರೆಯಲು ಹೋದಾಗ, ಅವನ ರೂಮ್ ಒಳಗಿನಿಂದ ಲಾಕ್ ಆಗಿತ್ತು. […]
21 ವರ್ಷದ ವಿದ್ಯಾರ್ಥಿಯೊಬ್ಬ PUBG ಗೇಮ್ ಆಡಲು ಸಾಧ್ಯವಾಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ
ಚಕ್ತಾಹಾ ಪೊಲೀಸ್ ಠಾಣೆ ಪ್ರದೇಶದ ಪುರ್ಬಾ ಲಾಲ್ಪುರದ ಮನೆಯಲ್ಲಿ ಐಟಿಐ ವಿದ್ಯಾರ್ಥಿ ಪ್ರೀತಮ್ ಹಾಲ್ಡರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಶುಕ್ರವಾರ ಬೆಳಿಗ್ಗೆ ಉಪಾಹಾರ ಸೇವಿಸಿದ ನಂತರ ಪ್ರೀತಮ್ ತನ್ನ ಕೋಣೆಗೆ ಹೋದ ಎಂದು ಅವರ ತಾಯಿ ರತ್ನ ತಿಳಿಸಿದ್ದಾರೆ.
ನಾನು ಅವನನ್ನು ಊಟಕ್ಕೆ ಕರೆಯಲು ಹೋದಾಗ, ಅವನ ರೂಮ್ ಒಳಗಿನಿಂದ ಲಾಕ್ ಆಗಿತ್ತು. ಅವನು ಬಾಗಿಲು ತೆರೆಯದಿದ್ದಾಗ ನೆರೆಹೊರೆಯವರನ್ನು ಕರೆದೆ, ರೂಮಿನ ಬಾಗಿಲು ಒಡೆದು ಒಳಗೆ ಹೋಗಿ ನೋಡಲಾಗಿ ಸೀಲಿಂಗ್ ಫ್ಯಾನ್‌ಗೆ ನನ್ನ ಮಗ ನೇಣು ಹಾಕಿಕೊಂಡು ಸಾವನ್ನಪ್ಪಿರುವುದು ಬೆಳಕಿಗೆ ಬಂತು ಎಂದಿದ್ದಾರೆ.
ತನ್ನ ಮಗ PUBG ಆಡಲು ಸಾಧ್ಯವಾಗದ ಕಾರಣ ನಿರಾಶೆಗೊಂಡಿದ್ದ ಎಂದು ರತ್ನ ಹೇಳಿಕೊಂಡಿದ್ದಾರೆ. ರಾತ್ರಿಯಿಡಿ PUBG ಆಡುತ್ತಿದ್ದ ನನ್ನ ಮಗನಿಗೆ, PUBG ಬ್ಯಾನ್ ಆದ ಬಳಿಕ ಅದನ್ನು ಆಡಲು ಸಾಧ್ಯವಾಗದ ಕಾರಣ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದಿದ್ದಾರೆ.