ಗಾಡಿಗೆ ಪೆಟ್ರೋಲ್ ಅಥವಾ ಡೀಸಲ್ ತುಂಬಿಸಿಕೊಳ್ಳೋಕೆ ಈ ಬಂಕ್ಗಳಿಗೆ ಹೋಗಿದ್ರಾ?
ಹೈದರಾಬಾದ್: ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪೆಟ್ರೋಲ್ ಮತ್ತು ಡೀಸೆಲ್ ಇಂಧನವನ್ನು ತುಂಬಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ತನಿಖೆ ಕೈಗೆತ್ತಿಕೊಂಡ ಬಳಿಕ ರೋಚಕ ಮಾಹಿತಿಯೊಂದು ಹೊರಬಿದ್ದಿದೆ. ಎರಡು ರಾಜ್ಯದ ಸುಮಾರು 33 ಪೆಟ್ರೋಲ್ ಬಂಕ್ಗಳಲ್ಲಿ ವಾಹನಗಳಿಗೆ ಕಡಿಮೆ ಇಂಧನ ತುಂಬಿಸಲು ಮೆಷಿನ್ನಲ್ಲಿ ಎಲೆಕ್ಟ್ರಾನಿಕ್ ಚಿಪ್ ಅಳವಡಿಸಿ ಗ್ರಾಹಕರನ್ನು ವಂಚಿಸುತ್ತಿದ್ದರು ಎಂದು ಪೊಲೀಸರಿಗೆ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇದೀಗ ಅಂತರರಾಜ್ಯ ಗ್ಯಾಂಗ್ ಒಂದನ್ನು ಬಂಧಿಸಿದ್ದಾರೆ. ಮುಖ್ಯ ಆರೋಪಿಗಳಾದ ಬಾಷಾ, […]
ಹೈದರಾಬಾದ್: ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪೆಟ್ರೋಲ್ ಮತ್ತು ಡೀಸೆಲ್ ಇಂಧನವನ್ನು ತುಂಬಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ತನಿಖೆ ಕೈಗೆತ್ತಿಕೊಂಡ ಬಳಿಕ ರೋಚಕ ಮಾಹಿತಿಯೊಂದು ಹೊರಬಿದ್ದಿದೆ.
ಎರಡು ರಾಜ್ಯದ ಸುಮಾರು 33 ಪೆಟ್ರೋಲ್ ಬಂಕ್ಗಳಲ್ಲಿ ವಾಹನಗಳಿಗೆ ಕಡಿಮೆ ಇಂಧನ ತುಂಬಿಸಲು ಮೆಷಿನ್ನಲ್ಲಿ ಎಲೆಕ್ಟ್ರಾನಿಕ್ ಚಿಪ್ ಅಳವಡಿಸಿ ಗ್ರಾಹಕರನ್ನು ವಂಚಿಸುತ್ತಿದ್ದರು ಎಂದು ಪೊಲೀಸರಿಗೆ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇದೀಗ ಅಂತರರಾಜ್ಯ ಗ್ಯಾಂಗ್ ಒಂದನ್ನು ಬಂಧಿಸಿದ್ದಾರೆ. ಮುಖ್ಯ ಆರೋಪಿಗಳಾದ ಬಾಷಾ, ಬಾಬ್ಜಿ ಬಾಬಾ, ಮದಸುಗುರಿ ಶಂಕರ್ ಮತ್ತು ಐ ಮಲ್ಲೇಶ್ವರ ರಾವ್ ಎಲ್ಲರೂ ಆಂಧ್ರಪ್ರದೇಶದ ಎಲೂರು ಪಟ್ಟಣದವರಾಗಿದ್ದಾರೆ.
ಬಂಧಿತರು ಪ್ರತಿ 1,000 ಲೀಟರ್ ಇಂಧನಕ್ಕೆ ಮೆಷಿನ್ನಿಂದ ಕೇವಲ 970 ಲೀಟರ್ ಇಂಧನ ಮಾತ್ರ ಹೊರಬರುವ ಹಾಗೆ ಎಲೆಕ್ಟ್ರಾನಿಕ್ ಚಿಪ್ ಅಳವಡಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ಇಂಧನ ಕೇಂದ್ರಗಳಲ್ಲಿ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಹಾಗೂ ಎಸ್ಸಾರ್ ಪೆಟ್ರೋಲ್ ಬಂಕ್ಗಳು ಸಹ ಇದೆ.
ಸೈಬರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನಾರ್ ಗ್ಯಾಂಗ್ ಬಂಧನದ ಕಳೆದ ಶನಿವಾರ ಸುದ್ದಿಗೋಷ್ಠಿ ನಡೆಸಿದರು. ಮ್ಯಾನಿಪ್ಯುಲೇಟೆಡ್ ಸಾಫ್ಟ್‌ವೇರ್‌ನೊಂದಿಗೆ ಪ್ರೋಗ್ರಾಮ್ ಮಾಡಲಾದ ಇಂಟಿಗ್ರೇಟೆಡ್ ಚಿಪ್ಸ್ (ಐಸಿ) ಗಳನ್ನು ಇಂಧನ ಕೇಂದ್ರದ ಮಾಲೀಕರ ಸಹಕಾರದೊಂದಿಗೆ ಈ ಗ್ಯಾಂಗ್ ಅಳವಡಿಸುತ್ತಿತ್ತು ಎಂಬ ಮಾಹಿತಿ ಸಹ ನೀಡಿದ್ದಾರೆ.
ಇದಲ್ಲದೆ, ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಸಾಥ್ ನೀಡಿದ 9 ಪೆಟ್ರೋಲ್ ಬಂಕ್ ಮಾಲೀಕರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಇತರ ಐದು ಮಾಲೀಕರು ಸದ್ಯ ಪರಾರಿಯಾಗಿದ್ದಾರಂತೆ. ಜೊತೆಗೆ, ಮುಂಬೈನ ಇಬ್ಬರು ಎಲೆಕ್ಟ್ರಾನಿಕ್ ಚಿಪ್ ಪೂರೈಕೆದಾರರಾದ ಜೋಸೆಫ್ ಮತ್ತು ಶಿಬು ಥಾಮಸ್ ಕೂಡ ಪರಾರಿಯಾಗಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.
#CYBERABADPOLICE APPREHENSION OF INTERSTATE GANG INDULGING IN CHEATING AND IRREGULARITIES IN FUEL STATIONS ACROSS THE COUNTRY.https://t.co/A4HRTTkQlY@TelanganaDGP @hydcitypolice @RachakondaCop @TelanganaCOPs pic.twitter.com/RUrd1fjmuE
— Cyberabad Police (@cyberabadpolice) September 5, 2020
Published On - 7:16 pm, Sun, 6 September 20