ಚರ್ಚ್ ಸ್ಟ್ರೀಟ್‌: ಸದ್ಯಕ್ಕೆ ವೀಕೆಂಡ್​ ವೇಳೆ ವಾಹನಗಳಲ್ಲಿ ಇಲ್ಲಿ ಯಾರೂ ಓಡಾಡಬೇಡಿ..

ಬೆಂಗಳೂರು: ಸಿಲಿಕಾನ್ ಸಿಟಿ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ, ಪೊಲ್ಯೂಶನ್​ಗೆ ಚಿರ ಪರಿಚಿತ. ಹೀಗಾಗಿ ಸರ್ಕಾರ ಕೂಡ ಹೊಸ ಹೊಸ ಯೋಜನೆಗಳಿಗೆ ಕೈ ಹಾಕುತ್ತಿರುತ್ತೆ. ಸದ್ಯ ಈಗ ವಾಯುಮಾಲಿನ್ಯ ತಡೆಗೆ ಬೆಂಗಳೂರು ಪೊಲೀಸರು ಹೊಸ ಪ್ಲ್ಯಾನ್ ರೂಪಿಸಿದ್ದಾರೆ. ಚರ್ಚ್ ಸ್ಟ್ರೀಟ್​ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲು ಮುಂದಾಗಿದ್ದಾರೆ. ಶಾಕ್ ಆಗಬೇಡಿ ಅದು ಪರ್ಮನೆಂಟ್ ಅಲ್ಲ. ಶನಿವಾರ ಮತ್ತು ಭಾನುವಾರ. ವಾರದ ಕೊನೇ 2 ದಿನ ವಾಹನ ಸಂಚಾರ ನಿರ್ಬಂಧ ಮಾಡಲು ಮುಂದಾಗಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ […]

ಚರ್ಚ್ ಸ್ಟ್ರೀಟ್‌: ಸದ್ಯಕ್ಕೆ ವೀಕೆಂಡ್​ ವೇಳೆ ವಾಹನಗಳಲ್ಲಿ ಇಲ್ಲಿ ಯಾರೂ ಓಡಾಡಬೇಡಿ..

Updated on: Nov 04, 2020 | 2:32 PM

ಬೆಂಗಳೂರು: ಸಿಲಿಕಾನ್ ಸಿಟಿ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ, ಪೊಲ್ಯೂಶನ್​ಗೆ ಚಿರ ಪರಿಚಿತ. ಹೀಗಾಗಿ ಸರ್ಕಾರ ಕೂಡ ಹೊಸ ಹೊಸ ಯೋಜನೆಗಳಿಗೆ ಕೈ ಹಾಕುತ್ತಿರುತ್ತೆ. ಸದ್ಯ ಈಗ ವಾಯುಮಾಲಿನ್ಯ ತಡೆಗೆ ಬೆಂಗಳೂರು ಪೊಲೀಸರು ಹೊಸ ಪ್ಲ್ಯಾನ್ ರೂಪಿಸಿದ್ದಾರೆ.

ಚರ್ಚ್ ಸ್ಟ್ರೀಟ್​ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲು ಮುಂದಾಗಿದ್ದಾರೆ. ಶಾಕ್ ಆಗಬೇಡಿ ಅದು ಪರ್ಮನೆಂಟ್ ಅಲ್ಲ. ಶನಿವಾರ ಮತ್ತು ಭಾನುವಾರ. ವಾರದ ಕೊನೇ 2 ದಿನ ವಾಹನ ಸಂಚಾರ ನಿರ್ಬಂಧ ಮಾಡಲು ಮುಂದಾಗಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ ನಿರ್ಬಂಧವಿರುತ್ತೆ.

2020ರ ನವೆಂಬರ್‌ನಿಂದ 2021ರ ಫೆಬ್ರವರಿವರೆಗೆ ಮಾತ್ರ ಈ ರೂಲ್ಸ್​ನ ವ್ಯಾಲಿಡಿಟಿ. ಮೊದಲು ಪ್ರಯೋಗಿಕವಾಗಿ ಚರ್ಚ್ ಸ್ಟ್ರೀಟ್‌ನಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಮಾಡಲಾಗುತ್ತೆ. ಇದು ಯಶಸ್ವಿಯಾದ್ರೆ ಮುಂದಿನ ದಿನಗಳಲ್ಲಿ ಬೇರೆಡೆ ಕೂಡ ಇದೇ ಮಾದರಿಯ ವಾಹನ ಸಂಚಾರ ನಿಷೇಧವನ್ನು ಹೇರಲಾಗುತ್ತೆ.

ಇದು ಓಪನ್ ಏರ್ ಕಾನ್ಸೆಪ್ಟ್​:
ಪ್ರಾಯೋಗಿಕವಾಗಿ ಇದನ್ನ ಫ್ರೀ ಏರ್ ಅಥವಾ ಓಪನ್ ಏರ್ ಕಾನ್ಸೆಪ್ಟ್​ನಲ್ಲಿ ಮಾಡಲಾಗ್ತಿದೆ. ಜನರು ಅದಕ್ಕೆ ಯಾವ ರೀತಿಯಾಗಿ ರೆಸ್ಪಾನ್ಸ್ ಮಾಡ್ತಾರೆ, ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನೋದನ್ನ ನೋಡಿ ಮುಂದುವರಿಸಲಾಗುತ್ತದೆ ಎಂದು ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.

Published On - 1:36 pm, Wed, 4 November 20