ವಿಜಯಪುರ: ಭೀಮಾ ತೀರದ ಹಂತಕರು ಮತ್ತೇ ಘರ್ಜಿಸಿದ್ದಾರೆ. ಹಾಗೇ ಘರ್ಜಿಸಿದ್ದ ಹಂತಕರನ್ನು ಪೊಲೀಸರು ಈಗ ಬೇಟೆಯಾಡಿದ್ದಾರೆ. ಅದ್ರಲ್ಲೂ ಕುಖ್ಯಾತ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ್ ಅವನನ್ನು ಪೊಲೀಸರು ಈಗ ಕಂಬಿ ಹಿಂದೆ ಹಾಕಿದ್ದಾರೆ.
5 ಕೋಟಿ ಹಣ ಹಾಗೂ 5 ಕೆಜಿ ಚಿನ್ನಕ್ಕೆ ಬೇಡಿಕೆ ಇಟ್ಟಿದ್ದ
ಕೆಲ ದಿನಗಳ ಹಿಂದೆ ಚಿನ್ನದ ವ್ಯಾಪಾರಿಗೆ 5 ಕೋಟಿ ಹಣ ಹಾಗೂ 5 ಕೆಜಿ ಚಿನ್ನಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿ ಭೀಮಾತೀರದ ನಟೋರಿಯಸ್ ಬಾಗಪ್ಪ ಹರಿಜನ್ ಅವನನ್ನು ಪೊಲೀಸರು ಈಗ ಅರೆಸ್ಟ್ ಮಾಡಿದ್ದಾರೆ. ಕಲಬುರ್ಗಿ ಜಿಲ್ಲೆಯ ಜೇವರ್ಗಿಯಲ್ಲಿ ಅಡಗಿದ್ದ ಬಾಗಪ್ಪ ಹರಿಜನ್ ಅವನನ್ನು ಪೊಲೀಸರು ಬಂಧಿಸಿದ್ದಾರೆ. ಜೇವರ್ಗಿಯಿಂದ ಖಾಸಗಿ ವಾಹನದಲ್ಲಿ ವಿಜಯಪುರಕ್ಕೆ ಕರೆತಂದಿರುವ ವಿಜಯಪುರ ಪೊಲೀಸರು, ಕೋವಿಡ್-19 ಟೆಸ್ಟ್ ಬಳಿಕ ಇಂಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.
A1 ಆರೋಪಿ ಲಕ್ಷ್ಮಿಕಾಂತ ಇಲ್ಲಿಯವರೆಗೂ ನಾಪತ್ತೆ
ಇಂಡಿ ಪಟ್ಟಣದ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆಗೆ ಹಣ ಮತ್ತು ಚಿನ್ನಕ್ಕೆ ಬೇಡಿಕೆ ಇಟ್ಟಿರುವ ಆರೋಪದ ದೂರು ಬಾಗಪ್ಪ ಹರಿಜನ್ ಸೇರಿ ಮೂವರ ವಿರುದ್ಧ ದಾಖಲಾಗಿತ್ತು. ಜುಲೈ 22 ರಂದು ಮೂವರು ಆರೋಪಿಗಳ ವಿರುದ್ಧ ಡಾಂಗೆ ಚಡಚಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. A1 ಆರೋಪಿ ಲಕ್ಷ್ಮಿಕಾಂತ ಇಲ್ಲಿಯವರೆಗೂ ನಾಪತ್ತೆಯಾಗಿದ್ದಾನೆ. ಮೂರನೇ ಆರೋಪಿ ಮಹಾದೇವ ಭೈರಗೊಂಡನ ಬಂಧನವಾಗಿ ಈಗ ಜಾಮೀನಿನ ಮೇಲೆ ಹೊರಬಂದಿದ್ದಾನೆ.