ರೂ 5500 ಮತ್ತು ಭ್ರಮೆಯೊಂದಿಗೆ ಮುಂಬೈಗೆ ಬಂದಿಳಿದಿದ್ದ ಇಂದಿನ ಸೂಪರ್ ಹೀರೋ ಸೋನು ಸೂದ್‌!

ಬಹುಭಾಷಾ ನಟ ಸೋನು ಸೂದ್‌ ಹೆಸರು ಈಗ ಭಾರೀ ಚಿರಪರಿಚಿತ. ಅವರೊಬ್ಬ ಕಲಾವಿದ ಮಾತ್ರವಲ್ಲ, ಹೃದಯವಂತ ಅನ್ನೋದು ಈಗ ಜಗಜ್ಜಾಹೀರಾಗಿದೆ. ಆದ್ರೆ ಬಹಳಷ್ಟು ಜನಕ್ಕೆ ಗೊತ್ತಿಲ್ಲ, ಈ ನಟ ಬಾಲಿವುಡ್‌ ಕನಸಿನೊಂದಿಗೆ ಮುಂಬೈ ನಗರಿಗೆ ಬಂದಾಗ ಕೈಯಲ್ಲಿ ಕೇವಲ 5,500 ಮತ್ತು ತಲೆಯಲ್ಲಿ ಟೊಳ್ಳು ಭ್ರಮೆ ಮಾತ್ರ ಇತ್ತು ಅಂತಾ. ಹೌದು, ಪ್ರತಿಭಾನ್ವಿತ ಬಹುಭಾಷಾ ನಟ ಸೋನು ಸೂದ್‌ ಕೊರೊನಾ ಸಂಕಷ್ಟದ ಸಮಯದಲ್ಲಿ ಇತರ ತಾರೆಗಳಂತೆ ಸೋಷಿಯಲ್‌ ಮೀಡಿಯಾದಲ್ಲಿ ತನ್ನ ವರ್ಕ್‌ಔಟ್‌, ಹೊಸ ಹೊಸ ರುಚಿಯಾದ ಅಡುಗೆ […]

ರೂ 5500 ಮತ್ತು ಭ್ರಮೆಯೊಂದಿಗೆ ಮುಂಬೈಗೆ ಬಂದಿಳಿದಿದ್ದ ಇಂದಿನ ಸೂಪರ್ ಹೀರೋ ಸೋನು ಸೂದ್‌!
Follow us
Guru
| Updated By: ಸಾಧು ಶ್ರೀನಾಥ್​

Updated on: Aug 15, 2020 | 2:10 PM

ಬಹುಭಾಷಾ ನಟ ಸೋನು ಸೂದ್‌ ಹೆಸರು ಈಗ ಭಾರೀ ಚಿರಪರಿಚಿತ. ಅವರೊಬ್ಬ ಕಲಾವಿದ ಮಾತ್ರವಲ್ಲ, ಹೃದಯವಂತ ಅನ್ನೋದು ಈಗ ಜಗಜ್ಜಾಹೀರಾಗಿದೆ. ಆದ್ರೆ ಬಹಳಷ್ಟು ಜನಕ್ಕೆ ಗೊತ್ತಿಲ್ಲ, ಈ ನಟ ಬಾಲಿವುಡ್‌ ಕನಸಿನೊಂದಿಗೆ ಮುಂಬೈ ನಗರಿಗೆ ಬಂದಾಗ ಕೈಯಲ್ಲಿ ಕೇವಲ 5,500 ಮತ್ತು ತಲೆಯಲ್ಲಿ ಟೊಳ್ಳು ಭ್ರಮೆ ಮಾತ್ರ ಇತ್ತು ಅಂತಾ.

ಹೌದು, ಪ್ರತಿಭಾನ್ವಿತ ಬಹುಭಾಷಾ ನಟ ಸೋನು ಸೂದ್‌ ಕೊರೊನಾ ಸಂಕಷ್ಟದ ಸಮಯದಲ್ಲಿ ಇತರ ತಾರೆಗಳಂತೆ ಸೋಷಿಯಲ್‌ ಮೀಡಿಯಾದಲ್ಲಿ ತನ್ನ ವರ್ಕ್‌ಔಟ್‌, ಹೊಸ ಹೊಸ ರುಚಿಯಾದ ಅಡುಗೆ ಅಥವಾ ಜಾಹೀರಾತುಗಳನ್ನು ಮಾಡಿ ವಿಡಿಯೋ ಬಿಟ್ಟು ದುಡ್ಡು ಕಮಾಯಿಸಲಿಲ್ಲ. ಆದ್ರೆ ತಾನು ಬೆವರು ಸುರಿಸಿ ಗಳಿಸಿದ ಹಣದಲ್ಲಿ ಬಡವರು, ಬಡ ಕೂಲಿ ಕಾರ್ಮಿಕರು, ವಲಸೆ ಕಾರ್ಮಿರ ನೆರವಿಗೆ ಧಾವಿಸಿದ.

ಸೋನು ಸೂದ್‌ ಅಂದ್ರೆ ಅಪ್ಪಟ ಸೋನಾ ಅಂದ್ರೆ ಚಿನ್ನ ಆದ್ರೆ ಚಿನ್ನಕಿಂತ ಚೆನ್ನ! ಇಂದಿನ ಸೂಪರ್​ ಹೀರೋ, ನಿಜವಾದ ಆಪತ್ಬಾಂಧವ ಸೋನು ಸೂದ್ ಅವರ ಕಣ್ಣೀರಿಗೆ ಸ್ಪಂದಿಸಿದ. ಹೀಗಾಗಿಯೇ ಸೋನು ಸೂದ್‌ ಅಂದ್ರೆ ಅಪ್ಪಟ ಸೋನಾ ಅಂದ್ರೆ ಚಿನ್ನ ಅಂತಾ ಈಗ ಎಲ್ಲರಿಗೂ ಗೊತ್ತಾಗಿದೆ. ಆದ್ರೆ ಇದು ಗೊತ್ತಾಗಬೇಕಾದ್ರೆ ಕೊರೊನಾ ಎಂಬ ಬೆಂಕಿಯ ಜ್ವಾಲೆಯೇ ಬರಬೇಕಾಯಿತು. ಕೊರೊನಾ ಜ್ವಾಲೆಯಲ್ಲಿ ಬಡವರ ಕಣ್ಣೀರಿಗೆ ಮಿಡಿದು, ಪುಟಕ್ಕಿಟ್ಟ ಚಿನ್ನದಂತೆ ಸೋನು ಈಗ ಕಂಗೊಳಿಸುತ್ತಿದ್ದಾನೆ.

ಆದ್ರೆ ಈ ನಟ ಆರಂಭದಲ್ಲಿ ಮುಂಬೈಗೆ ಬಂದಾಗ.. ಆದ್ರೆ ಈ ನಟ ಆರಂಭದಲ್ಲಿ ಮುಂಬೈನಲ್ಲಿ ಅವಕಾಶಕ್ಕಾಗಿ ಅಲೆದಾಡಿದ್ದು ಮಾತ್ರ ಅಷ್ಟಿಷ್ಟಲ್ಲ. ಸ್ವಂತ ಸೇವಿಂಗ್ಸ್‌ ಹಣದಲ್ಲಿ ಸ್ಟುಡಿಯೋದಿಂದ ಸ್ಟುಡಿಯೋಗೆ ಫಿಲ್ಮ್‌ ಸಿಟಿಯಲ್ಲಿ ಅಲೆದಾಡಿದ್ದಾನೆ.

ಹೀಗೆ ಸ್ಟುಡಿಯೋದಿಂದ ಸ್ಟುಡಿಯೋಗೆ ಅಲೆದಾಡಿದ್ರೆ ನಿರ್ಮಾಪಕರು ಅಥವಾ ನಿರ್ದೇಶಕರು ತನ್ನನ್ನು ಗುರುತಿಸಿ ಅವಕಾಶ ನೀಡುತ್ತಾರೆ ಅಂದುಕೊಂಡಿದ್ದನಂತೆ ಸೂದ್‌! ಆದ್ರೆ ಅದ್ಯಾವುದು ಆಗಲಿಲ್ಲ. ಬದಲು ಈತನ ಪ್ರತಿಭೆ ಗುರುತಿಸಿ ಕೈ ಬೀಸಿ ಕರೆದು ಅವಕಾಶ ನೀಡಿದ್ದು ಕಾಲಿವುಡ್‌ ಅಂದ್ರೆ ತಮಿಳು ಚಿತ್ರರಂಗ. 1999ರಲ್ಲಿ ಕಲಾಗಾರ್‌ ಚಿತ್ರದ ಮುಖಾಂತರ ಫಿಲ್ಮ್‌ಗೆ ಎಂಟ್ರಿ ಕೊಟ್ಟರು.

ಅಲ್ಲಿಂದ ಸೋನು ಸೂದ್‌ ಅವಕಾಶಗಳ ಮೇಲೆ ಅವಕಾಶಗಳನ್ನು ಪಡೆಯುತ್ತಾ ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾನೆ.

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ